More

    ವಿಷ್ಣು ಪುತ್ಥಳಿ ಧ್ವಂಸ ಅವಮಾನವಲ್ಲ, ಆಶೀರ್ವಾದ ಎಂದ ಭಾರತಿ ವಿಷ್ಣುವರ್ಧನ್​

    ಮೈಸೂರು: ಸಿಂಹ ಯಾವತ್ತಿದ್ದರೂ ಸಿಂಹವೇ. ಪುತ್ಥಳಿ ಧ್ವಂಸ ಮಾಡಿದವರಿಂದ ತಂದೆಯ ಹೆಸರು ಅಳಿಸಲಾಗಲ್ಲ. ಅವರ ಅಸ್ತಿತ್ವಕ್ಕೆ, ಅವರ ಹೆಸರಿಗೆ ಯಾವತ್ತೂ ಧಕ್ಕೆ ಬರಲ್ಲ. ತಂದೆಯ ಹೆಸರು, ಅವರ ಮೇಲಿನ ಪ್ರೀತಿ ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಇದೆ. ನಾಯಿಗಳು ಬೊಗಳಿದ ತಕ್ಷಣ ದೇವಲೋಕ ಹಾಳಾಗಲ್ಲ ಎಂದು ಸಾಹಸಸಿಂಹ ಡಾ.ವಿಷ್ಣುವರ್ಧನ್​ ಅವರ ಪುತ್ರಿ ಕೀರ್ತಿ ಹೇಳಿದರು.

    ಡಾ.ವಿಷ್ಣುವರ್ಧನ್​ರ 11ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನಗರ ಹೊರವಲಯದಲ್ಲಿರುವ ಉದ್ದೇಶಿತ ವಿಷ್ಣು ಸ್ಮಾರಕ ಸ್ಥಳದಲ್ಲಿ ವಿಷ್ಣುದಾದ ಕುಟುಂಬಸ್ಥರು ಬುಧವಾರ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಇನ್ನೊಂದು ವರ್ಷದಲ್ಲಿ ತಂದೆಯ ಸ್ಮಾರಕ ನಿರ್ಮಾಣ ಆಗಲಿದೆ. ಒಳ್ಳೆಯ ಕೆಲಸಗಳು ಸ್ವಲ್ಪ ತಡವಾಗಿಯೇ ಆಗೋದು. ತಂದೆ ಎಂದಾಕ್ಷಣ ಅವರ ಪ್ರೀತಿಯೇ ನೆನಪಾಗುತ್ತದೆ ಎಂದರು. ನಟಿ ಭಾರತಿ ವಿಷ್ಣುವರ್ಧನ್ ಮಾತನಾಡಿ, ಬೆಂಗಳೂರಿನಲ್ಲಿ ವಿಷ್ಣು ಪುತ್ಥಳಿ ಧ್ವಂಸಗೊಳಿಸಿರುವವರಿಗೆ ನಾನು ಏನೂ ಹೇಳಲ್ಲ. ಅಂಥವರ ಬಗ್ಗೆ ಏನೂ ಹೇಳದಿರುವುದೆ ಉತ್ತಮ ಎಂದರು. ಇದನ್ನೂ ಓದಿರಿ ವಿಷ್ಣುದಾದಗೆ ಅಪಮಾನ: ದುಷ್ಕರ್ಮಿಗಳ ವಿರುದ್ಧ ಸಿಡಿದೆದ್ದ ದರ್ಶನ್​

    ವಿಷ್ಣುವರ್ಧನ್ ಬಗ್ಗೆ ಮಾತನಾಡುವವರು ಇರಬೇಕು. ಹಾಗಿದ್ದಲ್ಲಿ ಮಾತ್ರ ಅವರ ಇರುವಿಕೆ ಗೊತ್ತಾಗುತ್ತದೆ. ಘಟನೆ ಕುರಿತು ಇಡೀ ಚಿತ್ರರಂಗ ಪ್ರತಿಕ್ರಿಯಿಸಿದೆ. ಅವರೆಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಭಾರತಿ ವಿಷ್ಣುವರ್ಧನ್ ಹೇಳಿದರು.

    ಎಲ್ಲರ ಮನದಲ್ಲೂ ವಿಷ್ಣು ಇದ್ದಾರೆ. ಯಾರೋ ಕೆಲವರು ಅವರ ಬಗ್ಗೆ ಮಾತನಾಡುತ್ತಾರೆ. ಮಾತನಾಡುವವರು ಇದ್ದಾಗಲೇ ನಮ್ಮವರು ಇದ್ದಾರೆ ಅನಿಸೋದು. ಪುತ್ಥಳಿ ಧ್ವಂಸವನ್ನು ಅವಮಾನ ಅಂದುಕೊಳ್ಳಬಾರದು. ಅದನ್ನು ಆಶೀರ್ವಾದ ಅಂದುಕೊಳ್ಳೋಣ ಎಂದು ಮಾರ್ವಿುಕವಾಗಿ ನುಡಿದರು.

    ಗ್ರಾಪಂ ಚುನಾವಣೆ: ಈ ಕ್ಷೇತ್ರಕ್ಕೆ 26 ವರ್ಷದ ಬಳಿಕ ಮತದಾನ, ಮಂಗಳಮುಖಿ ಗೆಲುವು

    ಗ್ರಾಪಂ ಚುನಾವಣೆಯಲ್ಲಿ ಗೆದ್ದ 28 ವರ್ಷದ ಇಂಜಿನಿಯರಿಂಗ್​ ಉದ್ಯೋಗಿ

    ಗ್ರಾಪಂ ಚುನಾವಣೆಯಲ್ಲಿ ಗೆದ್ದರೂ ಸಂಭ್ರಮಿಸಲು ಅಭ್ಯರ್ಥಿಯೇ ಬದುಕಿಲ್ಲ!

    ಗ್ರಾಪಂ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಕಾಂಗ್ರೆಸ್​​ಗೆ ಶುರುವಾಯ್ತು ಟೆನ್ಷನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts