More

    ಮದುವೆ ಆಮಂತ್ರಣದಲ್ಲಿ ಮತದಾನ ಜಾಗೃತಿ

    ರಾಯಚೂರು: ಮತದಾನ ಮಗಳಿದ್ದಂತೆ. ಅದನ್ನು ಹಣಕ್ಕಾಗಿ ಮಾರಿಕೊಳ್ಳಬೇಡಿ ಎನ್ನುವ ಸಂದೇಶವನ್ನು ಮದುವೆ ಆಮಂತ್ರಣದಲ್ಲಿ ಮುದ್ರಿಸುವ ಮೂಲಕ ಮಾನ್ವಿ ತಾಲೂಕು ಅರೋಲಿ ಗ್ರಾಮದ ದೊಡ್ಡಮನೆ ಕುಟುಂಬ ಮತದಾನ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಿದೆ.
    ಪ್ರತಿ ಚುನಾವಣೆ ಸಂದರ್ಭದಲ್ಲಿ ಜಿಲ್ಲಾಡಳಿತ ಮತದಾನ ಪ್ರಮಾಣ ಹೆಚ್ಚಳಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬರುತ್ತಿದೆ. ಲೋಕಸಭೆ ಚುನಾವಣೆಯಲ್ಲಿಯೂ ಮತದಾನ ಪ್ರಮಾಣ ಕಡಿಮೆಯಿರುವ ಬೂತ್‌ಗಳನ್ನು ಗುರುತಿಸಿ ಅಲ್ಲಿ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
    ಕೇವಲ ಜಿಲ್ಲಾಡಳಿತದ ಪ್ರಯತ್ನದಿಂದ ಮಾತ್ರ ಮತದಾನ ಪ್ರಮಾಣ ಹೆಚ್ಚಳ ಸಾಧ್ಯವಿಲ್ಲ. ಜತೆಗೆ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ದೊಡ್ಡಮನೆ ಕುಟುಂಬ ಮದುವೆ ಆಮಂತ್ರಣದಲ್ಲಿ ಮತದಾನದ ಮಹತ್ವವನ್ನು ಜನರಿಗೆ ತಿಳಿಸಲು ಮುಂದಾಗಿದೆ.
    ಅರೋಲಿ ಗ್ರಾಮದ ದೊಡ್ಡಮನೆ ಕುಟುಂಬದ ಚನ್ನಬಸವ ಹಾಗೂ ಪಲ್ಲವಿ ಮದುವೆಯ ಆಮಂತ್ರಣ ಪತ್ರಿಕೆ ಕವರ್ ಮೇಲೆ ಮತದಾನ ನಿಮ್ಮ ಮಗಳಿದ್ದಂತೆ, ಹಣಕ್ಕಾಗಿ ಅವಳನ್ನು (ಮತವನ್ನು) ಮಾರಿಕೊಳ್ಳಬೇಡಿ. ಜಾಗ್ರತೆಯಿಂದ ಮತ ಚಲಾಯಿಸಿ ಎನ್ನುವ ವಾಕ್ಯವನ್ನು ಮುದ್ರಿಸುವ ಮೂಲಕ ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗಿದೆ.
    ದೊಡ್ಡಮನೆ ಕುಟುಂಬದ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ಕೆ ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ ತಮ್ಮ ೇಸ್‌ಬುಕ್ ಅಕೌಂಟ್‌ನಲ್ಲಿ ಪ್ರಶಂಸೆ ವ್ಯಕ್ತಪಡಿಸುವ ಮೂಲಕ ಸಾರ್ವಜನಿಕರು ಲೋಕಸಭೆ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts