More

    ಏಕದಿನ ತಂಡದ ನಿರ್ಗಮನ ನಾಯಕ ಕೊಹ್ಲಿ ಬಗ್ಗೆ ಹೊಸ ನಾಯಕ ರೋಹಿತ್ ಹೇಳಿದ್ದೇನು?

    ಮುಂಬೈ: ಭಾರತ ಏಕದಿನ ತಂಡದ ನಿರ್ಗಮನ ನಾಯಕ ವಿರಾಟ್ ಕೊಹ್ಲಿ ಅವರ ನಾಯಕತ್ವದ ಬಗ್ಗೆ ಹೊಸ ನಾಯಕ ರೋಹಿತ್ ಶರ್ಮ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಕಳೆದ 5 ವರ್ಷಗಳಲ್ಲಿ ಮುಂಚೂಣಿಯಲ್ಲಿ ನಿಂತು ತಂಡವನ್ನು ಮುನ್ನಡೆಸಿದ್ದಾರೆ. ಅವರ ನಾಯಕತ್ವದಲ್ಲಿ ಆಡಿದ ಪ್ರತಿಕ್ಷಣವನ್ನೂ ನಾನು ಆನಂದಿಸಿರುವೆ ಎಂದು ರೋಹಿತ್ ಹೇಳಿದ್ದಾರೆ.

    ಬಿಸಿಸಿಐ ಡಾಟ್ ಟಿವಿ ಜತೆಗೆ ಮಾತನಾಡಿರುವ ರೋಹಿತ್, ‘ಕೊಹ್ಲಿ ಪ್ರತಿ ಪಂದ್ಯವನ್ನು ಗೆಲ್ಲುವ ಉತ್ಸಾಹ ಮತ್ತು ಬದ್ಧತೆ ಪ್ರದರ್ಶಿಸಿದ್ದಾರೆ. ಇಡೀ ತಂಡಕ್ಕೂ ಅವರು ಅದೇ ಸಂದೇಶ ನೀಡುತ್ತಿದ್ದರು. ಅವರ ಸಾರಥ್ಯದಲ್ಲಿ ಸಾಕಷ್ಟು ಕ್ರಿಕೆಟ್ ಆಡಿರುವೆ ಮತ್ತು ಅದನ್ನು ಆನಂದಿಸಿರುವೆ’ ಎಂದು ಹೇಳಿದ್ದಾರೆ. ಈ ಮೂಲಕ ಕೊಹ್ಲಿ ಜತೆಗೆ ಯಾವುದೇ ಭಿನ್ನಾಭಿಪ್ರಾಯಗಳಿರುವುದನ್ನು ತಳ್ಳಿಹಾಕಿದ್ದಾರೆ.

    2013ರ ಚಾಂಪಿಯನ್ಸ್ ಟ್ರೋಫಿ ಬಳಿಕ ಭಾರತ ತಂಡ ಯಾವುದೇ ಐಸಿಸಿ ಟ್ರೋಫಿ ಗೆಲ್ಲದ ಕೊರತೆಯನ್ನು ನೀಗಿಸುವ ವಿಶ್ವಾಸ ವ್ಯಕ್ತಪಡಿಸಿರುವ ರೋಹಿತ್, ‘ಮುಂಬರುವ ದಿನಗಳಲ್ಲಿ ಹಲವು ವಿಶ್ವಕಪ್‌ಗಳು ಎದುರಾಗಲಿವೆ. ಅವುಗಳನ್ನು ಗೆಲ್ಲುವತ್ತ ನಾವು ಗಮನಹರಿಸಲಿದ್ದೇವೆ. ಅದಕ್ಕೆ ಸಾಕಷ್ಟು ಸಿದ್ಧತೆಗಳನ್ನೂ ಮಾಡಿಕೊಳ್ಳಬೇಕಿದೆ ಮತ್ತು ಯೋಜನೆಗಳನ್ನು ರೂಪಿಸಬೇಕಿದೆ’ ಎಂದಿದ್ದಾರೆ.

    ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮ ಔಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts