More

    ಶತಕದ ನಿರೀಕ್ಷೆಯಲ್ಲಿದ್ದರು ಫ್ಯಾನ್ಸ್, ಶೂನ್ಯದ ದಾಖಲೆ ಬರೆದರು ಕೊಹ್ಲಿ!

    ಪಾರ್ಲ್: ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಸೋಲು ಕಂಡ ಬೆನ್ನಲ್ಲೇ ಟೆಸ್ಟ್ ನಾಯಕತ್ವ ತ್ಯಜಿಸಿದ್ದ ವಿರಾಟ್ ಕೊಹ್ಲಿ ಇದೀಗ ನಾಯಕತ್ವ ಜವಾಬ್ದಾರಿಯಿಂದ ಸಂಪೂರ್ಣ ಮುಕ್ತರಾಗಿದ್ದಾರೆ. ಇದರಿಂದ ಅವರು ಬ್ಯಾಟಿಂಗ್‌ನತ್ತ ಹೆಚ್ಚು ಗಮನಹರಿಸಿ ತಂಡಕ್ಕೆ ಹೆಚ್ಚಿನ ಕೊಡುಗೆ ನೀಡುವ ನಿರೀಕ್ಷೆ ಅಭಿಮಾನಿಗಳದ್ದಾಗಿತ್ತು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಅವರು ನಿರೀಕ್ಷೆ ಹುಸಿಗೊಳಿಸಿದರು.

    ಕಳೆದ 2 ವರ್ಷಗಳಿಂದ ಶತಕಗಳ ಬರ ಎದುರಿಸುತ್ತಿರುವ ವಿರಾಟ್ ಕೊಹ್ಲಿ, ಶೀಘ್ರದಲ್ಲೇ ಇದನ್ನು ನೀಗಿಸುವ ನಿರೀಕ್ಷೆ ಅಭಿಮಾನಿಗಳದ್ದು. ಆದರೆ ಶುಕ್ರವಾರದ ಪಂದ್ಯದಲ್ಲಿ ಕೊಹ್ಲಿ ಕೇವಲ 5 ಎಸೆತ ಎದುರಿಸಿ ಖಾತೆಯನ್ನೂ ತೆರೆಯದೆ ನಿರ್ಗಮಿಸಿದರು. ಸ್ಪಿನ್ನರ್ ಕೇಶವ್ ಮಹಾರಾಜ್ ಎಸೆತದಲ್ಲಿ ಕವರ್‌ನಲ್ಲಿದ್ದ ಎದುರಾಳಿ ನಾಯಕ ಟೆಂಬಾ ಬವುಮಾಗೆ ಸುಲಭ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಲ್ಲದೆ ಕೊಹ್ಲಿ ಶೂನ್ಯದಲ್ಲಿ ದಾಖಲೆಯನ್ನೂ ಬರೆದರು. 71ನೇ ಶತಕದ ನಿರೀಕ್ಷೆಯಲ್ಲಿದ್ದವರಿಗೆ ಕೊಹ್ಲಿ 31ನೇ ಶೂನ್ಯದ ಮೂಲಕ ನಿರಾಸೆ ತಂದರು.

    ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2ನೇ ಅತ್ಯಧಿಕ ಸೊನ್ನೆ ಸುತ್ತಿದ ಭಾರತೀಯರೆಂಬ ವೀರೇಂದ್ರ ಸೆಹ್ವಾಗ್‌ರ (31) ಅನಪೇಕ್ಷಿತ ದಾಖಲೆ ಸರಿಗಟ್ಟಿದರು. ಸಚಿನ್ ತೆಂಡುಲ್ಕರ್ (34) ಅಗ್ರಸ್ಥಾನದಲ್ಲಿದ್ದಾರೆ. ಸೌರವ್ ಗಂಗೂಲಿ (29) 3ನೇ ಸ್ಥಾನದಲ್ಲಿದ್ದಾರೆ. 2018ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಒಟ್ಟು 3 ಶತಕ ಸಿಡಿಸಿ ಮಿಂಚಿದ್ದ ಕೊಹ್ಲಿ ಈ ಬಾರಿ ನಿರೀಕ್ಷಿತ ನಿರ್ವಹಣೆ ತೋರಿಲ್ಲ.

    ಕನ್ನಡಿಗ ಕೆಎಲ್ ರಾಹುಲ್‌ಗೆ ನಾಯಕತ್ವದ ಜತೆಗೆ ದಾಖಲೆ ಸಂಭಾವನೆ ನೀಡಿದ ಲಖನೌ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts