More

    ಭಾರತದಲ್ಲಿರುವ ವಿದೇಶಿ ಪ್ರಜೆಗಳ ವೀಸಾ ಅವಧಿ ವಿಸ್ತರಣೆ

    ನವದೆಹಲಿ : ಕರೊನಾದಿಂದಾಗಿ ಅಂತರರಾಷ್ಟ್ರೀಯ ವಾಣಿಜ್ಯ ವಿಮಾನಗಳ ಮೇಲೆ ನಿರ್ಬಂಧಗಳಿರುವುದರಿಂದ ಭಾರತದಲ್ಲೇ ಇರಬೇಕಾಗಿ ಬಂದಿರುವ ವಿದೇಶೀಯರ ವೀಸಾ ವಾಲಿಡಿಟಿಯನ್ನು ಆಗಸ್ಟ್​ 31 ರವರೆಗೆ ವಿಸ್ತರಿಸಲಾಗಿದೆ. ಹಲವು ವಿದೇಶೀಯರು 2020ರ ಮಾರ್ಚ್​ನಿಂದಲೂ ಭಾರತದಲ್ಲೇ ವಾಸಿಸುತ್ತಿದ್ದು, ಈವರೆಗೆ ವೀಸಾ ಅವಧಿಯಲ್ಲಿ ಮಾಸಿಕ ವಿಸ್ತರಣೆ ಪಡೆಯುತ್ತಿದ್ದರು ಎನ್ನಲಾಗಿದೆ.

    “ಸಾಮಾನ್ಯ ರೀತಿಯಲ್ಲಿ ವಾಣಿಜ್ಯ ವಿಮಾನ ಹಾರಾಟವನ್ನು ಪುನರಾರಂಭಿಸದೆ ಇರುವುದರಿಂದ ಭಾರತದಲ್ಲಿ ಸಿಲುಕಿರುವಂತಹ ವಿದೇಶಿ ಪ್ರಜೆಗಳ ಭಾರತೀಯ ವೀಸಾ ಅಥವಾ ವಾಸ್ತವ್ಯದ ಅವಧಿಯನ್ನು 31.08.2021 ರವರೆಗೆ ಉಚಿತವೆಂದು ಪರಿಗಣಿಸಲಾಗುತ್ತದೆ. ಈ ಕುರಿತಾಗಿ ಯಾವುದೇ ಓವರ್‌ಸ್ಟೇ ದಂಡ ವಿಧಿಸಲಾಗುವುದಿಲ್ಲ. ಇಂಥ ವಿದೇಶಿ ಪ್ರಜೆಗಳು ಪ್ರತ್ಯೇಕವಾಗಿ ವಿಸ್ತರಣೆ ಅರ್ಜಿಗಳನ್ನು ಸಲ್ಲಿಸುವ ಅಗತ್ಯವಿಲ್ಲ” ಎಂದು ಕೇಂದ್ರ ಗೃಹವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿದೆ.

    ಸದರಿ ವಿದೇಶಿ ಪ್ರಜೆಗಳು ಭಾರತವನ್ನು ಬಿಟ್ಟು ಹೊರಹೋಗುವ ಅವಕಾಶ ಲಭಿಸಿದಾಗ ಎಕ್ಸಿಟ್ ಪರ್ಮಿಷನ್​ಗಾಗಿ ಸಂಬಂಧಿತ ಎಫ್​ಆರ್​ಆರ್​ಒಗೆ ಅರ್ಜಿ ಸಲ್ಲಿಸಬಹುದು. ಯಾವುದೇ ದಂಡ ವಿಧಿಸದೆ ತೆರಳಲು ಅನುಮತಿ ನೀಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

    ಜಿರಳೆಯನ್ನು ಪಶು ಆಸ್ಪತ್ರೆಗೆ ಕರೆದುತಂದ ಮಹಾನುಭಾವ!

    ಕಾರ್ಖಾನೆಯಿಂದ ಅನಿಲ ಸೋರಿಕೆ : ಸ್ಥಳೀಯರಲ್ಲಿ ಕವಿದ ಆತಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts