More

    ವಿರಾಟ್​ ಕೊಹ್ಲಿ ಬಗ್ಗೆ ಅವರ ಶಾಲೆ ಬರೆದ ಪತ್ರ ಆಗುತ್ತಿದೆ ವೈರಲ್ !

    ನವದೆಹಲಿ : ಚಾಂಪಿಯನ್ಸ್ ಆಗುವುದು ಸುಲಭದ ಮಾತಲ್ಲ. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಕ್ರೀಡಾ ಕ್ಷೇತ್ರದಲ್ಲಿ ಬಾಲ್ಯದಿಂದ ಸಂಪೂರ್ಣ ತೊಡಗಿಸಿಕೊಂಡು ಶ್ರಮಿಸಿದರೆ ಸಾಧನೆಯ ಮೆಟ್ಟಿಲು ಹತ್ತಬಹುದು. ಈಗ ಭಾರತದಲ್ಲಷ್ಟೇ ಅಲ್ಲ, ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲೂ ಭಾರೀ ಹೆಸರು ಮಾಡಿರುವ ವಿರಾಟ್ ಕೊಹ್ಲಿಯ ವಿಚಾರದಲ್ಲೂ ಇದೇ ನಡೆದಿದೆ.

    ವಿರಾಟ್​ ಕೊಹ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಗ 15 ವರ್ಷ ಕೆಳಗಿನ ವರ್ಗದಲ್ಲಿ ದೆಹಲಿ ಕ್ರಿಕೆಟ್​ ತಂಡಕ್ಕೆ ಆಯ್ಕೆಯಾಗಿದ್ದ ನೆನಪೊಂದು ಇದೀಗ ಅಂತರ್ಜಾಲದಲ್ಲಿ ಹಸಿರಾಗಿದೆ. ತಮ್ಮ ಶಾಲಾ ತಂಡದ ನಾಯಕರಾಗಿದ್ದ ಕೊಹ್ಲಿ ಅವರು ಮತ್ತಿಬ್ಬರು ವಿದ್ಯಾರ್ಥಿಗಳೊಂದಿಗೆ ದೆಹಲಿ ತಂಡಕ್ಕೆ ಆಯ್ಕೆಯಾದ ಬಗ್ಗೆ ಶಾಲೆಯು ಪಾಲಕರಿಗೆ ಕಳುಹಿಸಿದ ಸರ್ಕ್ಯುಲರ್​ ಒಂದು ನೆಟ್ಟಿಗರ ಗಮನ ಸೆಳೆಯುತ್ತಿದೆ.

    ವಿರಾಟ್​ ಕೊಹ್ಲಿಗೆ ಮೊದಲು ಜನಪ್ರಿಯತೆ ಲಭಿಸಿದ್ದು, 2008 ರಲ್ಲಿ ಅಂಡರ್ 19 ವರ್ಲ್ಡ್​ ಕಪ್​ ಪಂದ್ಯಾವಳಿಯಲ್ಲಿ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸಿದಾಗ. ಆದರೆ, ಈಗ ವೈರಲ್ ಆಗಿರುವ 18 ವರ್ಷ ಹಿಂದಿನ ಸೇವಿಯರ್ ಕಾನ್ವೆಂಟ್​ನ ಪತ್ರದಲ್ಲಿ ಕೊಹ್ಲಿ 2003 ನೇ ಇಸವಿಯಲ್ಲಿ ಶಾಲೆಯ ತಂಡದ ನಾಯಕರಾಗಿದ್ದು, ದೆಹಲಿ ಕ್ರಿಕೆಟ್ ತಂಡಕ್ಕೆ ಆಯ್ಕೆ ಆದ ಬಗ್ಗೆ ಮಾಹಿತಿ ಇದೆ.

    ಇದನ್ನೂ ಓದಿ: ವಿರುಷ್ಕಾ ದಂಪತಿಗಳ ಪ್ರಾಣಿಪ್ರೇಮ : ಮುಂಬೈನಲ್ಲಿ ಬೀದಿ ಪ್ರಾಣಿಗಳಿಗೆ ಆಶ್ರಯ ಕೇಂದ್ರಗಳು

    ಅಂದಿನಿಂದ ಇಂದಿನವರೆಗೆ ಕ್ರಿಕೆಟ್​ ಪ್ರೇಮಿಗಳ ಕಣ್ಮಣಿ ವಿರಾಟ್​​ ಕೊಹ್ಲಿ ಸಾಧಿಸಿರುವ ಮೈಲಿಗಲ್ಲುಗಳು ಹಲವಾರು. ಹಾಲಿ 32 ವರ್ಷದ ಕೊಹ್ಲಿ, ಐಪಿಎಲ್​ 2021 ಪಂದ್ಯಾವಳಿಯಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿ ತಮ್ಮ ತಂಡಕ್ಕೆ ಪ್ರೇರಣೆ ನೀಡುತ್ತಿದ್ದಾರೆ. (ಏಜೆನ್ಸೀಸ್)

    ಆಕ್ಸಿಜನ್ ಕೊರತೆ ನೀಗಿಸಲು ಟಾಟಾ ಸಹಾಯ ಹಸ್ತ ! 24 ಕ್ರಯೋಜೆನಿಕ್ ಕಂಟೇನರ್​ಗಳ ಆಮದು

    ವಲಸೆ ಕಾರ್ಮಿಕರು ತುಂಬಿದ್ದ ಬಸ್ ಪಲ್ಟಿ ; ಮೂವರ ದುರ್ಮರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts