More

    ಲೋಕಸಭೆ ಚುನಾವಣೆಯಲ್ಲಿ ಮತದಾರರು ಅಶೀರ್ವಾದಿಸಿ

    ಕೋಲಾರ: ಕೋಲಾರ ಮೀಸಲು ಲೋಕಸಭೆ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕೆಆರ್​ಎಸ್​ ಪಕ್ಷದ ರಾಜ್ಯಾಧ್ಯಕ್ಷರು ಘೋಷಣೆ ಮಾಡಿದ್ದು, ಕ್ಷೇತ್ರದ ಮತದಾರರು ಅಶೀರ್ವಾದ ಮಾಡಬೇಕು ಎಂದು ಕೆಆರ್​ಎಸ್​ ಜಿಲ್ಲಾಧ್ಯಕ್ಷ ಹಾಗೂ ಅಭ್ಯರ್ಥಿ ಮಹೇಶ್​ ಕೋರಿದರು.

    ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾ.28ರಂದು ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸಿ, ಪ್ರಚಾರದಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದು ಹೇಳಿದರು.
    ಜೆಸಿಬಿ ಪಕ್ಷಗಳು ರಾಜಕೀಯ ವ್ಯವಸ್ಥೆಯನ್ನು ಹದಗೆಡಿಸಿವೆ, ಚುನಾವಣೆಯಗಳಲ್ಲಿ ಹಣ ಹೊಳೆ ಹರಿಸಿ ಭ್ರಷ್ಟಚಾರದಲ್ಲಿ ತೆಲಾಡುತ್ತಿದ್ದು, ಜನರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಸರ್ಕಾರಗಳು ಸಂಪೂರ್ಣವಾಗಿ ವಿಲರಾಗಿವೆ. ಜೆಸಿಬಿ ಪಕ್ಷಗಳು ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ಸ್ವಹಿತಾಸಕ್ತಿಗೋಸ್ಕರ ಜನರ ಸಮಸ್ಯೆಗಳನ್ನು ಮರೆತಿವೆ. ಚುನಾವಣೆಗಳಲ್ಲಿ ಹಾಕಿರುವ ಬಂಡವಾಳವನ್ನು ಸಂಪಾದನೆ ಮಾಡಲು ಭದ್ರಚಾರದ ಹಾದಿ ಹಿಡಿದಿವೆ ಎಂದು ದೂರಿದರು.
    ದೇಶದ ಪ್ರಧಾನಿ ಕೇವಲ ವಿದೇಶಗಳ ಪ್ರವಾಸ ಮಾಡಿಕೊಂಡು ಕಾಲಹರಣ ಮಾಡಿದ್ದಾರೆ. ಎರಡು ಅವಧಿಯಲ್ಲಿ ಅವರು ಮಾಡಿರುವ ಸಾಧನೆಗಳ ಬಗ್ಗೆ ಜನತೆಗೆ ಅರಿವಿದೆ. ಬಂಡವಾಳಶಾಹಿಗಳನ್ನು ಉದ್ದಾರ ಮಾಡುವ ನಿಟ್ಟಿನಲ್ಲಿ ನೀತಿಗಳನ್ನು ಜಾರಿಗೆ ತಂದರು. ಆದರೆ ರೈತರ, ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಿಲ್ಲ, ಯುವಕರಿಗೆ ಉದ್ಯೋಗ ನೀಡಿಲ್ಲ, ಈ ಎಲ್ಲದರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವ್ಯವಸ್ಥೆ ಬದಲಾಗಬೇಕಾಗಿದೆ, ಇದಕ್ಕಾಗಿ ಕೆಆರ್​ಎಸ್​ ಪಕ್ಷವು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿದೆ ಎಂದು ಹೇಳಿದರು.
    ಉತ್ತಮ ರಾಜಕೀಯ ವ್ಯವಸ್ಥೆ ನಿಮಾರ್ಣಕ್ಕಾಗಿ ಭ್ರಷ್ಟಾಚಾರ ವಿರುದ್ಧ ಕೆಆರ್​ಎಸ್​ ಪಕ್ಷ$ವು ನಿರಂತರ ಹೋರಾಟ ನಡೆಸಿಕೊಂಡು ಬರುತ್ತಿದೆ. ರಾಜ್ಯದಲ್ಲಿ ಬಹುತೇಕ ಖಾಸಗಿ ಮೆಡಿಕಲ್​ ಕಾಲೇಜುಗಳು ರಾಜಕೀಯ ನಾಯಕರ ಮಾಲೀಕತ್ವದಲ್ಲಿ ಕಾರ್ಯನಿರ್ವಹಿಸುತ್ತಿವೆ, ಸರ್ಕಾರಿ ಮೆಡಿಕಲ್​ ಕಾಲೇಜಿಗೆ ಅನುಮತಿ ನೀಡಿದರೆ ದಾಖಲಾತಿ ಕುಗ್ಗುತ್ತದೆ ಎಂದು ಆತಂಕದಿಂದ ಜಿಲ್ಲೆಗೆ ಸರ್ಕಾರಿ ಮೆಡಿಕೆಲ್​ ಕಾಲೇಜು ಮಂಜೂರು ಮಾಡಲು ರ್ನಿಲಕ್ಷ ತೋರುತ್ತಿವೆ ಎಂದು ದೂರಿದರು.
    ಯುವ ಘಟಕ ಕಾರ್ಯದರ್ಶಿ ವೆಂಕಟೇಶ್​ ಮಾತನಾಡಿ, ಕೆಆರ್​ಎಸ್​ ಪಕ್ಷ ರಚನೆಯಾದಾಗಿನಿಂದ ಭ್ರಷ್ಟಚಾರದ ವಿರುದ್ಧ ಹೋರಾಟ ನಡೆಸಿಕೊಂಡು ಬರುತ್ತಿದೆ. ಜಿಲ್ಲೆಯ 5 ವಿಧಾನಸಭೆ ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿತ್ತು. ಅದೇ ರೀತಿ ಲೋಕಸಭೆ ಚುನಾವಣೆಯ ಕೆಆರ್​ಎಸ್​ ಅಭ್ಯರ್ಥಿಯಾಗಿ ಮಹೇಶ್​ ಅವರನ್ನು ರಾಜ್ಯ ನಾಯಕರು ಘೋಷಣೆ ಮಾಡಿದ್ದು, ಮತದಾರರು ಬೆಂಬಲ ನೀಡಬೇಕು ಎಂದು ಕೋರಿದರು.
    ಗಂಭೀರ ಕಾಯಿಲೆಗೆ ಉನ್ನತಮಟ್ಟದ ಚಿಕಿತ್ಸೆ ಪಡೆಯಲು ಸಾರ್ವಜನಿಕರು ಬೆಂಗಳೂರಿಗೆ ಹೋಗಬೇಕಾಗಿದೆ. ಜಿಲ್ಲೆಯಲ್ಲಿನ ಸರ್ಕಾರಿ ಅಸ್ಪತ್ರೆಗಳು ಅವ್ಯವಸ್ಥೆಯ ಕೂಪಗಳಾಗಿವೆ. ಸರ್ಕಾರಿ ಶಾಲೆಗಳು ನೆನೆಗುದಿಗೆ ಬಿದಿವೆ, ಮೂಲಭೂತ ಸೌಳಭ್ಯಗಳು ಇಲ್ಲದೆ ಸೋರಗುತ್ತಿವೆ. ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರಗಳಯ ವಿಫಲವಾಗಿವೆ, ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ದೊರಕಿಸದೆ ರೈತರನ್ನು ನಿರಂತರವಾಗಿ ವಂಚಿಸುತ್ತಿದ್ದಾರೆ, ರೈತರು ಇನ್ನಾದರು ಎಚ್ಚೆತ್ತುಕೊಂಡು ಬದಲಾವಣೆ ಬಯಸಬೇಕು ಎಂದು ಎಚ್ಚರಿಸಿದರು.
    ಪತ್ರಿಕಾಗೋಷ್ಠಿಯಲ್ಲಿ ಕೆಆರ್​ಎಸ್​ ಜಿಲ್ಲಾ ಕಾರ್ಯದರ್ಶಿ ನಾಗರಾಜ್​, ಉಪಾಧ್ಯಕ್ಷ ರಾಜು, ಪ್ರಧಾನ ಕಾರ್ಯದರ್ಶಿ ಜಿ.ಕೆ.ಆನಂದ್​ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts