More

    ಶಿರಾಡೋಣದಲ್ಲಿ ವೃದ್ಧರಿಂದ ಮನೆಯಿಂದಲೇ ಮತದಾನ

    ರೇವತಗಾಂವ: ಸಾರ್ವತ್ರಿಕ ಚುನಾವಣೆ ಅಂಗವಾಗಿ ರಾಜ್ಯದಲ್ಲಿ ಮೊದಲ ಬಾರಿಗೆ 80ವರ್ಷ ಮೇಲ್ಪಟ್ಟ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ರೇವತಗಾಂವ ಗ್ರಾಪಂ ವ್ಯಾಪ್ತಿಯ ಶಿರಾಡೋಣ ಗ್ರಾಮದಲ್ಲಿ 80ವರ್ಷ ಮೀರಿದ ಇಬ್ಬರೂ ಮತದಾರರು ವೃದ್ಧರಿಂದ ಮನೆಯಿಂದಲೇ ಮತದಾನ ಮನೆಯಲ್ಲಿಯೇ ತಮ್ಮ ಹಕ್ಕು ಚಲಾಯಿಸಿದರು.

    ಮತಗಟ್ಟೆ ಸಂಖ್ಯೆ 31ರ ಬಿಎಲ್‌ಒ ವಿಶ್ವನಾಥ ಸಾತಪುತೆ ಮಾತನಾಡಿ, 80ವರ್ಷ ಮೇಲ್ಪಟ್ಟವರು, ದಿವ್ಯಾಂಗ ಹಾಗೂ ಅಂಗವಿಕಲರಿಗೆ ಮತಗಟ್ಟೆಗಳಿಗೆ ಹೋಗಿ ಮತದಾನ ಮಾಡಲು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ, ಮನೆಯಿಂದಲೇ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಮೊದಲೆಲ್ಲ ಇವರು ಕಷ್ಟಪಟ್ಟು ಮತಗಟ್ಟೆಗೇ ಬಂದು ಮತ ಚಲಾಯಿಸಬೇಕಿತ್ತು. ಇದೀಗ ಇವರು ಮನೆಯಿಂದಲೇ ತಮ್ಮ ತಮ್ಮ ಹಕ್ಕುಗಳನ್ನು ಚಲಾಯಿಸಬಹುದಾಗಿದೆ. ಅಲ್ಲದೇ ನೋಂದಣಿ ಮಾಡಿಕೊಂಡ ಮತದಾರರ ಮನೆಗೆ ತೆರಳಿ ಮತಪತ್ರದ ಮೂಲಕ ಮತದಾನಕ್ಕೆ ಅವಕಾಶ ನೀಡುತ್ತಿರುವುದು ಅನುಕೂಲವಾಗಿದೆ ಎಂದರು.

    ಶಿರಾಡೋಣ ಗ್ರಾಮದ ಮತಕಟ್ಟೆ ಸಂಖ್ಯೆ 31ರ ಮತದಾರರಾದ 81ವರ್ಷದ ಅನಸೂಯ ಸಿದ್ದರಾಮಯ್ಯ ಉಪಾಧ್ಯಾಯ ಹಾಗೂ 93ವರ್ಷದ ಹೀರಾಬಾಯಿ ಗುಂಡಪ್ಪ ಪಾಂಡ್ರೆ ಅವರು ಮತ ಚಲಾಯಿಸಿದರು.

    ಪಿಆರ್‌ಒ ಸಿ.ಎಚ್. ಬಿರಾದಾರ, ಎಪಿಆರ್‌ಒ ಎಂ.ಎಚ್. ಬಗಲಿ, ಪ್ರಭು ಡೊಳ್ಳಿ, ಪರಮೇಶ್ವರ ಮಡಗೊಳ, ಪಿ.ಎನ್. ತಳವಾರ, ವಿಆರ್‌ಡಬ್ಲುೃ ಎಸ್.ಎಂ. ಮಾಳಿ, ಬಿಎಲ್‌ಒ ಬಿ.ಎಲ್. ವಾಳಿಖಿಂಡಿ, ವಿಜಯಕುಮಾರ ಸಾತಪುತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts