More

    ನೀವಿಲ್ಲದಿರುವಾಗ…

    ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಹೂಡಿಕೆ ವಿಷಯದಲ್ಲಿ ತಮ್ಮದೇ ಆದ ಆದ್ಯತೆಗಳಿರುತ್ತವೆ. ಹಾಗೆಯೇ ಹೂಡಿಕೆ, ಸಾಲ, ವಿಮೆ ಮತ್ತಿತರ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಕಾಗದಪತ್ರಗಳು ಹಾಗೂ ವಿವರಗಳನ್ನು ಕೂಡ ತಮಗೆ ಇಷ್ಟಬಂದಂತೆ ಅಥವಾ ತಮಗೆ ಮಾತ್ರ ತಿಳಿಯುವಂತೆ ಇಟ್ಟಿರುತ್ತಾರೆ. ಅವರು ಬದುಕಿರುವಾಗ ಇದರಿಂದ ಯಾರಿಗೂ ಯಾವುದೇ ತೊಂದರೆಯಿಲ್ಲ. ಆದರೆ ಅವರೇನಾದರೂ ದಿಢೀರ್ ಸಾವನ್ನಪ್ಪಿದರೆ? ಅವರನ್ನೇ ನೆಚ್ಚಿಕೊಂಡಿರುವವರಿಗೆ ಸಮಸ್ಯೆಯಾಗಬಹುದಲ್ಲವೆ? ಹಾಗಾಗಿ ಸಾವಿನ ನಂತರ ಎಲ್ಲ ದಾಖಲೆಗಳು ಕುಟುಂಬ ಸದಸ್ಯರಿಗೆ ಸುಲಭವಾಗಿ ಸಿಗುವಂತೆ ವ್ಯವಸ್ಥೆ ಮಾಡಿಡುವುದು ಒಳ್ಳೆಯದು.

    ವಾದಿರಾಜ್ ಎಂ.ಎಸ್.

    ಸಾಮಾನ್ಯವಾಗಿ ಮನುಷ್ಯ ಸಾವಿನ ಬಗ್ಗೆ ಎಷ್ಟು ಭಯಪಡುತ್ತಾನೆಂದರೆ ಅದರ ಬಗ್ಗೆ ಯೋಚನೆಯನ್ನು ಕೂಡ ಮಾಡುವುದಿಲ್ಲ. ಅಷ್ಟೇ ಏಕೆ, ಮನೆಯಲ್ಲಿ ವಿನಾಕಾರಣ ಸಾವಿನ ಬಗ್ಗೆ ಮಾತನಾಡುವುದು ಸಹ ನಿಷಿದ್ಧ! ವಿಚಿತ್ರವೆಂದರೆ ನೂರಾರು ವರುಷಗಳಿಂದ ಮನುಷ್ಯನ ಸಾವಿನ ಬಗ್ಗೆ ಯೋಚಿಸಿಯೇ ಇದುವರೆಗಿನ ವೈದ್ಯಕೀಯ ಬದಲಾವಣೆಗಳು ಹಾಗೂ ಆವಿಷ್ಕಾರಗಳು ನಡೆದಿವೆ. ಸಾವು ನಿಶ್ಚಿತವಷ್ಟೇ ಅಲ್ಲ, ಅದು ಯಾವಾಗ ಬೇಕಾದರೂ ಬರಬಹುದು. ಮನೆಯ ಯಜಮಾನನ ಸಾವು ಇಡೀ ಕುಟುಂಬವನ್ನು ದಿಕ್ಕು ತೋಚದಂತೆ ಮಾಡುತ್ತದೆ. ಸಾವಿನ ಆಘಾತ ಕಡಿಮೆಯಾದಂತೆ ‘ಮುಂದೇನು’ ಎಂಬ ಪ್ರಶ್ನೆ ಎದುರು ಬಂದು ನಿಲ್ಲುತ್ತದೆ.

    ಆದ್ದರಿಂದ ಮನುಷ್ಯ ಬದುಕಿರುವಾಗಲೇ ತನ್ನನ್ನು ನಂಬಿರುವ ಕುಟುಂಬದ ಭದ್ರತೆಗೆ ಬೇಕಾದ ವ್ಯವಸ್ಥೆ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲ, ತಾನು ಏನೇನು ಮಾಡಿದ್ದೇನೆ ಎಂಬುದರ ವಿವರವಾದ ಮಾಹಿತಿಯೆಲ್ಲವೂ ಕುಟುಂಬಸ್ಥರಿಗೆ ಸಕಾಲದಲ್ಲಿ ಸಿಗುವ ಹಾಗೆ ಇಡಬೇಕಾಗುತ್ತದೆ.

    ನೀವೇನು ಮಾಡಬಹುದು?: ಕೆಲವರು ತಮ್ಮ ಸಾವಿನ ಬಳಿಕ ಅಂತ್ಯಕ್ರಿಯೆ ಹೇಗೆ ನಡೆಸಬೇಕು ಎಂಬುದನ್ನು ಮೊದಲೇ ಬರೆದಿಡುತ್ತಾರೆ. ಅವರಿಗೆ ಅದೇ ಮುಖ್ಯ! ಇನ್ನು ಕೆಲವರು ತಮ್ಮ ಅಂತ್ಯಕ್ರಿಯೆ ಮಾಡುವ ಬದಲು ಅಂಗಾಂಗಗಳನ್ನು ದಾನ ಮಾಡುವ ಬಗ್ಗೆ ಬರೆದಿಡುತ್ತಾರೆ. ಅವರಿಗೆ ಅದು ಮುಖ್ಯ. ಈ ಎರಡೂ ಎಕ್ಸ್​ಟ್ರೀಮ್ಳ ನಡುವೆ ಕೋಟ್ಯಂತರ ‘ಸಾಮಾನ್ಯ’ರಿದ್ದಾರೆ. ಅಂಥವರಿಗೆ ಈ ಕೆಳಕಂಡ ಸಿಂಪಲ್ ಪಟ್ಟಿ ಸಾಕಾಗಬಹುದು.

    ಉಯಿಲು ಅಂತ್ಯಕ್ರಿಯೆಯ ವಿಧಾನ ಅಥವಾ ಅಂಗಾಂಗ ದಾನದ ವಿವರ ಬಂಧುಗಳು ಹಾಗೂ ಆತ್ಮೀಯರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ವಾಟ್ಸ್ಯಾಪ್ ಸಂಖ್ಯೆ, ಇಮೇಲ್ ವಿಳಾಸ ಇತ್ಯಾದಿ ವಿವರ. ಕೆಲಸ ಮಾಡುವ ಸಂಸ್ಥೆಯ ಹೆಸರು, ಪೂರ್ಣ ವಿಳಾಸ, ಸಂಬಂಧಪಟ್ಟ ಅಧಿಕಾರಿಗಳ ಮತ್ತು ಕೆಲವು ಆತ್ಮೀಯ ಸಹೋದ್ಯೋಗಿಗಳ ಹೆಸರು, ದೂರವಾಣಿ ಸಂಖ್ಯೆ ಇತ್ಯಾದಿ. ಡಾಕ್ಯುಮೆಂಟ್ ಲೊಕೇಶನ್ ರೆಕಾರ್ಡ್

    ಏನಿದು, ಡಾಕ್ಯುಮೆಂಟ್ ಲೊಕೇಶನ್ ರೆಕಾರ್ಡ್?: ನಿಮಗೆ ಸಂಬಂಧಿಸಿದ ಸ್ಥಿರ ಹಾಗೂ ಚರಾಸ್ತಿಗಳ ವಿವರ, ನೀವು ಕೆಲಸ ಮಾಡುತ್ತಿರುವ ಸಂಸ್ಥೆಯಿಂದ ನಿಮಗೆ ಸಂದಾಯವಾಗಬೇಕಾದ ಹಣ, ನೀವು ಇತರರಿಗೆ ಕೊಟ್ಟ ಸಾಲ, ಬೇರೆಯವರಿಂದ ನೀವು ಪಡೆದ ಸಾಲ, ವಿಮಾ ಪಾಲಿಸಿಗಳು ಮುಂತಾದ ವಿವರಗಳನ್ನು ಒಳಗೊಂಡಿರುವ ದಾಖಲೆಯೇ ಡಾಕ್ಯುಮೆಂಟ್ ಲೊಕೇಶನ್ ರೆಕಾರ್ಡ್. ಅದರ ಒಂದು ಪಟ್ಟಿಯನ್ನು ಮೊದಲಿಗೆ ಸಿದ್ಧಪಡಿಸಬೇಕಾಗುತ್ತದೆ.

    ‘ಭಾಗ ಆ’ದಲ್ಲಿ ಬರೆದಿರುವ ವಿವರಗಳನ್ನು ಆಗಾಗ ಅಪ್ಡೇಟ್ ಮಾಡುವುದು ಬಹಳ ಮುಖ್ಯ. ಒಬ್ಬ ವ್ಯಕ್ತಿ ಸತ್ತನೆಂದು ತಿಳಿದ ಕೂಡಲೇ ಸಾಲ ತೆಗೆದುಕೊಂಡ ಎಷ್ಟು ಜನರು ತಾವಾಗಿಯೇ ಹಣ ಪಾವತಿಸಲು ಮುಂದೆ ಬಂದಾರು? ಅಷ್ಟೇ ಅಲ್ಲ ಕೆಲವೊಮ್ಮೆ ಹಣಕ್ಕಾಗಿ ಜೀವ ವಿಮೆ ಪಾಲಿಸಿ, ಚಿನ್ನದ ಒಡವೆಗಳನ್ನು ಅಡವಿಟ್ಟಿರುತ್ತಾರೆ. ಸಾಲದ ಮೊತ್ತಕ್ಕಿಂತ ಅವು ಹೆಚ್ಚು ಪಟ್ಟು ಬೆಲೆ ಬಾಳುವುದರಿಂದ ಬಾಕಿ ಮೊತ್ತವನ್ನು ಆಗಾಗ ಅಪ್ಡೇಟ್ ಮಾಡುವುದು ಬಹಳ ಮುಖ್ಯ.

    ಕೇಸ್ ಸ್ಟಡಿ: 90ರ ದಶಕದ ಒಂದು ದಿನ. ಬೆಳಗ್ಗೆ ಎದ್ದು ಬ್ಯಾಂಕಿಗೆ ಹೊರಡುವಾಗ ಬಂತು ಸುದ್ದಿ. ನಮ್ಮ ಬ್ಯಾಂಕಿನ ನಿಷ್ಠಾವಂತ ನೌಕರ ತುಕಾರಾಂ ದಿಢೀರ್ ಮೃತಪಟ್ಟಿದ್ದ. ಕೇವಲ 26 ವರ್ಷ ವಯಸ್ಸಿನ, ಮದುವೆಯಾಗಿ ಒಂದು ಮಗು ಇರುವ ತುಕಾರಾಂನ ಮನೆಗೆ ಹೋಗಿ ಅವನ ಹೆಂಡತಿಯನ್ನು ಭೇಟಿಯಾದಾಗ ನನಗೆ ಕಾದಿತ್ತು ಶಾಕ್. ಆಕೆ ಅವಿದ್ಯಾವಂತೆ. ತುಕಾರಾಂನ ಹಣಕಾಸಿನ ಬಗ್ಗೆ ಏನೇನೂ ಅರಿವಿಲ್ಲದವಳು. ಅಲ್ಲಿದ್ದ ಕಾಗದಪತ್ರಗಳನ್ನು ಪರಿಶೀಲಿಸಿದಾಗ ಸಿಕ್ಕಿದ್ದು ಒಂದು ಸಹಕಾರ ಬ್ಯಾಂಕಿನಿಂದ ಬಂದಿದ್ದ ಸಾಲದ ಬಾಕಿಯ ಪತ್ರ! ಆ ಬ್ಯಾಂಕಿಗೆ ಹೋಗಿ ಪರಿಶೀಲಿಸಿದಾಗ ತಿಳಿದಿದ್ದು… ತುಕಾರಾಂ ತಂಗಿಯ ಮದುವೆಗಾಗಿ ಕೆಲ ವರ್ಷಗಳ ಹಿಂದೆ 1 ಲಕ್ಷ ರೂ. ಮುಖಬೆಲೆಯ ಎನ್​ಎಸ್​ಸಿ ಅಡವಿಟ್ಟು ಸಾಲ ತೆಗೆದುಕೊಂಡಿದ್ದ. ಆ ಸಾಲದಲ್ಲಿ ಕಟ್ಟದೆ ಉಳಿದಿದ್ದ ಹಣ ಕೇವಲ 2 ಸಾವಿರ ರೂ.! ವಿಪರ್ಯಾಸವೆಂದರೆ ಪೋಸ್ಟಾಫೀಸು ತುಕಾರಾಂಗೆ ಕೊಡಬೇಕಿದ್ದ ಮೊತ್ತ 2 ಲಕ್ಷಕ್ಕೂ ಹೆಚ್ಚು. ಆ ದಿನ ಬ್ಯಾಂಕಿನ ಸಾಲದ ಬಾಕಿಯ ಪತ್ರ ಸಿಗದೇ ಹೋಗಿದ್ದರೆ ತುಕಾರಾಂನ ಬಡ ಕುಟುಂಬಕ್ಕೆ ಏನೂ ಸಿಗುತ್ತಿರಲಿಲ್ಲ.

    ಈಗ ನಾವು ಉದಾಹರಣೆಗಾಗಿ ಮೇಲಿನ ಪ್ರಕರಣದ ಜೀವವಿಮೆಯ ವಿವರಗಳನ್ನು ಡಾಕ್ಯುಮೆಂಟ್ ಲೊಕೇಶನ್ ರೆಕಾರ್ಡ್​ನಲ್ಲಿ ಹೇಗೆ ನಮೂದಿಸಬಹುದು ನೋಡೋಣ ಬನ್ನಿ.

    ನೀವಿಲ್ಲದಿರುವಾಗ...ಪ್ರತಿಯೊಬ್ಬರಿಗೂ ಕಾಗದಪತ್ರಗಳನ್ನು ಎಲ್ಲೆಲ್ಲಿ ಇಡಬೇಕು ಎಂಬುದರ ಬಗ್ಗೆ ಅವರದೇ ಆದ ಆದ್ಯತೆಗಳಿದ್ದರೂ ಆಫೀಸಿನಲ್ಲಿ ಇಡುವಾಗ ವೈಯಕ್ತಿಕ ಕಾಗದಗಳು ಆಫೀಸ್ ಪತ್ರಗಳೊಂದಿಗೆ ಬೆರೆತು ಗೊಂದಲ ಉಂಟಾಗಬಹುದು. ಈ ಕಾರಣಕ್ಕಾಗಿಯೇ ಬಹಳ ಮುಖ್ಯವಾದ ಕಾಗದಪತ್ರಗಳನ್ನು ಹಾಗು ಕಡತಗಳನ್ನು ಪ್ರತ್ಯೇಕವಾಗಿ ಸೇಫ್ ಡೆಪಾಸಿಟ್ ಲಾಕರ್ ಅಥವಾ ಸೇಫ್ ಡೆಪಾಸಿಟ್ ಕಸ್ಟಡಿಯಲ್ಲಿ ಇಡುವುದು ಒಳ್ಳೆಯದು. ಇವರೆಡರ ಹೆಸರೂ ಒಂದೇ ರೀತಿ ಕಂಡರೂ ಇವು ಬೇರೆ ಬೇರೆ ನಿಯಮಗಳನ್ನು ಹೊಂದಿವೆ.

    ಸೇಫ್ ಡೆಪಾಸಿಟ್ ಕಸ್ಟಡಿ: ಇದರಡಿಯಲ್ಲಿ ನೀವು ಇಡುವ ವಸ್ತುಗಳ ವಿವರಗಳನ್ನು ಕಡ್ಡಾಯವಾಗಿ ಬ್ಯಾಂಕಿಗೆ ತಿಳಿಸಬೇಕಾಗುತ್ತದೆ. ಆದರೆ ಪೆಟ್ಟಿಗೆ ಅಥವಾ ಲಕೋಟೆ ಸೀಲ್ ಮಾಡಿದ್ದರೆ, ನಿಮಗೆ ಕೊಡುವ ರಸೀದಿಯ ಮೇಲೆ ಬ್ಯಾಂಕಿನವರು ‘ಒಳಗೇನಿದೆಯೋ ಗೊತ್ತಿಲ್ಲ’ ಎನ್ನುವ ಸೀಲ್ ಹಾಕಿ ಕೊಡುತ್ತಾರೆ. ಇದರಡಿಯಲ್ಲಿ ನೀವು ನಿವೇಶನಕ್ಕೆ ಸಂಬಂಧಿಸಿದ ಕಾಗದ ಪತ್ರಗಳು, ಸರ್ಕಾರಿ ಬಾಂಡ್​ಗಳು, ಸೀಲ್ಡ್ ಲಕೋಟೆಗಳು, ಫಿಕ್ಸೆಡ್ ಡೆಪಾಸಿಟ್ ರಶೀದಿಗಳು, ವಿಮಾ ಪಾಲಿಸಿ, ತುಂಬಾ ದೊಡ್ಡದಲ್ಲದ ಸೀಲ್ಡ್ ಡಬ್ಬಗಳು, ಚಿನ್ನದ ಒಡವೆಗಳು, ಉಯಿಲು ಇಡಬಹುದು. ಅದೇ ಬ್ಯಾಂಕಿನಲ್ಲಿ ಡೆಪಾಸಿಟ್ ಇದ್ದರೆ ಇವನ್ನೆಲ್ಲ ಉಚಿತವಾಗಿ ಇಟ್ಟುಕೊಳ್ಳುತ್ತಾರೆ. ಉಯಿಲು ಇರುವ ಲಕೋಟೆಯ ಮೇಲೆ ಅದು ತಮ್ಮ ನಿಧನಾನಂತರ ಯಾರಿಗೆ ಸೇರಬೇಕಾಗಿದ್ದು ಎಂದು ಸ್ಪಷ್ಟವಾಗಿ ಬರೆದಿದ್ದರೆ ಮಾತ್ರ ತೆಗೆದುಕೊಳ್ಳುತ್ತಾರೆ. ಇದರಲ್ಲಿರುವ ವಸ್ತುಗಳಿಗೆ ಯಾರಾದರೂ ಒಬ್ಬರನ್ನು ಅಥವಾ ಹೆಚ್ಚು ವ್ಯಕ್ತಿಗಳನ್ನು ನಾಮಿನೇಷನ್ ಮಾಡುವುದಕ್ಕೂ ಅವಕಾಶವಿದೆ. ಗ್ರಾಹಕನ ಸಾವಿನ ನಂತರ ನಾಮಿನಿಗೆ/ನಾಮಿನಿಗಳಿಗೆ ಅವರವರಿಗೆ ಸೇರಬೇಕಾದ ವಸ್ತುಗಳನ್ನು ಬ್ಯಾಂಕ್ ಒಪ್ಪಿಸುತ್ತದೆ.

    ಸೇಫ್ ಡೆಪಾಸಿಟ್ ಲಾಕರ್: ಮನೆಯಲ್ಲಿಟ್ಟರೆ ಕಳವಾಗಬಹುದಾದ ಬೆಲೆ ಬಾಳುವ ಒಡವೆ, ಪೇಂಟಿಂಗ್ಸ್ ಮುಂತಾದವುಗಳನ್ನು ಇದರಲ್ಲಿ ಇಡಬಹುದು. ಬಹುಮುಖ್ಯ ಕಾಗದಪತ್ರಗಳನ್ನು ಇಡುವಾಗ ಅದರ ಫೋಟೋಕಾಪಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ಯಾವುದೇ ಕಾರಣಕ್ಕೂ ಜೀವವಿಮೆ ಪಾಲಿಸಿಯ ಮೂಲಪ್ರತಿಯನ್ನುಇದರಲ್ಲಿ ಇಡಬಾರದು. ಅದರ ಅವಶ್ಯಕತೆ ಇದ್ದಾಗ ಸಮಯಕ್ಕೆ ಸರಿಯಾಗಿ ಸಿಗದೇ ಇರಬಹುದು. ಇದರಡಿ, ಒಬ್ಬರಿಗಿಂತ ಹೆಚ್ಚಿನ ವ್ಯಕ್ತಿಗಳಿಗೆ ನಾಮಿನೇಷನ್ ಮಾಡಲು ಅವಕಾಶವಿಲ್ಲ. ಲಾಕರ್ ಹೊಂದಿರುವ ವ್ಯಕ್ತಿ ಸತ್ತ ನಂತರ ನಾಮಿನಿ ಹೆಸರು, ವಿಳಾಸದ ದಾಖಲೆಗಳೊಂದಿಗೆ ಬ್ಯಾಂಕಿಗೆ ಕ್ಲೇಮ್ ಫಾಮ್ರ್ ಸಲ್ಲಿಸಬೇಕಾಗುತ್ತದೆ. ಬ್ಯಾಂಕ್​ನವರು ಲಾಕರ್​ನಲ್ಲಿರುವ ವಸ್ತುಗಳ ಪಂಚನಾಮೆ ಮಾಡಿ ಪಟ್ಟಿ ತಯಾರಿಸಿ ವಸ್ತುಗಳನ್ನು ನಾಮಿನಿಗೆ ಹಸ್ತಾಂತರ ಮಾಡುತ್ತಾರೆ. ನಾಮಿನೇಷನ್ ಇಲ್ಲದಿದ್ದರೆ ಕಾನೂನು ಪ್ರಕಾರ ಯಾರು ಉತ್ತರಾಧಿಕಾರಿಯೋ ಅವರಿಗೆ ಕೊಡುತ್ತಾರೆ. ಎಷ್ಟೋ ಮಂದಿ ತಮ್ಮಸ್ನೇಹಿತರು, ಸಂಬಂಧಿಗಳ ವಸ್ತುಗಳನ್ನು ಇದರಲ್ಲಿ ಇಡುತ್ತಾರೆ. ಹಾಗೆ ಮಾಡಬಾರದು. ಮುಂದೆ ಅವುಗಳ ನಿಜವಾದ ಮಾಲೀಕರು ತೊಂದರೆಗೆ ಈಡಾಗುವ ಸಾಧ್ಯತೆ ಇರುತ್ತದೆ.

    (ಲೇಖಕರು ಲೀಡರ್​ಶಿಪ್ ಕೋಚ್ ಮತ್ತು ಎಚ್​ಆರ್ ಕನ್ಸಲ್ಟಂಟ್. ಸಂಪರ್ಕಕ್ಕೆ: 9880288467)

     

    ಪಟ್ಟಿ ಮಾಡುವ ಕ್ರಮ

    ಹಣಕಾಸಿಗೆ ಸಂಬಂಧ ಪಟ್ಟ ಎಲ್ಲ ವಿವರಗಳನ್ನು ಎರಡು ಭಾಗವಾಗಿ ವಿಂಗಡಿಸ ಬಹುದು; ಉಳಿತಾಯ, ಹೂಡಿಕೆಗಳು (ಇವು ಸ್ವತ್ತುಗಳು) ಮತ್ತು ಸಾಲ, ಮರುಪಾವತಿ ಇತ್ಯಾದಿ (ಇವು ಬಾಧ್ಯತೆಗಳು). ಸ್ಥಿರಾಸ್ತಿ, ಚರಾಸ್ತಿ ವಿವರಗಳನ್ನು ಹೆಚ್ಚುವರಿ ವೈಯಕ್ತಿಕ ದಾಖಲೆಗಳ ‘ಭಾಗ-ಅ’ನಲ್ಲೂ, ಸಾಲ ಮತ್ತು ಮರುಪಾವತಿಯ ವಿವರಗಳನ್ನು ‘ಭಾಗ-ಆ’ನಲ್ಲೂ ದಾಖಲಿಸಬೇಕು. ನಂತರ, ಈ ವಿವರಗಳಿಗೆ ಸಂಬಂಧಿಸಿದ ಕಾಗದಪತ್ರಗಳು ಹಾಗೂ ವಿವರಗಳನ್ನು, ಇಟ್ಟ ಸರಿಯಾದ ಸ್ಥಳದ ಮಾಹಿತಿಯನ್ನು ಡಾಕ್ಯುಮೆಂಟ್ ಲೊಕೇಶನ್ ರೆಕಾರ್ಡ್​ನಲ್ಲಿ ದಾಖಲಿಸಬೇಕು. ಉದಾಹರಣೆಗೆ, ನಿಮ್ಮವಿಮಾ ಪಾಲಿಸಿಗೆ ಸಂಬಂಧಪಟ್ಟ ವಿವರಗಳನ್ನು ಹೆಚ್ಚುವರಿ ವೈಯಕ್ತಿಕ ದಾಖಲೆಗಳಲ್ಲಿ ಹೇಗೆ ನಮೂದಿಸಬೇಕೆಂಬುದನ್ನು ಈ ಕೆಳಗಿನ ಪಟ್ಟಿಯಿಂದ ಅರ್ಥ ಮಾಡಿಕೊಳ್ಳಬಹುದು.

    ಸಾಲಕ್ಕೆ ಖಾತ್ರಿ ಕೊಟ್ಟಿದ್ದೀರಾ?

    ಪರಿಚಿತರಿಗೆ ಸಾಲಕ್ಕಾಗಿ ಗ್ಯಾರಂಟಿ ಕೊಟ್ಟಿದ್ದರೆ ಅದನ್ನೂ ಹೆಚ್ಚುವರಿ ವೈಯಕ್ತಿಕ ದಾಖಲೆಗಳಲ್ಲಿ ನಮೂದಿಸುವುದು ಒಳ್ಳೆಯದು. ಏಕೆಂದರೆ ಸಾಲ ಪಡೆದ ವ್ಯಕ್ತಿ ಮತ್ತು ಗ್ಯಾರಂಟರ್ ಇಬ್ಬರೂ ಸಾಲಕ್ಕೆ ಸಮಾನ ಹೊಣೆಗಾರರು. ಸಾಲ ಪಡೆದ ವ್ಯಕ್ತಿ ಮರುಪಾವತಿ ಮಾಡದಿದ್ದರೆ ಸಾಲಗಾರ ಮಾತ್ರವಲ್ಲ, ಗ್ಯಾರಂಟರ್ ಮೇಲೆ ಕೂಡ ಬ್ಯಾಂಕಿನವರು ಕಾನೂನು ಕ್ರಮ ಜರುಗಿಸುತ್ತಾರೆ. ಒಂದು ವೇಳೆ ಗ್ಯಾರಂಟರ್ ಸತ್ತರೆ ಆತನ ಕಾನೂನುಬದ್ಧ ಉತ್ತರಾಧಿಕಾರಿಗಳು ಆ ಸಾಲಕ್ಕೆ ಹೊಣೆಗಾರರಾಗುತ್ತಾರೆ!

    ಅಪ್​ಡೇಟ್ ಮಾಡುವುದು ಮುಖ್ಯ

    ಚೆಕ್​ಲಿಸ್ಟ್ ಪೂರ್ಣಗೊಳಿಸಿದ ನಂತರ ಕನಿಷ್ಠ 2-3 ತಿಂಗಳಿಗೊಮ್ಮೆಯಾದರೂ ಅಪ್​ಡೇಟ್ ಮಾಡದಿದ್ದರೆ ಪ್ರಯೋಜನ ಇಲ್ಲ. ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ಮಾಡುವವರಂತೂ ಪ್ರತಿ ತಿಂಗಳು ಅಪ್​ಡೇಟ್ ಮಾಡಬೇಕು.

    ಹಣಕಾಸಿಗೆ ಸಂಬಂಧ ಪಟ್ಟ ಎಲ್ಲ ವಿವರಗಳನ್ನು ಎರಡು ಭಾಗವಾಗಿ ವಿಂಗಡಿಸ ಬಹುದು; ಉಳಿತಾಯ, ಹೂಡಿಕೆಗಳು (ಇವು ಸ್ವತ್ತುಗಳು) ಮತ್ತು ಸಾಲ, ಮರುಪಾವತಿ ಇತ್ಯಾದಿ (ಇವು ಬಾಧ್ಯತೆಗಳು). ಸ್ಥಿರಾಸ್ತಿ, ಚರಾಸ್ತಿ ವಿವರಗಳನ್ನು ಹೆಚ್ಚುವರಿ ವೈಯಕ್ತಿಕ ದಾಖಲೆಗಳ ‘ಭಾಗ-ಅ’ನಲ್ಲೂ, ಸಾಲ ಮತ್ತು ಮರುಪಾವತಿಯ ವಿವರಗಳನ್ನು ‘ಭಾಗ-ಆ’ನಲ್ಲೂ ದಾಖಲಿಸಬೇಕು. ನಂತರ, ಈ ವಿವರಗಳಿಗೆ ಸಂಬಂಧಿಸಿದ ಕಾಗದಪತ್ರಗಳು ಹಾಗೂ ವಿವರಗಳನ್ನು, ಇಟ್ಟ ಸರಿಯಾದ ಸ್ಥಳದ ಮಾಹಿತಿಯನ್ನು ಡಾಕ್ಯುಮೆಂಟ್ ಲೊಕೇಶನ್ ರೆಕಾರ್ಡ್​ನಲ್ಲಿ ದಾಖಲಿಸಬೇಕು. ಉದಾಹರಣೆಗೆ, ನಿಮ್ಮವಿಮಾ ಪಾಲಿಸಿಗೆ ಸಂಬಂಧಪಟ್ಟ ವಿವರಗಳನ್ನು ಹೆಚ್ಚುವರಿ ವೈಯಕ್ತಿಕ ದಾಖಲೆಗಳಲ್ಲಿ ಹೇಗೆ ನಮೂದಿಸಬೇಕೆಂಬುದನ್ನು ಈ ಕೆಳಗಿನ ಪಟ್ಟಿಯಿಂದ ಅರ್ಥ ಮಾಡಿಕೊಳ್ಳಬಹುದು.

    ಹೆಚ್ಚುವರಿ ವೈಯಕ್ತಿಕ ದಾಖಲೆಗಳಲ್ಲಿ ಹೂಡಿಕೆಗಳಿಗೆ ಸಂಬಂಧಿಸಿದ ಎಲ್ಲ ವಿವರಗಳಿದ್ದರೂ ಬೇಕೆಂದೇ ಹಣದ ಕಾಲಂ ಕೈಬಿಡಲಾಗಿದೆ. ಏಕೆಂದರೆ ಅದು ದುರುಪಯೋಗ ಆಗುವ ಸಾಧ್ಯತೆ ಇರುತ್ತದೆ. ಆದರೆ ‘ಭಾಗ-ಆ’ದಲ್ಲಿ ನೀವು ತೆಗೆದುಕೊಂಡ ಸಾಲದ ಬಾಕಿ ಇರುವ ಮೊತ್ತ, ಬೇರೆಯವರು ನಿಮಗೆ ಕೊಡಬೇಕಾದ ಹಣದ ವಿವರಗಳನ್ನು ಖಂಡಿತವಾಗಿಯೂ ದಾಖಲಿಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts