More

    ಒಕ್ಕಲಿಗರ ಮೀಸಲಾತಿಗಾಗಿ ಆದಿಚುಂಚನಗಿರಿ ಶ್ರೀಗಳ ನೇತೃತ್ವದಲ್ಲಿ ಸಚಿವರು, ಶಾಸಕರ ಸಭೆ

    ಬೆಂಗಳೂರು: ಮೀಸಲಾತಿಗಾಗಿ ಈಗ ರಾಜ್ಯದೆಲ್ಲೆಡೆ ವಿವಿಧ ಸಮುದಾಯಗಳ ಪ್ರತಿಭಟನೆಗಳು, ಸಮಾವೇಶಗಳು ನಡೆಯುತ್ತಿವೆ. ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಪಂಚಮಸಾಲಿ ಸಮುದಾಯದ ಬೃಹತ್ ಸಮಾವೇಶ ನಡೆದು ಇಡೀ ರಾಜ್ಯದ ಗಮನ ಸೆಳೆದಿದೆ. ಇದೀಗ ಒಕ್ಕಲಿಗರೂ ತಮ್ಮ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ಆಗ್ರಹಿಸಿ ಸಭೆ ನಡೆಸಿದ್ದಾರೆ.

    ಒಕ್ಕಲಿಗರ ಮಹಾಸಂಸ್ಥಾನ ಮಠದ ಅಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಆ ಸಮುದಾಯದ ಮಂತ್ರಿಗಳು, ಶಾಸಕರು ಮತ್ತು ಇತರ ಮುಖಂಡರು ಸೋಮವಾರ ಸಭೆ ನಡೆಸಿರುವುದು ಗಮನಾರ್ಹ. ಈ ಸಭೆಯಲ್ಲಿ ಶ್ರೀ ನಂಜಾವಧೂತ ಸ್ವಾಮೀಜಿ, ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಸಚಿವರಾದ ಆರ್. ಅಶೋಕ್, ನಾರಾಯಣಗೌಡ, ಶಾಸಕರಾದ ಮಸಾಲೆ ಜಯರಾಂ, ಎಸ್.ಆರ್. ವಿಶ್ವನಾಥ್, ಮೇಲ್ಮನೆ ಸದಸ್ಯರಾದ ಪುಟ್ಟಣ್ಣ, ಅ. ದೇವೇಗೌಡ, ಸಮುದಾಯದ ಹಿರಿಯರಾದ ಪುಟ್ಟಸೋಮೇಗೌಡ ಮುಂತಾದವರು ಪಾಲ್ಗೊಂಡಿದ್ದರು.

    ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಅಶೋಕ್, ಒಕ್ಕಲಿಗರಿಗೆ ಈಗಿರುವ 3ಎ ಮೀಸಲಾತಿಯ ಪ್ರಮಾಣವನ್ನು ಶೇ. 4ರಿಂದ 10ಕ್ಕೆ ಏರಿಸುವುದಲ್ಲದೆ ಅದನ್ನು ಗ್ರಾಮೀಣ ಪ್ರದೇಶದವರ ಜತೆ ನಗರವಾಸಿಗಳಿಗೂ ವಿಸ್ತರಿಸಬೇಕು, ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು, ಸಾವಿರ ಕೋಟಿ ರೂ. ಅನುದಾನ ಕೊಡಬೇಕು, ಒಕ್ಕಲಿಗರ 115 ಉಪಜಾತಿಗಳನ್ನು ಹಿಂದುಳಿದ ವರ್ಗಕ್ಕೆ ಸೇರಿಸಬೇಕು ಮುಂತಾದ ಬೇಡಿಕೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಈ ಕುರಿತು ಸಮುದಾಯದ ವತಿಯಿಂದ ಶ್ರೀಗಳಿಂದ ನಾವು ಮನವಿ ಪತ್ರವನ್ನು ಸ್ವೀಕರಿಸಿದ್ದೇವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಮಾತುಕತೆ ನಡೆಸುತ್ತೇವೆ ಎಂದು ಹೇಳಿದರು.

    ಪಂಚಮಸಾಲಿ ಹೋರಾಟದಲ್ಲಿ ರಾಜಕಾರಣ ನುಸುಳಿದೆ ಎಂದು ಒಪ್ಪಿಕೊಂಡ ವಚನಾನಂದ ಸ್ವಾಮೀಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts