More

    ನ್ಯೂ ಸ್ಟ್ರೈಕರ್ಸ್ ತಂಡ ಚಾಂಪಿಯನ್

    ಗೋಣಿಕೊಪ್ಪ: ಕೊಡಗು ಹಿಂದು ಮಲೆಯಾಳಿ ಸಮಾಜ, ಕರ್ನಾಟಕ ನಾಯರ್ ಸೊಸೈಟಿ ವತಿಯಿಂದ ಗೋಣಿಕೊಪ್ಪಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ವಿಶು ಕ್ರಿಕೆಟ್ ಪಂದ್ಯಾವಳಿಯಲ್ಲಿ ನ್ಯೂ ಸ್ಟ್ರೈಕರ್ಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು.

    ನಲ್‌ನಲ್ಲಿ ಎವೈಸಿಯು ತಂಡವನ್ನು ಮಣಿಸಿ ಪ್ರಶಸ್ತಿ ಹಾಗೂ 1 ಲಕ್ಷ ರೂ. ನಗದು ಬಹುಮಾನ ಬಾಚಿಕೊಂಡಿತು. ರನ್ನರ್ ಅಪ್ ಆದ ಎವೈಸಿಯು ತಂಡ 50 ಸಾವಿರ ರೂ. ನಗದು ಬಹುಮಾನದೊಂದಿಗೆ ಪ್ರಶಸ್ತಿ ಪಡೆಯಿತು. ನಾಲ್ಕು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ 16 ತಂಡಗಳು ಪಾಲ್ಗೊಂಡಿದ್ದವು.
    ಕೊಡಗು ಹಿಂದು ಮಲೆಯಾಳಿ ಸಮಾಜದ ಅಧ್ಯಕ್ಷ ಅಮೃತ್ ರಾಜನ್ ಅಧ್ಯಕ್ಷತೆಯಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಕ್ರೀಡಾಕೂಟದ ಯಶಸ್ವಿಗೆ ಶ್ರಮಿಸಿದ ಕ್ರೀಡಾ ಸಂಚಾಲಕರಾದ ವೇಣು ಕಣ್ಣನ್, ವಿ.ವಿ.ಅರುಣ್‌ಕುಮಾರ್, ಸಂತೋಷ್ ಪಿಟ್ಟೆ ಹಾಗೂ ವಿ.ಎನ್.ರೀನಾ, ಆಯೋಜಕರು ಹಾಗೂ ದಾನಿಗಳಾದ ಮೀನು ಉಂಬಯಿ ಅವರನ್ನು ಸನ್ಮಾನಿಸಲಾಯಿತು.

    ಕೊಡಗು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುಮ್ಮಟ್ಟಿರ ಕಿಲನ್ ಗಣಪತಿ ಮಾತನಾಡಿ, ಎಲ್ಲ ಸಮುದಾಯಗಳನ್ನು ಒಟ್ಟಾಗಿ ಸೇರಿಸಿಕೊಂಡು ಕ್ರೀಡೆಯ ಮೂಲಕ ಸಾಮರಸ್ಯ ಕಾಪಾಡುತ್ತಿರುವುದು ಉತ್ತಮ ಬೆಳವಣಿಗೆ. ಕ್ರೀಡಾ ಚಟುವಟಿಕೆಗಳು ಹೆಚ್ಚಾಗಿ ನಡೆಯುವಂತಾಗಬೇಕು. ಪರಸ್ಪರ ಪ್ರೀತಿ-ವಿಶ್ವಾಸ ಹೆಚ್ಚಾಗಲು ಕ್ರೀಡೆ ಸಹಕಾರಿಯಾಗಲಿದೆ ಎಂದರು.

    ಗೋಣಿಕೊಪ್ಪ ಗ್ರಾಪಂ ಸದಸ್ಯ ಬಿ.ಎನ್.ಪ್ರಕಾಶ್, ವಿರಾಜಪೇಟೆ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಕುಟ್ಟಂಡ ಅಜಿತ್ ಕರುಂಬಯ್ಯ ಮಾತನಾಡಿದರು. ಅಂಚೆ ಕಚೇರಿಯ ನಿವೃತ್ತ ಪೋಸ್ಟ್‌ಮಾಸ್ಟರ್ ಕೆ.ರಘು, ಬಿ.ಶೆಟ್ಟಿಗೇರಿ ಗ್ರಾಪಂ ಅಧ್ಯಕ್ಷ ಕೊಲ್ಲೀರ ಬೋಪಣ್ಣ, ಗೋಣಿಕೊಪ್ಪ ಕೆನರಾ ಬ್ಯಾಂಕಿನ ಮುಖ್ಯ ಪ್ರಬಂಧಕ ಶ್ರೀಪ್ರಿಯ, ಕರ್ನಾಟಕ ನಾಯರ್ ಸೊಸೈಟಿ ಸರ್ವೀಸ್ ಅಧ್ಯಕ್ಷ ಪಿ.ಜಿ ಪವಿತ್ರನ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts