More

    ವಿರಾಟ್ ಕೊಹ್ಲಿ ಅನುಪಸ್ಥಿತಿ ಭಾರತ ತಂಡವನ್ನು ಕಾಡಲಿದೆ ಎಂದ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮ

    ನವದೆಹಲಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸರಣಿ ಆರಂಭಗೊಳ್ಳಲು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಏಕದಿನ, ಟಿ20 ಹಾಗೂ ಮೊದಲ ಟೆಸ್ಟ್ ಪಂದ್ಯದ ಬಳಿಕ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆ ಮೇಲೆ ತವರಿಗೆ ವಾಪಸಾಗಲಿದ್ದಾರೆ. ಕೊಹ್ಲಿ ತವರಿಗೆ ವಾಪಸಾದರೆ ಭಾರತ ತಂಡ ಸಾಕಷ್ಟು ಹಿನ್ನಡೆ ಅನುಭವಿಸಲಿದೆ ಎಂದೆಲ್ಲಾ ಚರ್ಚೆಗಳು ಆರಂಭಗೊಂಡಿವೆ. ಇದಕ್ಕೀಗ ಕೊಹ್ಲಿ ಅವರ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮ ಕೂಡ ಧ್ವನಿ ಗೂಡಿಸಿದ್ದಾರೆ. ಕಡೇ ಮೂರು ಟೆಸ್ಟ್ ಪಂದ್ಯಗಳಿಗೆ ಕೊಹ್ಲಿ ಅನುಪಸ್ಥಿತಿ ಖಂಡಿತವಾಗಿಯೂ ಕಾಡಲಿದೆ ಎಂದಿದ್ದಾರೆ.

    ವಿಶ್ವದ ಎರಡು ಪ್ರಮುಖ ತಂಡಗಳ ನಡುವೆ ನಡೆಯುತ್ತಿರುವ ಟೂರ್ನಿ ಇದಾಗಿದ್ದು, ಸಾಕಷ್ಟು ಸ್ಪರ್ಧಾತ್ಮಕವಾಗಿರುತ್ತದೆ. ಇಡೀ ಕ್ರಿಕೆಟ್ ಲೋಕವೇ ಈ ಸರಣಿ ಎದುರು ನೋಡುತ್ತಿದೆ. ಏಕದಿನ, ಟಿ20 ಸರಣಿ ಹಾಗೂ ಮೊದಲ ಟೆಸ್ಟ್ ಮುಕ್ತಾಯದ ಬಳಿಕ ಕೊಹ್ಲಿ ಭಾರತಕ್ಕೆ ವಾಪಸಾಗುತ್ತಿದ್ದಾರೆ. ಇದು ತಂಡಕ್ಕೆ ಸಾಕಷ್ಟು ಹಿನ್ನಡೆಯುಂಟು ಮಾಡಲಿದೆ ಎಂದು ರಾಜ್‌ಕುಮಾರ್ ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ದಾಖಲಯೇ ಇದಕ್ಕೆ ಸಾಕ್ಷಿ. ಇಂತ ಗುಣಮಟ್ಟದ ಆಟಗಾರನನ್ನು ಟೀಮ್ ಇಂಡಿಯಾ ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳಲಿದೆ ಎಂದರು. ಈ ಅವಕಾಶವನ್ನು ಮತ್ತೊಮ್ಮೆ ಆಟಗಾರ ತುಂಬಬೇಕಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅಜಿಂಕ್ಯ ರಹಾನೆ ಉತ್ತಮ ದಾಖಲೆ ಹೊಂದಿದ್ದಾರೆ. ನಾಯಕತ್ವ ಗುಣ ಪ್ರದರ್ಶನಕ್ಕೆ ಅವರಿಗೆ ಸೂಕ್ತ ಅವಕಾಶ ಸಿಕ್ಕಿದೆ ಎಂದರು.

    ಕೇವಲ ಐಪಿಎಲ್ ದಾಖಲೆಗಳನ್ನೇ ಪರಿಗಣಿಸಿ ನಾಯಕತ್ವ ಗುಣ ಹುಡುಕಬಾರದು ಎಂದು ಟಿ20 ತಂಡದ ನಾಯಕನಾಗಿ ರೋಹಿತ್ ಶರ್ಮ ಅವರನ್ನು ಪರಿಗಣಿಸಬೇಕು ಎಂಬ ಕೂಗಿಗೆ ರಾಜ್‌ಕುಮಾರ್ ಈ ರೀತಿ ಪ್ರತಿಕ್ರಿಯಿಸಿದರು. ಸರಣಿಯಲ್ಲಿ ಏಕದಿನ, ಟಿ20 ಪಂದ್ಯಗಳಿದ್ದು, ಬಳಿಕ ಟೆಸ್ಟ್ ಕ್ರಿಕೆಟ್‌ಗೆ ಸೂಕ್ತವಾಗಿ ತಂಡ ಸಂಯೋಜಿಸಬೇಕು ಎಂದರು.

    ಟೀಮ್ ಇಂಡಿಯಾಗೆ ಕಪಿಲ್ ದೇವ್ ಕಾಲದ ಸಮವಸ್ತ್ರ ವಾಪಸ್! ರೆಟ್ರೋ ಜೆರ್ಸಿಯ ಝಲಕ್ ಪ್ರದರ್ಶಿಸಿದ ಧವನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts