More

    ಐಪಿಎಲ್‌ನಿಂದ ವಿವೋ ಔಟ್, ಚೀನಾ ಕಂಪನಿ ಪ್ರಾಯೋಜಕತ್ವ ಕೈಬಿಟ್ಟ ಬಿಸಿಸಿಐ

    ನವದೆಹಲಿ: ಲಡಾಖ್ ಗಡಿ ಗಲಾಟೆಯ ಬಳಿಕ ಚೀನಾ ದೇಶಕ್ಕೆ ಕೇಂದ್ರ ಸರ್ಕಾರ ಸಾಕಷ್ಟು ಕಡಿವಾಣಗಳನ್ನು ಹಾಕಿದೆ. ಇದರ ಜತೆಗೆ ಚೀನಾ ಉತ್ಪನ್ನಗಳ ವಿರುದ್ಧ ಜನಾಕ್ರೋಶ ಮುಂದುವರಿದಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಕೂಡ ಚೀನಾದ ಮೊಬೈಲ್ ಕಂಪನಿ ವಿವೋ ಜತೆಗಿನ ಸಂಬಂಧ ಮುರಿದುಕೊಂಡಿದೆ. ಮುಂಬರುವ ಐಪಿಎಲ್ 13ನೇ ಆವೃತ್ತಿಯ ಶೀರ್ಷಿಕೆ ಪ್ರಾಯೋಜಕತ್ವದಿಂದ ವಿವೋ ಕಂಪನಿಯನ್ನು ಕೈಬಿಡುತ್ತಿರುವುದಾಗಿ ಬಿಸಿಸಿಐ ಗುರುವಾರ ಅಧಿಕೃತವಾಗಿ ಪ್ರಕಟಿಸಿದೆ.

    ಕೇವಲ ಒಂದು ವಾಕ್ಯದ ಪ್ರಕಟಣೆ ಹೊರಡಿಸಿರುವ ಬಿಸಿಸಿಐ, 2020ರ ಸಾಲಿನ ಐಪಿಎಲ್‌ಗೆ ವಿವೋ ಪ್ರಾಯೋಜಕತ್ವವನ್ನು ಅಮಾನತುಗೊಳಿಸುತ್ತಿರುವುದಾಗಿ ತಿಳಿಸಿದೆ. ಈ ಮೂಲಕ 2021ರಲ್ಲಿ ಮತ್ತೆ ವಿವೋ ಜತೆ ಒಪ್ಪಂದ ಮುಂದುವರಿಸುವ ಪರೋಕ್ಷ ಸೂಚನೆಯನ್ನೂ ಬಿಸಿಸಿಐ ರವಾನಿಸಿದೆ. 2018ರಿಂದ 2022ರವರೆಗೆ ಐದು ವರ್ಷಗಳಿಗೆ ಅನ್ವಯಿಸುವಂತೆ 2017ರಲ್ಲಿ ವಿವೋ ಕಂಪನಿಯ ಜತೆಗೆ ಬಿಸಿಸಿಐ, ಐಪಿಎಲ್ ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಒಪ್ಪಂದ ಮಾಡಿಕೊಂಡಿತ್ತು. ಒಟ್ಟಾರೆ 2,190 ಕೋಟಿ ರೂ. ಮೊತ್ತದ ಒಪ್ಪಂದದ ಅನ್ವಯ ವಿವೋ ಕಂಪನಿ ಪ್ರತಿ ವರ್ಷ 440 ಕೋಟಿ ರೂ. ಮೊತ್ತವನ್ನು ಬಿಸಿಸಿಐಗೆ ಪಾವತಿಸುತ್ತಿತ್ತು. ಬಿಸಿಸಿಐ ಸಂವಿಧಾನದ ಅನ್ವಯ ಇನ್ನು ಐಪಿಎಲ್ ಟೂರ್ನಿಯ ಹೊಸ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಶೀಘ್ರದಲ್ಲೇ ಟೆಂಡರ್ ಆಹ್ವಾನಿಸುವ ನಿರೀಕ್ಷೆ ಇದೆ.

    2021ರಿಂದ ಮತ್ತೆ ವಿವೋ?
    2021ರಿಂದ ಮತ್ತೆ 3 ವರ್ಷಗಳ ಅವಧಿಗೆ ವಿವೋ ಜತೆಗೆ ಬಿಸಿಸಿಐ ಪರಿಷ್ಕೃತ ಒಪ್ಪಂದ ಮಾಡಿಕೊಳ್ಳ ಲಿದೆ ಎನ್ನಲಾಗಿದೆ. 2021ರ ಏಪ್ರಿಲ್‌ನಲ್ಲಿ ಮುಂದಿನ ಐಪಿಎಲ್ ವೇಳೆಗೆ ಚೀನಾ ವಿರೋಧಿ ಭಾವನೆ ಕಡಿಮೆಯಾಗಬಹುದು ಎಂಬ ನಿರೀಕ್ಷೆಯನ್ನು ಬಿಸಿಸಿಐ ಹೊಂದಿದೆ.

    ಇದನ್ನೂ ಓದಿ: ಇಶಾಂತ್ ಶರ್ಮ ಗೆಳತಿಗೆ ಕರೆ ಮಾಡಿ ಅತ್ತಿದ್ದು ಯಾಕೆ ಗೊತ್ತೆ?

    ಪ್ರತಿ ಫ್ರಾಂಚೈಸಿಗೆ 15 ಕೋಟಿ ರೂ. ನಷ್ಟ?
    ವಿವೋ ಜತೆಗಿನ ಶೀರ್ಷಿಕೆ ಪ್ರಾಯೋಜಕತ್ವದಿಂದ ಬಿಸಿಸಿಐ, ಒಟ್ಟಾರೆ ಅರ್ಧದಷ್ಟು ಮೊತ್ತವನ್ನು ಅಂದರೆ ಪ್ರತಿ ್ರಾಂಚೈಸಿಗೆ 27.5 ಕೋಟಿ ರೂ. ಪಾಲು ನೀಡುತ್ತದೆ. ಆದರೆ ಈಗ ವಿವೋ ಜಾಗದಲ್ಲಿ ಬಿಸಿಸಿಐ ಅಷ್ಟು ಮೊತ್ತದ ಹೊಸ ಒಪ್ಪಂದ ಪಡೆದುಕೊಳ್ಳುವ ನಿರೀಕ್ಷೆ ಇಲ್ಲ. ಹೀಗಾಗಿ ವಿವೋ ನಿರ್ಗಮನದಿಂದ ಪ್ರತಿ ್ರಾಂಚೈಸಿಗೆ ಸುಮಾರು 15 ಕೋಟಿ ರೂ.ನಷ್ಟು ನಷ್ಟ ಎದುರಾಗಬಹುದು ಎನ್ನಲಾಗಿದೆ.

    ಫ್ರಾಂಚೈಸಿಗಳಿಗೆ 16 ಪುಟಗಳ ಮಾರ್ಗಸೂಚಿ: ಯುಎಇ ಜೈವಿಕ-ಸುರಕ್ಷಾ ವಾತಾವರಣದಲ್ಲಿ ಐಪಿಎಲ್ ಆಯೋಜಿಸುವ ಸಲುವಾಗಿ ಬಿಸಿಸಿಐ, 16 ಪುಟಗಳ ಮಾರ್ಗಸೂಚಿಯನ್ನು ಫ್ರಾಂಚೈಸಿಗಳಿಗೆ ನೀಡಿದೆ. ಇದರಲ್ಲಿ ಆಟಗಾರರು ಮತ್ತು ಸಿಬ್ಬಂದಿಗೆ ಕುಟುಂಬ ಸದಸ್ಯರನ್ನು ಕರೆದೊಯ್ಯಲು ಅವಕಾಶ ಕಲ್ಪಿಸಲಾಗಿದೆ.

    ಕೋಕಕೋಲ, ಬೈಜುಸ್ ಆಸಕ್ತಿ
    ಐಪಿಎಲ್ ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಕೋಕಕೋಲ ಇಂಡಿಯಾ ಮತ್ತು ಆನ್‌ಲೈನ್ ಶಿಕ್ಷಣದ ಆ್ಯಪ್ ಬೈಜುಸ್ ಕಂಪನಿಗಳು ಆಸಕ್ತಿ ಹೊಂದಿವೆ ಎನ್ನಲಾಗಿದೆ. ಬೈಜುಸ್ ಕಂಪನಿ ಈಗಾಗಲೆ ಟೀಮ್ ಇಂಡಿಯಾದ ಜೆರ್ಸಿ ಪ್ರಾಯೋಜಕತ್ವವನ್ನು ಹೊಂದಿದೆ. ಇದರನ್ವಯ ಭಾರತ ತಂಡದ ದ್ವಿಪಕ್ಷೀಯ ಸರಣಿಯ ಪ್ರತಿ ಪಂದ್ಯಕ್ಕೆ 4.61 ಕೋಟಿ ರೂ. ಮತ್ತು ಐಸಿಸಿ ಅಥವಾ ಏಷ್ಯಾಕಪ್ ಟೂರ್ನಿಯ ಪ್ರತಿ ಪಂದ್ಯಕ್ಕೆ 1.56 ಕೋಟಿ ರೂ. ಪಾವತಿಸುತ್ತಿದೆ.

    ಐಪಿಎಲ್ ಕ್ರಿಕೆಟಿಗರ ಪತ್ನಿ-ಗೆಳತಿಗೆ ಸಿಹಿ ಸುದ್ದಿ ನೀಡಿದ ಬಿಸಿಸಿಐ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts