More

    ಸಿಎಸ್‌ಕೆ ತಂಡವನ್ನು ಸೀನಿಯರ್ ಸಿಟಿಜನ್ಸ್ ಕ್ಲಬ್ ಎಂದು ಕರೆದ ಸೆಹ್ವಾಗ್!

    ನವದೆಹಲಿ: 2018ರ ಆವೃತ್ತಿಯಲ್ಲಿ ಡ್ಯಾಡಿಸ್ ಆರ್ಮಿ ಎಂದು ಕರೆಸಿಕೊಂಡರೂ ಪ್ರಶಸ್ತಿ ಗೆದ್ದು ಬೀಗಿದ್ದ ಚೆನ್ನೈ ಸೂಪರ್‌ಕಿಂಗ್ಸ್ ತಂಡಕ್ಕೆ ಇದೀಗ ಆ ಹಿರಿಯ ಆಟಗಾರರೇ ಮುಳುವಾಗಿದ್ದಾರೆ. ತಂಡದ ಅನುಭವಿ ಆಟಗಾರರು ವೈಫಲ್ಯ ಕಾಣುತ್ತಿರುವ ನಡುವೆ ಸಿಎಸ್‌ಕೆ ತಂಡ ಸತತ ಸೋಲಿನಿಂದ ಕಂಗೆಟ್ಟು ಐಪಿಎಲ್ 13ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ ಮತ್ತು ಟೂರ್ನಿಯ ನಿರ್ಗಮನ ಬಾಗಿಲಲ್ಲಿ ಬಂದು ನಿಂತಿದೆ. ಹೀಗಾಗಿ ಸಿಎಸ್‌ಕೆ ತಂಡಕ್ಕೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಈಗ ಹೊಸದೊಂದು ಹೆಸರು ನೀಡಿದ್ದಾರೆ.

    ಸಿಎಸ್‌ಕೆ ಎಂದರೆ ಈಗ ‘ಸೀನಿಯರ್ ಸಿಟಿಜನ್ಸ್ ಕ್ಲಬ್’ ಎಂದಾಗಿದೆ ಎಂದು ಸೆಹ್ವಾಗ್, ತಮ್ಮ ಇನ್‌ಸ್ಟಾಗ್ರಾಂ ಖಾತೆಯ ‘ವೀರೂ ಕೀ ಬೈಠಕ್’ ಕಾರ್ಯಕ್ರಮದಲ್ಲಿ ಎಂಎಸ್ ಧೋನಿ ಬಳಗದ ಕಾಲೆಳೆದಿದ್ದಾರೆ.

    ಮುಂಬೈ ಇಂಡಿಯನ್ಸ್ ವಿರುದ್ಧದ ಶುಕ್ರವಾರದ ಪಂದ್ಯದ ಬಗ್ಗೆ ವಿಶ್ಲೇಷಣೆ ಮಾಡುತ್ತ ಸೆಹ್ವಾಗ್, ‘ಚೆನ್ನೈ-ಮುಂಬೈ ತಂಡಗಳ ನಡುವೆ ಐಪಿಎಲ್‌ನಲ್ಲಿ ದೊಡ್ಡ ವೈರತ್ವವೇ ಇದೆ. ಚೆನ್ನ ತಂಡ ಉದ್ಘಾಟನಾ ಪಂದ್ಯದಲ್ಲಿ ಮುಂಬೈಗೆ ಸೋಲುಣಿಸಿರಬಹುದು. ಆದರೆ ಆ ಬಳಿಕ ಸಾಕಷ್ಟು ಬದಲಾಗಿದೆ. ಚೆನ್ನೈ ಈಗ ಗೆಲುವು ಕಾಣುವ ತಂಡಕ್ಕೆ ಬದಲಾಗಿ ಸೀನಿಯರ್ ಸಿಟಿಜನ್ಸ್ ಕ್ಲಬ್‌ನಂತೆ ಕಾಣಿಸುತ್ತಿದೆ’ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts