More

    ವೈರಸ್ ಟೆಸ್ಟ್ ಲ್ಯಾಬ್ ಆರಂಭ

    ಬೆಳಗಾವಿ: ಕರೊನಾ ವೈರಸ್ ಸೋಂಕಿತರ ರಾಜ್ಯದ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಬೆಳಗಾವಿ ಜಿಲ್ಲೆಯಲ್ಲಿ ಸರ್ಕಾರ ಕೊನೆಗೂ ಕರೊನಾ ವೈರಸ್ ಟೆಸ್ಟ್‌ಲ್ಯಾಬ್ ಆರಂಭಿಸಿದ್ದು, ಏ. 22ರಿಂದಲೇ ತಪಾಸಣೆ ನಡೆಯಲಿದೆ.

    ರಾಜ್ಯದಲ್ಲಿ ಕರೊನಾ ವೈರಸ್ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ, ಸೇರಿದಂತೆ ಆಯ್ದ ಕೆಲ ಜಿಲ್ಲೆಗಳಲ್ಲಿ ಕರೊನಾ ಟೆಸ್ಟ್ ಲ್ಯಾಬ್ ಆರಂಭಿಸಲು ಸರ್ಕಾರ ಕ್ರಮ ಕೈಗೊಂಡಿತ್ತು. ಆದರೆ, ತಾಂತ್ರಿಕ, ರಾಜಕೀಯ ಇನ್ನಿತರ ಸಮಸ್ಯೆಗಳಿಂದ ಲ್ಯಾಬ್ ಆರಂಭವಾಗಲು 18 ದಿನ ವಿಳಂಬವಾಗಿದೆ.

    ಪ್ರಾಯೋಗಿಕ ತಪಾಸಣೆ: ಇದೀಗ ಜಿಲ್ಲೆಗೆ ಲ್ಯಾಬ್ ಟೆಸ್ಟ್ ಮಷಿನ್ ಬಂದಿದ್ದು, ಮಂಗಳವಾರ ಪ್ರಾಯೋಗಿಕವಾಗಿ ತಪಾಸಣೆ ನಡೆದಿದ್ದು, ಬುಧವಾರದಿಂದ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ. ದೆಹಲಿ ಐಸಿಎಂಆರ್‌ನಿಂದ ಆಗಮಿಸಿದ ಇಬ್ಬರು ವಿಜ್ಞಾನಿಗಳ ನೇತೃತ್ವದಲ್ಲಿ ವೈದ್ಯರು, ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಇದರಿಂದ ಸಕಾಲದಲ್ಲಿ ವರದಿಗಳು ವೈದ್ಯರ ಕೈ ಸೇರಲಿದ್ದು, ಸೂಕ್ತ ಚಿಕಿತ್ಸೆಗೆ ಸಹಕಾರಿಯಾಗಲಿದೆ.

    ಈ ಮೊದಲು ಕರೊನಾ ವೈರಸ್ ಶಂಕಿತರ ಗಂಟಲು ದ್ರವ ಮಾದರಿ ಹಾಗೂ ರಕ್ತದ ಮಾದರಿಗಳನ್ನು ಬೆಂಗಳೂರು, ಶಿವಮೊಗ್ಗದಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಬೇಕಾಗಿತ್ತು. ಇದರಿಂದ ತ್ವರಿತಗತಿಯಲ್ಲಿ ವರದಿಗಳು ಕೈ ಸೇರುತ್ತಿರಲಿಲ್ಲ. ಇದೀಗ ಬೆಳಗಾವಿಯಲ್ಲೇ ಟೆಸ್ಟ್ ಲ್ಯಾಬ್ ಆರಂಭಗೊಳ್ಳಲಿರುವುದರಿಂದ ಹೆಚ್ಚಿನ ಜನರ ತಪಾಸಣೆಗೂ ಸಹಕಾರಿಯಾಗಲಿದೆ.

    ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್)ಗೆ ಈಗಾಗಲೇ ಕರೊನಾ ವೈರಸ್ ಟೆಸ್ಟ್ ಲ್ಯಾಬ್ ಮಷಿನ್ ಬಂದಿದೆ. ಅಲ್ಲದೆ, ದೆಹಲಿ ಐಸಿಎಂಆರ್‌ನಿಂದ ವಿಜ್ಞಾನಿಗಳೂ ಆಗಮಿಸಿದ್ದಾರೆ. ಬುಧವಾರದಿಂದಲೇ ಲ್ಯಾಬ್ ಕಾರ್ಯಾರಂಭ ಮಾಡಲಿದೆ. ಇದರಿಂದ ಕರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಕಾರ್ಯಕ್ಕೆ ಇನ್ನಷ್ಟು ವೇಗ ಸಿಗಲಿದೆ.
    | ಡಾ. ಕೆ.ವಿ. ರಾಜೇಂದ್ರ, ಜಿಲ್ಲಾ ಪಂಚಾಯಿತಿ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts