More

    ರಾಷ್ಟ್ರಪತಿ ಚುನಾವಣೆ: ಬೆಂಗಳೂರಲ್ಲಿ ಮತ ಚಲಾವಣೆ ಮುಕ್ತಾಯ, ವಿಮಾನದಲ್ಲಿ ದೆಹಲಿಗೆ ತಲುಪಲಿದೆ ಮತಪೆಟ್ಟಿಗೆ..

    ಬೆಂಗಳೂರು: ರಾಷ್ಟ್ರಪತಿ ಆಯ್ಕೆ ಸಲುವಾಗಿ ನಡೆದ ಚುನಾವಣೆಗೆ ಬೆಂಗಳೂರಿನ ವಿಧಾನಸೌಧದಲ್ಲಿ ಶಾಸಕರು ಹಾಗೂ ಸಂಸದರಿಂದ ಮತ ಚಲಾವಣೆ ನಡೆಯಿತು.

    ರಾಜ್ಯದ 224 ಶಾಸಕರು ಹಾಗೂ ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯರೂ ಆಗಿರುವ ಎಚ್​.ಡಿ. ದೇವೇಗೌಡ ಮತ್ತು ಲೋಕಸಭಾ ಸದಸ್ಯ ಶ್ರೀನಿವಾಸಪ್ರಸಾದ್ ಅವರು ಮತ ಚಲಾಯಿಸಿದರು. ಸಂಸದರು ಮತ ಚಲಾವಣೆ.

    ಸಂಜೆ ಐದರ ವರೆಗೂ ಮತ ಚಲಾಯಿಸಲು ಕಾಲಾವಕಾಶ ಇದ್ದಿದ್ದರೂ ಸಂಜೆ 4ರ‌ ವೇಳೆಗೆ ಎಲ್ಲ ಶಾಸಕರು ಹಾಗೂ ಇಬ್ಬರು ಸಂಸದರು ತಮ್ಮ ಹಕ್ಕು ಚಲಾಯಿಸಿದರು. ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮೊದಲು ಮತ ಚಲಾಯಿಸಿದರೆ, ಕೊನೆಯದಾಗಿ ಕಾಂಗ್ರೆಸ್ ನ ಎಚ್.ಪಿ.ಮಂಜುನಾಥ ಮತದಾನ‌ ಮಾಡಿದರು.

    ಸೀಲ್​ ಮಾಡಿ, ಪ್ಯಾಕ್​ ಮಾಡಿದ ಮತಪೆಟ್ಟಿಗೆಯನ್ನು‌ ಬಿಗಿ ಪೊಲೀಸ್ ಭದ್ರತೆಯಲ್ಲಿ ರಾತ್ರಿ 7ಕ್ಕೆ ವಿಮಾನನಿಲ್ದಾಣಕ್ಕೆ ಕೊಂಡೊಯ್ಯಲಾಗುತ್ತದೆ. ರಾತ್ರಿ‌ 9.20ರ ವಿಮಾನದಲ್ಲಿ ಮತಪೆಟ್ಟಿಗೆಗೆಂದೇ ಪ್ರತ್ಯೇಕ ಟಿಕೆಟ್ ಪಡೆಯಲಾಗಿದೆ. ಇಬ್ಬರು ಅಧಿಕಾರಿಗಳು ಈ ಮತಪೆಟ್ಟಿಗೆ ಜತೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

    ರಾಷ್ಟ್ರಪತಿ ಚುನಾವಣೆ: ಬೆಂಗಳೂರಲ್ಲಿ ಮತ ಚಲಾವಣೆ ಮುಕ್ತಾಯ, ವಿಮಾನದಲ್ಲಿ ದೆಹಲಿಗೆ ತಲುಪಲಿದೆ ಮತಪೆಟ್ಟಿಗೆ..
    ನಿಗದಿತ ಅವಧಿಗೆ ಒಂದು ತಾಸಿಗೆ ಮುಂಚೆ ಎಲ್ಲ ಸದಸ್ಯರು ಮತ ಚಲಾಯಿಸಿದ್ದರಿಂದ ವಿಧಾನಸೌಧದ ಮತದಾನ ಕೇಂದ್ರಕ್ಕೆ ಹೋಗುವ ದಾರಿ ಖಾಲಿಖಾಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts