More

    ಪ್ರಧಾನಿ ನರೇಂದ್ರ ಮೋದಿಗಿಂತ ವಿರಾಟ್ ಕೊಹ್ಲಿ ಪ್ರಭಾವಿ!

    ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೀರಿಸಿದ್ದಾರೆ. ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನ ಜಾಗತಿಕ ಪ್ರಭಾವಿಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 12ನೇ ಸ್ಥಾನದಲ್ಲಿದ್ದು, ಅತ್ಯಂತ ಪ್ರಭಾವಿ ಭಾರತೀಯರೆನಿಸಿದ್ದಾರೆ. ಪ್ರಧಾನಿ ಮೋದಿ 20ನೇ ಸ್ಥಾನದಲ್ಲಿದ್ದು, ದೇಶದ 2ನೇ ಪ್ರಭಾವಿ ವ್ಯಕ್ತಿ ಎನಿಸಿದ್ದಾರೆ. ಪೋರ್ಚುಗಲ್ ಫುಟ್‌ಬಾಲ್ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ ಈ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ.

    ಜಾಗತಿಕ ಡೇಟಾ ಸಂಗ್ರಹ ಮತ್ತು ವಿಶ್ಲೇಷಣಾ ಸಂಸ್ಥೆ ‘ಹೈಪ್ ಆಡಿಟರ್’ ಈ ಲೆಕ್ಕಾಚಾರವನ್ನು ಹಾಕಿದ್ದು, ಇನ್‌ಸ್ಟಾಗ್ರಾಂನಲ್ಲಿ ಪ್ರಭಾವಿಯಾಗಿರುವ ವಿಶ್ವದೆಲ್ಲೆಡೆಯ ಒಂದು ಸಾವಿರ ಮಂದಿಯ ಪಟ್ಟಿಯನ್ನು ಸಿದ್ಧಪಡಿಸಿದೆ. ಇದರಲ್ಲಿ ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ 4ನೇ ಸ್ಥಾನದಲ್ಲಿದ್ದರೆ, ಬ್ರೆಜಿಲ್‌ನ ಫುಟ್‌ಬಾಲ್ ತಾರೆ ನೇಮರ್, ಕೊಹ್ಲಿ ನಂತರದಲ್ಲಿ 13ನೇ ಸ್ಥಾನದಲ್ಲಿದ್ದಾರೆ.

    ವಿರಾಟ್ ಕೊಹ್ಲಿ ಅವರ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮ ಅವರು ಈ ಪಟ್ಟಿಯಲ್ಲಿ 3ನೇ ಪ್ರಭಾವಿ ಭಾರತೀಯರಾಗಿದ್ದಾರೆ. ಶೀಘ್ರದಲ್ಲೇ ತಾಯಿಯಾಗುವ ನಿರೀಕ್ಷೆಯಲ್ಲಿರುವ ಅನುಷ್ಕಾ ಶರ್ಮ 26ನೇ ಸ್ಥಾನದಲ್ಲಿದ್ದಾರೆ. ಮತ್ತೋರ್ವ ಬಾಲಿವುಡ್ ನಟಿ ಕತ್ರಿಕಾ ಕೈಫ್​ 43ನೇ ಸ್ಥಾನದಲ್ಲಿದ್ದರೆ, ಕನ್ನಡತಿ ದೀಪಿಕಾ ಪಡುಕೋಣೆ 49ನೇ ಸ್ಥಾನದಲ್ಲಿದ್ದಾರೆ.

    ಮಗುವಿಗೆ ಬಾಟಲಿ ಹಾಲುಣಿಸಿ ಟೀಕೆಗೆ ಗುರಿಯಾದ ಹಾರ್ದಿಕ್ ಪಾಂಡ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts