More

    ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೊಸಬರಿಗೆ ಮತದಾರರ ಆಶೀರ್ವಾದ

    ಶಿರಸಿ: ತಾಲೂಕಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಾಗಿ ಹೊಸ ಮುಖಗಳು ಆಯ್ಕೆಯಾಗಿದ್ದು, ಮೇಲ್ನೋಟಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ. 32 ಗ್ರಾಮ ಪಂಚಾಯಿತಿಗಳ 290 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶೇ. 50ಕ್ಕೂ ಹೆಚ್ಚು ಹೊಸ ಮುಖಗಳು ಆಯ್ಕೆಯಾಗಿವೆ. ಕಣದಲ್ಲಿದ್ದ 857 ಅಭ್ಯರ್ಥಿಗಳ ಭವಿಷ್ಯವಾದ ಮತಪೆಟ್ಟಿಗೆಯನ್ನು ಬುಧವಾರ ತೆರೆದು ಅಭ್ಯರ್ಥಿಗಳ ಗೆಲುವನ್ನು ದೃಢೀಕರಿಸಲಾಯಿತು.

    ಇಟಗುಳಿ (ಕ್ಷೇತ್ರಗಳು-7): ರಂಜನಾ ಹೆಗಡೆ, ರವಿಚಂದ್ರ ನಾಯ್ಕ, ಗೀತಾ ಭೋವಿ, ಶ್ರೀಪತಿ ಹೆಗಡೆ, ಶ್ರೀಕಲಾ ನಾಯ್ಕ, ರಮೇಶ ನಾಯ್ಕ, ರುದ್ರಮ್ಮ ಓಲೇಕಾರ.

    ಕೊಡ್ನಗದ್ದೆ (7): ನಾಗರತ್ನಾ ಭೋವಿ, ಪ್ರವೀಣ ಹೆಗಡೆ, ದೇವಕಿ ಸಿದ್ದಿ, ಸರಿತಾ ನಾಯ್ಕ, ರಾಘವೇಂದ್ರ ಹೆಗಡೆ, ಸತ್ಯನಾರಾಯಣ ಹೆಗಡೆ, ರಾಜೇಶ್ವರಿ ಭಟ್ಟ.

    ವಾನಳ್ಳಿ (7): ಹರ್ಷ ಹೆಗಡೆ, ಅನುರಾಧಾ ಹೆಗಡೆ, ವೀಣಾ ಗೌಡ, ಜಯರಾಮ ಹೆಗಡೆ, ಮಂಜಿ ಭೋವಿ, ಗೀತಾ ಸಿದ್ದಿ, ಉಮಾಮಹೇಶ್ವರ ಭಟ್ಟ.

    ಸೋಂದಾ (8): ಭಾರತಿ ಚನ್ನಯ್ಯ, ಗಜಾನನ ನಾಯ್ಕ, ಮಂಜುನಾಥ ಭಂಡಾರಿ, ಕುಮದ್ವತಿ ಗುಡಿಗಾರ, ರಾಮಚಂದ್ರ ಹೆಗಡೆ, ಮಮತಾ ಜೈನ್, ಭಾರತಿ ಚನ್ನಯ್ಯ, ನಾಗರಾಜ ಪೂಜಾರಿ.

    ಸಾಲ್ಕಣಿ (9): ಗಜಾನನ ನಾಯ್ಕ, ಸುಮಾ ಹೆಗಡೆ, ತಿಮ್ಮಯ್ಯ ಹೆಗಡೆ, ಅನಸೂಯಾ ಹೆಗಡೆ, ರಂಜನ ಚನ್ನಯ್ಯ, ಭಾರತಿ ಗೌಡ, ಶ್ರೀಧರ ಹೆಗಡೆ, ಮಂಗಲಾ ಮುಕ್ರಿ, ವೆಂಕಟರಮಣ ಗೌಡ.

    ಭೈರುಂಬೆ (8): ಕಿರಣ ಭಟ್, ನಾಗಪ್ಪ ಪಟಗಾರ, ಸವಿತಾ ಪಟಗಾರ, ನಾಗರತ್ನಾ ಚಲವಾದಿ, ರಾಘವೇಂದ್ರ ನಾಯ್ಕ, ಅಜಿತಾ ಗೌಡ, ಸುನಂದಾ ತಳವಾರ, ಪ್ರಕಾಶ ಹೆಗಡೆ.

    ಶಿವಳ್ಳಿ -ಹೆಗಡೆಕಟ್ಟಾ (10): ಶಶಿಕಲಾ ನಾಯ್ಕ, ಯಶೋದಾ ಗೌಡ, ಅನಂತ ಹೆಗಡೆ, ವೀಣಾ ಭಟ್ಟ, ರೇಣುಕಾ ಹರಿಜನ, ಅಂತೋನಿ ರೊಡ್ರಗಿಸ್, ವೆಂಕಟರಮಣ ಮರಾಠಿ, ಶಕುಂತಲಾ ಹರಿಜನ, ನೀಲಕಂಠ ನಾಯ್ಕ, ಮಂಜುನಾಥ ಹೆಗಡೆ.

    ಹುಣಸೆಕೊಪ್ಪ (8): ರಾಧಾ ಹರಿಜನ, ರಜನಿ ಹೆಗಡೆ, ಈರವ್ವ ಭೋವಿವಡ್ಡರ, ಪುರುಷೋತ್ತಮ ಕಲ್ಮನೆ, ಗಣೇಶ ಹೆಗಡೆ, ಮಂಜುನಾಥ ಹೆಗಡೆ, ಹೇಮಾವತಿ ಗೌಡ, ಪ್ರಶಾಂತ ಗೌಡ.

    ಯಡಳ್ಳಿ (9): ಕೇಶವ ಹೆಗಡೆ, ರಾಜೇಶ್ವರಿ ಗೌಡ, ಭಾರತಿ ಹೆಗಡೆ, ಶ್ಯಾಮಲಾ ಹೆಗಡೆ, ಮಧುಕರ ಶೇಟ್, ರವೀಶ ಹೆಗಡೆ.

    ಕುಳವೆ(8): ಜಾನಕಿ ಹಸ್ಲರ್, ಸಂದೇಶ ಭಟ್ಟ, ದೇವಿ ಹರಿಜನ, ಗಂಗಾಧರ ನಾಯ್ಕ, ಶ್ರೀನಾಥ ಶೆಟ್ಟಿ, ಜ್ಯೋತಿ ನಾಯ್ಕ, ವಿನಯ ಭಟ್ಟ, ರಂಜಿತಾ ಹೆಗಡೆ.

    ಬಂಕನಾಳ(10): ಡಿ. ಶಶಿಕುಮಾರ, ಕೆರಿಯಾ ಗೌಡ, ರೇಣುಕಾ ವಡ್ಡರ, ರತ್ನವ್ವ ವಡ್ಡರ, ಸುಜಾತಾ ನಾಯ್ಕ, ಹರೀಶ ನಾಯ್ಕ, ವೀಣಾ ನಾಯ್ಕ, ಗಿರಿಜಮ್ಮ ಕೊರಗರ, ಮಧುಕೇಶ್ವರ ನಾಯ್ಕ, ಮೈನಾವತಿ ನಾಯ್ಕ.

    ಗುಡ್ನಾಪುರ (13): ನಿರ್ಮಲಾ ನಾಯ್ಕ, ರಾಘವೇಂದ್ರ ನಾಯ್ಕ, ಜ್ಯೋತಿ ನಾಯ್ಕ, ಮಂಜುನಾಥ ಚನ್ನಯ್ಯ, ಶಿವಶಂಕರ ಗೌಡ, ಚನ್ನಮ್ಮ ಚನ್ನಯ್ಯ, ಸತೀಶ ಗೌಡ, ಶಿಲ್ಪಾ ನಾಯ್ಕ, ಗೌರಿ ಗಾಣಿಗ, ಪ್ರಕಾಶ ಜಿ.ಎಂ., ಗುತ್ಯಮ್ಮ ವಾಲ್ಮೀಕಿ.

    ಜಾನ್ಮನೆ (9): ಸುಶೀಲಾ ಮುಕ್ರಿ, ರಘುಪತಿ ಭಟ್ಟ, ಶೋಭಾ ಭಟ್ಟ, ರೇಖಾ ನಾಯ್ಕ, ಶಂಕರ ಗೌಡ, ಅಬ್ದುಲ್ ಖರೀಂ, ನೇಹಾ ಭಾನು ಸಾಬ್, ಶೈಲಶ್ರೀ ತಳವಾರ, ಸಂದೀಪ ನಾಯ್ಕ.

    ಬೆಂಬಲಿಗರ ಸಂಭ್ರಮ: ಎಣಿಕೆ ಕೇಂದ್ರದ ಒಳಗಡೆ ಅಭ್ಯರ್ಥಿಗಳ ಗೆಲುವು ಘೊಷಣೆ ಆಗುತ್ತಿದ್ದಂತೆ ಕೇಂದ್ರದ ಹೊರಗಡೆ ಜಮಾಯಿಸಿದ್ದ ಸಾವಿರಾರು ಬೆಂಬಲಿಗರು ಗೆಲುವಿನ ಸಂಭ್ರಮ ಆಚರಿಸಿದರು. ಗೆದ್ದ ಅಭ್ಯರ್ಥಿ ಹೊರಬರುತ್ತಿದ್ದಂತೆ ಹಾರ ಹಾಕಿ, ಸಿಹಿ ತಿನಿಸಿ ಸಂಭ್ರಮಿಸಿದರು. ಇವರಿಗೆ ರಾಜಕೀಯ ಪಕ್ಷಗಳ ಕಾರ್ಯಕರ್ತರೂ ಸಾಥ್ ನೀಡಿದರು.

    ಒಂದು ಮತದಿಂದ ಗೆಲುವು: ವಾನಳ್ಳಿ ಗ್ರಾಮ ಪಂಚಾಯಿತಿಯ ಗೊಣಸರ ವಾರ್ಡ್​ನಲ್ಲಿ ವೀಣಾ ಗೌಡ ಕೇವಲ 1 ಮತದ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. ಮೊದಲ ಎಣಿಕೆಯಲ್ಲಿ ಇಬ್ಬರಿಗೂ ತಲಾ 127 ಮತಗಳು ಬಂದ ಕಾರಣ ಮರು ಎಣಿಕೆ ನಡೆಸಲಾಯಿತು. ಈ ವೇಳೆ ಪ್ರತಿಸ್ಪರ್ಧಿ ಪಾರ್ವತಿ ಗೌಡ ಅವರಿಗೆ 127 ಮತಗಳು ಬಂದರೆ ವೀಣಾ ಗೌಡ 128 ಮತ ಪಡೆದು ಜಯಭೇರಿ ಬಾರಿಸಿದರು. ಗುಡ್ನಾಪುರ ಪಂಚಾಯಿತಿಯ ಕಂತ್ರಾಜಿ ವಾರ್ಡ್​ನಿಂದ ಸ್ಪರ್ಧಿಸಿದ್ದ ಶಿವಶಂಕರ ಗೌಡ 222 ಮತಗಳನ್ನು ಪಡೆದು ಪ್ರತಿಸ್ಪರ್ಧಿ ವಿರುದ್ಧ ಕೇವಲ ಮೂರು ಮತಗಳ ಅಂತರದಿಂದ ಮೂರನೇ ಬಾರಿಗೆ ಜಯ ಗಳಿಸಿದ್ದಾರೆ.

    ಎರಡು ಬಾರಿ ಅಧ್ಯಕ್ಷರಾದವರಿಗೆ ಸೋಲು: ಶಿರಸಿ ತಾಲೂಕಿನ ಹುಲೇಕಲ್ ಗ್ರಾಮ ಪಂಚಾಯಿತಿ ಬಕ್ಕಳ ವಾರ್ಡ್​ನಿಂದ ನಾಲ್ಕು ಬಾರಿ ಗೆಲುವು ದಾಖಲಿಸಿ, ಎರಡು ಬಾರಿ ಅಧ್ಯಕ್ಷರಾಗಿದ್ದ ವಿ.ಜಿ. ಹೆಗಡೆ ಈ ಬಾರಿ ಸೋಲಿನ ರುಚಿ ಕಂಡರು. ಬಿಜೆಪಿ ಬೆಂಬಲಿತ ಪ್ರಕಾಶ ಹೆಗಡೆ ವಿರುದ್ಧ 100 ಮತಗಳ ಅಂತರದಲ್ಲಿ ಸೋತು ನಿರಾಸೆ ಅನುಭವಿಸಿದರು.

    ಬ್ಯಾಲೆಟ್ ಹಿಂದೆ ಮತ!: ಪ್ರಸಕ್ತ ಚುನಾವಣೆಯಲ್ಲಿ ವಿವಿಧ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚು ಮತದಾರರು ಬ್ಯಾಲೆಟ್ ಪತ್ರದ ಹಿಂಬದಿ ಸೀಲ್ ಒತ್ತಿದ್ದಾರೆ. ಮತಗಟ್ಟೆ ಸಿಬ್ಬಂದಿ ಹೇಗೆ ಬ್ಯಾಲೆಟ್ ಪತ್ರ ನೀಡಿದ್ದಾರೋ ಅದನ್ನು ತೆರೆಯದೆ ಅದರ ಮೇಲೆಯೇ ಸೀಲ್ ಹಾಕಿ ಮತಪೆಟ್ಟಿಗೆಗೆ ಹಾಕಿದ್ದಾರೆ. ಹೀಗಾಗಿ ಇಂಥ ಬ್ಯಾಲೆಟ್ ಲೆಕ್ಕದಿಂದ ಹೊರಗುಳಿದಿದೆ.

    ಚೀಟಿಯಲ್ಲಿ ಅದೃಷ್ಟ: ಚೀಟಿಯೆತ್ತುವ ಅದೃಷ್ಟದಾಟದಲ್ಲಿ ಗುಡ್ನಾಪುರ ಗ್ರಾಮ ಪಂಚಾಯಿತಿಯ ನವಣಗೇರಿ ವಾರ್ಡ್ ಅಭ್ಯರ್ಥಿಗಳಾದ ಗೌರಿ ಗಾಣಿಗ ಹಾಗೂ ಲಕ್ಷ್ಮೀ ಕಬ್ಬೇರ ತಲಾ 264 ಮತ ಪಡೆದು ಸಮಬಲ ಸಾಧಿಸಿದ್ದರು. ಚುನಾವಣಾಧಿಕಾರಿ ಭಾನುಪ್ರಕಾಶ ಅವರು ಚೀಟಿ ಎತ್ತುವ ಮೂಲಕ ಗೌರಿ ಗಾಣಿಗ ಅವರನ್ನು ವಿಜೇತ ಅಭ್ಯರ್ಥಿ ಎಂದು ಘೊಷಿಸಿದರು.

    ಎಂ.ಟೆಕ್. ಪದವೀಧರ: ಭೈರುಂಬೆ ಗ್ರಾಮ ಪಂಚಾಯಿತಿ ಭೈರುಂಬೆ ವಾರ್ಡ್​ನಲ್ಲಿ ಬಿಜೆಪಿ ಬೆಂಬಲಿತನಾಗಿ ಸ್ಪರ್ಧಿಸಿದ್ದ ಕಿರಣ ಭಟ್ಟ ಗೆಲುವು ದಾಖಲಿಸಿದ್ದಾರೆ. ಇವರು ಎಂ.ಟೆಕ್. ಪದವೀಧರರಾಗಿದ್ದು, ಕರೊನಾ ನಿಮಿತ್ತ ಗ್ರಾಮದಲ್ಲಿಯೇ ವಾಸವಿದ್ದರು. ಮೊದಲ ಬಾರಿಗೆ ಅಖಾಡಕ್ಕಿಳಿದ ಅವರು ಪ್ರತಿಸ್ಪರ್ಧಿ ವಿರುದ್ಧ 104 ಮತಗಳ ಅಂತರದ ಗೆಲುವು ಪಡೆದಿದ್ದಾರೆ.

    ಶಿವರಾಮ ಹೆಬ್ಬಾರ ಬಣದವರ ವಿಜಯ: ಬನವಾಸಿ ಹೋಬಳಿಯ 10 ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿಗರಿಗಿಂತ ಹೆಬ್ಬಾರ ಬೆಂಬಲಿಗರ ಆಯ್ಕೆ ಹೆಚ್ಚಿದೆ. ಮೂಲ ಬಿಜೆಪಿಗರು ಹಾಗೂ ವಲಸೆ ಬಿಜೆಪಿಗರ ನಡುವಿನ ಕಾದಾಟದಲ್ಲಿ ಶಿವರಾಮ ಹೆಬ್ಬಾರ ಜತೆ ಬಿಜೆಪಿಗೆ ಬಂದವರು ಹೆಚ್ಚಿನ ಗೆಲುವು ದಾಖಲಿಸಿದ್ದಾರೆ.

    4ನೇ ಬಾರಿ ಗೆಲುವು: ಶಿರಸಿ ತಾಲೂಕಿನ ಇಟಗುಳಿ ಗ್ರಾಪಂನ ಗೀತಾ ಭೋವಿ ಅವರು ಸತತ ನಾಲ್ಕನೇ ಬಾರಿ ಜಯ ಗಳಿಸಿದರು. ಒಂದು ಅವಧಿಗೆ ಅಧ್ಯಕ್ಷರಾಗಿದ್ದ ಅವರು ಪರಿಶಿಷ್ಟ ಜಾತಿ ಮೀಸಲಾತಿ ಕ್ಷೇತ್ರದಿಂದ ಬಾಳೆಗದ್ದೆ ವಾರ್ಡ್​ನಲ್ಲಿ ಸ್ಪರ್ಧಿಸಿದ್ದರು. ಪ್ರತಿಸ್ಪರ್ಧಿ ವಿರುದ್ಧ 198 ಮತಗಳ ಅಂತರದ ಗೆಲುವು ದಾಖಲಿಸಿದರು.

    ಅಪ್ಪನಿಗೆ ಸೋಲು; ಮಗಳಿಗೆ ಗೆಲುವು: ಬಿಸಲಕೊಪ್ಪ ಪಂಚಾಯಿತಿ ಬಿಸಲ ಕೊಪ್ಪ ವಾರ್ಡ್​ನಿಂದ ಕಾಂಗ್ರೆಸ್ ಬೆಂಬಲಿತರಾಗಿ ಎಸ್.ಜಿ. ಭಟ್ಟ ಸಾಮಾನ್ಯ ಕ್ಷೇತ್ರ, ಅವರ ಪುತ್ರಿ ಬಿಜೆಪಿ ಬೆಂಬಲಿತ ಕಿರಣಾ ಭಟ್ಟ ಅವರು ಶಿವಳ್ಳಿ ಸಾಮಾನ್ಯ ಮಹಿಳೆ ಕ್ಷೇತ್ರದಿಂದ ಸ್ಪರ್ಧಿಸಿ ದ್ದರು. ಮತ ಎಣಿಕೆಯಲ್ಲಿ ಮಗಳಿಗೆ ಗೆಲುವಾದರೆ ತಂದೆಗೆ ಸೋಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts