More

    ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯಲ್ಲಿ ಬೇಜವಾಬ್ದಾರಿ ಬೇಡ: ವೈಶಾಲಿ.ಎಂ.ಎಲ್.

    ಗದಗ: ವಿಧಾನ ಸಭಾ ಕ್ಷೇತ್ರದ ನಿಯೋಜಿತ ಬಿ.ಎಲ್.ಓ ಹಾಗೂ ಮೇಲ್ವಿಚಾರಕರು ಮತದಾರರ ಪಟ್ಟಿಯ ವಿಶೇಷ ಪರಿಷ್ಕರೆಣೆ ಮತ್ತು ಚುನಾವಣಾ ಕರ್ತವ್ಯದಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಬೇಜವಾಬ್ದಾರಿಯಿಂದ ವರ್ತಿಸಿದಲ್ಲಿ ಶಿಸ್ತು ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ವೈಶಾಲಿ ಎಂ.ಎಲ್.ಅವರು ಸೂಚಿಸಿದರು.

    ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ 66-ಗದಗ ವಿಧಾನ ಸಭಾ ಮತ ಕ್ಷೇತ್ರದ ಎಲ್ಲ ಬಿ.ಎಲ್.ಓ ಹಾಗೂ ಮೇಲ್ವಿಚಾರಕರಿಗೆ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಕುರಿತಂತೆ ಜರುಗಿದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯವು ಎಲ್ಲ ಬಿ.ಎಲ್.ಓ ಗಳ ಉತ್ತಮ ಕಾರ್ಯನಿರ್ವಹಣೆಯಿಂದ ಪೂರ್ಣಗೊಳ್ಳಬೇಕು. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಲೋಪಗಳಿಗೆ ಆಸ್ಪದ ನೀಡದೆ ಸರಿಯಾಗಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಮಾಡಬೇಕೆಂದು ತಿಳಿಸಿದರು.

    ಮತದಾರರು ಮರಣ ಹೊಂದಿದಲ್ಲಿ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಲು, ಮತದಾರರ ಪಟ್ಟಿಯಲ್ಲಿರುವ ದೋಷಗಳನ್ನು ಸರಿಪಡಿಸಲು ನಮೂನೆ 8 ರಲ್ಲಿ ಅರ್ಜಿ ಸ್ವೀಕರಿಸಿ ಸರಿಪಡಿಸಬೇಕು. ದೋಷಮುಕ್ತ ಮತದಾರರ ಪಟ್ಟಿ ಸಿದ್ಧವಾಗುವಲ್ಲಿ ಬಿ.ಎಲ್.ಓ.ಗಳ ಪಾತ್ರ ಪ್ರಮುಖವಾಗಿದೆ. 18 ವರ್ಷ ವಯೋಮಾನ ಪೂರ್ಣಗೊಳಿಸಿದ ಪ್ರತಿಯೊಬ್ಬ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು. ಬಿ.ಎಲ್.ಓ. ಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಅತ್ಯಂತ ಜಾಗರೂಕತೆಯಿಂದ ಮಾಡುವ ಮೂಲಕ ಚುನಾವಣಾ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದರು.

    ಬಿ.ಎಲ್.ಓ.ಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಪ್ರತಿ ಮತದಾರರ ಮನೆಗಳಿಗೂ ಖುದ್ದಾಗಿ ತೆರಳಿ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ವ್ಯಕ್ತಿ ವಾಸಿಸುವ ಬಗ್ಗೆ ಖಚತಿ ಪಡಿಸಿಕೊಳ್ಳಬೇಕು. ಬೇರೆಡೆಯಿಂದ ಬಂದು ವಾಸಿಸುವವರ ಹೆಸರು ನಮೂನೆ 6 ರಲ್ಲಿ ಅರ್ಜಿ ಸ್ವೀಕರಿಸಿ ನೋಂದಾಯಿಸಿಕೊಳ್ಳಬೇಕು. ಮತದಾರರ ಪಟ್ಟಿ ವಿಶೇಷ ಪರಿಷ್ಕರೆಣೆ ಕಾರ್ಯವು ವಿಳಂಭ ಮಾಡದೇ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ವೈಶಾಲಿ.ಎಂ.ಎಲ್. ಹೇಳಿದರು.

    ಬಿ.ಎಲ್.ಓ. ಹಾಗೂ ಮೇಲ್ವಿಚಾರಕರಿಗೆ ಜರುಗಿದ ತರಬೇರಿ ಸಂಧರ್ಭದಲ್ಲಿ ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯ್ಕ, ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಶಿರೇಸ್ತೇದಾರ ಬಿ.ಎಸ್.ಕನ್ನೂರ, ಸೇರಿದಂತೆ ಗದಗ ವಿಧಾನ ಸಭಾ ಕ್ಷೇತ್ರದ ಬಿ.ಎಲ್.ಓ. ಹಾಗೂ ಮೇಲ್ಚಿವಾರಕರು  ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts