More

    ನಿರ್ಭಯವಾಗಿ ಮತದಾನ ಮಾಡಿ

    ಅಳವಂಡಿ: ಮತದಾರರರು ಯಾವುದೇ ಆಮಿಷಗಳಿಗೆ ಒಳಗಾಗದೆ ನಿರ್ಭಯದಿಂದ ಅರ್ಹರಿಗೆ ಹಕ್ಕು ಚಲಾಯಿಸುವಂತೆ ಕೊಪ್ಪಳ ಸಿಪಿಐ ಮಹಾಂತೇಶ ಸಜ್ಜನ ಹೇಳಿದರು.

    ಗ್ರಾಮದಲ್ಲಿ ಶನಿವಾರ ಪೊಲೀಸರು ಹಾಗೂ ಐಟಿಬಿಪಿ ಯೋಧರಿಂದ ಹಮ್ಮಿಕೊಂಡದ್ದ ಜಾಗೃತಿ ಪಥಸಂಚಲನದಲ್ಲಿ ಮಾತನಾಡಿದರು. ಪ್ರಜಾಪ್ರಭುತ್ವ ಬಲಗೊಳಿಸಲು ಪ್ರತಿಯೊಬ್ಬರೂ ಮತದಾನ ಮಾಡಬೇಕು. ಮತದಾನಕ್ಕೆ ದೇಶವನ್ನು ನಡೆಸುವ ಶಕ್ತಿ ಇದೆ. ಕಾರಣ ಅಮೂಲ್ಯ ಮತವನ್ನು ಹಣಕ್ಕೆ ಮಾರಿಕೊಳ್ಳಬೇಡಿ.

    1950 ಸಂಖ್ಯೆಗೆ ಕರೆ ಮಾಡಿ

    ಚುನಾವಣೆಯಲ್ಲಿ ಯಾವುದೇ ಅಕ್ರಮ ಕಂಡುಬಂದಲ್ಲಿ 1950 ಸಂಖ್ಯೆಗೆ ಕರೆ ಮಾಡಿ. ರಾಜಕೀಯ ಪ್ರೇರಿತ ಗಲಾಟೆಗೆ ಅವಕಾಶ ಕೊಡಬೇಡಿ. ಹಕ್ಕು ಚಲಾವಣೆಗೆ ಯಾರಾದರೂ ಅಡ್ಡಿಪಡಿಸಿದರೆ ಅವರ ವಿರುದ್ಧ ಪ್ರಕರಣ ದಾಖಲಾಗಿಸುವುದಾಗಿ ತಿಳಿಸಿದರು.

    ಗ್ರಾಮಕ್ಕೆ ಯೋಧರು ಪ್ರವೇಶಿಸುತ್ತಿದ್ದಂತೆ ಮಹಿಳೆಯರು ಕಳಸ ಬೆಳೆಗಿ-ಪುಷ್ಪಾವೃಷ್ಟಿಯೊಂದಿಗೆ ಸ್ವಾಗತಿಸಲಾಯಿತು. ಬಳಿಕ ಕವಲೂರು, ಹಟ್ಟಿ, ಬೆಟಗೇರಿ, ಹಿರೇಸಿಂದೋಗಿ ಗ್ರಾಮಗಳಲ್ಲೂ ಪಥಸಂಚಲನ ನಡೆಸಲಾಯಿತು. ಐಟಿಬಿಪಿಯ ವಿನೋದಕುಮಾರ, ಪಿಎಸ್‌ಐಗಳಾದ ಹನುಮಂತಪ್ಪ ನಾಯಕ, ಪೀರಪ್ಪ ನಾಯಕ, ಕಾಸಿಂಸಾಬ್ ಇತರರಿದ್ದರು.

    ಇದನ್ನೂ ಓದಿ..ಕರ್ನಾಟಕ ಚುನಾವಣೆ-2023: ಚುನಾವಣಾಪೂರ್ವ ಸಮೀಕ್ಷೆಗಳು ಪ್ರಕಟ; ಯಾರಿಗೆ ಎಷ್ಟು? ಇಲ್ಲಿದೆ ಪೂರ್ತಿ ವಿವರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts