ಬೆಂಗಳೂರು: ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಟೀಮ್ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ದಿಗ್ಗಜ ಲಿಯೋನೆಲ್ ಮೆಸ್ಸಿ ಅವರನ್ನು ಹಿಂದಿಕ್ಕುವ ಮೂಲಕ ‘ಪ್ಯೂಬಿಟಿ ವರ್ಷದ ಶ್ರೇಷ್ಠ ಅಥ್ಲೀಟ್’ಪ್ರಶಸ್ತಿ ಜಯಿಸಿದ್ದಾರೆ.
2023ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಶತಕಗಳ ಅರ್ಧಶತಕಗಳಿಸಿ ವಿಶ್ವಕಪ್‌ನಲ್ಲಿ ಅತಿಹೆಚ್ಚು ರನ್‌ಗಳಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ ವಿರಾಟ್ ಕೊಹ್ಲಿ, ಪ್ರಶಸ್ತಿ ರೇಸ್‌ನಲ್ಲಿ ವಿಶ್ವಕಪ್ ವಿಜೇತ ನಾಯಕ ಪ್ಯಾಟ್ ಕಮ್ಮಿನ್ಸ್, ಟೆನಿಸ್ ತಾರೆಗಳಾದ ನೋವಾಕ್ ಜೋಕೊವಿಕ್, ಕಾರ್ಲೋಸ್ ಅಲ್ಕರಾಜ್, ುಟ್‌ಬಾಲ್‌ನ ಕ್ರಿಶ್ಚಿಯಾನೊ ರೊನಾಲ್ಡೊ, ಎರ್ಲ್ಲಿಂಗ್ ಹಾಲೆಂಡ್, ಅಮೆರಿಕದ ಬಾಸ್ಕೆಟ್ ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್ ಹಾಗೂ ಮೋಟಾರ್ ಸ್ಪೋರ್ಟ್ಸ್ ಮ್ಯಾಕ್ಸ್ ವರ್ಸ್ಟಾಪನ್ ಅವರನ್ನು ಹಿಂದಿಕ್ಕಿದರು. ಒಟ್ಟು 16 ಆಟಗಾರರಿಂದ ಸ್ಪರ್ಧೆಯ ಅಂತಿಮ ಪ್ರಶಸ್ತಿ ಸುತ್ತಿನಲ್ಲಿ 5 ಲಕ್ಷಕ್ಕೂ ಅಧಿಕ ಮತಗಳಿಂದ ಮೆಸ್ಸಿಯನ್ನು ಹಿಂದಿಕ್ಕಿದ ವಿರಾಟ್ ಕೊಹ್ಲಿ ವಿಜೇತರೆನಿಸಿದರು. ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ವಿರಾಟ್ ಕೊಹ್ಲಿ ಅವರು ಾಲೋ ಮಾಡುವ 295 ಖಾತೆಗಳಲ್ಲಿ ‘ಪ್ಯೂಬಿಟಿ ಸ್ಪೋರ್ಟ್ಸ್’ ಸಹ ಒಂದಾಗಿದೆ.