More

    ಭಾರತ ತಂಡ 2ನೇ ಟೆಸ್ಟ್‌ನಲ್ಲೂ ಸೋತರೆ ನಾಯಕತ್ವಕ್ಕೆ ಕೊಹ್ಲಿ ರಾಜೀನಾಮೆ!?

    ನವದೆಹಲಿ: ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆಯಲ್ಲಿ ತವರಿಗೆ ಮರಳಿದ ನಡುವೆಯೂ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದ ಕೊನೇ 3 ಟೆಸ್ಟ್‌ಗಳಲ್ಲಿ ಉತ್ತಮ ನಿರ್ವಹಣೆ ತೋರಿ ಐತಿಹಾಸಿಕ ಸರಣಿ ಗೆಲುವನ್ನೂ ಕಂಡಿತ್ತು. ಆದರೆ ಇದೀಗ ತವರಿನಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧದ 4 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಉಪಸ್ಥಿತಿಯ ನಡುವೆಯೂ ಭಾರತ ತಂಡ ಆಘಾತಕಾರಿ ಆರಂಭ ಕಂಡಿದೆ. ಚೆನ್ನೈನ ಮೊದಲ ಟೆಸ್ಟ್‌ನಲ್ಲಿ 227 ರನ್‌ಗಳಿಂದ ಸೋಲು ಕಂಡ ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ಗೇರಬೇಕಾದರೆ ಉಳಿದ 3 ಟೆಸ್ಟ್‌ಗಳಲ್ಲೂ ಗೆಲುವು ಕಾಣಬೇಕಾದ ಒತ್ತಡಕ್ಕೆ ಸಿಲುಕಿದೆ. ಇದು ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಕಂಡ ಸತತ 4ನೇ ಸೋಲಾಗಿದೆ. ಇದರಿಂದಾಗಿ ಕೊಹ್ಲಿ ನಾಯಕತ್ವವೂ ಭಾರಿ ಟೀಕೆಯನ್ನು ಎದುರಿಸಿದೆ. ಈ ನಡುವೆ ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ಕುತೂಹಲಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ.

    ಇದನ್ನೂ ಓದಿ: ಆಗ ‘ಕ್ಯಾಪ್ಟನ್ ರಹಾನೆ’ಗೆ ಮೆಚ್ಚುಗೆ, ಈಗ ‘ಬ್ಯಾಟ್ಸ್‌ಮನ್ ರಹಾನೆ’ಗೆ ಟೀಕೆ!

    ಮಾಂಟಿ ಪನೇಸರ್ ಅವರ ಪ್ರಕಾರ ಭಾರತ ತಂಡ ಚೆನ್ನೈನಲ್ಲೇ ನಡೆಯಲಿರುವ 2ನೇ ಟೆಸ್ಟ್‌ನಲ್ಲೂ ಸೋಲು ಕಂಡರೆ ವಿರಾಟ್ ಕೊಹ್ಲಿ ನಾಯಕತ್ವಕ್ಕೆ ರಾಜೀನಾಮೆ ನೀಡಲಿದ್ದಾರೆ. ‘ವಿರಾಟ್ ಕೊಹ್ಲಿ ಸಾರ್ವಕಾಲಿಕ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಆದರೆ ಭಾರತ ತಂಡ ಇದೀಗ ಅವರ ನಾಯಕತ್ವದಲ್ಲಿ ಉತ್ತಮ ನಿರ್ವಹಣೆ ತೋರುತ್ತಿಲ್ಲ. ಅವರ ನಾಯಕತ್ವದಲ್ಲಿ ಆಡಿದ ಕೊನೆಯ 4 ಟೆಸ್ಟ್‌ಗಳಲ್ಲಿ ಭಾರತ ಉತ್ತಮ ನಿರ್ವಹಣೆ ತೋರಿಲ್ಲ. ಕೊಹ್ಲಿ ಈಗ ಭಾರಿ ಒತ್ತಡದಲ್ಲಿದ್ದಾರೆ. ಯಾಕೆಂದರೆ ಆಸ್ಟ್ರೇಲಿಯಾದಲ್ಲಿ ಭಾರತ ತಂಡ ಅಜಿಂಕ್ಯ ರಹಾನೆ ಸಾರಥ್ಯದಲ್ಲಿ ಉತ್ತಮ ನಿರ್ವಹಣೆ ತೋರಿತ್ತು. ಕೊಹ್ಲಿ ನಾಯಕತ್ವದಲ್ಲಿ ಭಾರತ ಈಗಾಗಲೆ 4 ಟೆಸ್ಟ್ ಸೋತಿದ್ದು, 5ನೇ ಟೆಸ್ಟ್‌ನಲ್ಲೂ ಸೋತರೆ ಕೊಹ್ಲಿ ನಾಯಕತ್ವವನ್ನು ತ್ಯಜಿಸಬಹುದು’ ಎಂದು ಪನೇಸರ್ ವಿವರಿಸಿದ್ದಾರೆ.

    ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಕಳೆದ 7 ವರ್ಷಗಳಿಂದ ತವರಿನಲ್ಲಿ ಉತ್ತಮ ನಿರ್ವಹಣೆಯನ್ನೇ ತೋರಿದೆ. ಅವರ ನಾಯಕತ್ವದ ಕೊನೇ 4 ಟೆಸ್ಟ್‌ಗೆ ಮುನ್ನ ಸತತ 7 ಟೆಸ್ಟ್‌ಗಳಲ್ಲಿ ಭಾರತ ಜಯಿಸಿತ್ತು. ಆದರೆ ಕಳೆದ ವರ್ಷಾರಂಭದಲ್ಲಿ ನ್ಯೂಜಿಲೆಂಡ್‌ನಲ್ಲಿ ಎರಡೂ ಟೆಸ್ಟ್ ಸೋತಿದ್ದ ಭಾರತ ತಂಡ ಕಳೆದ ವರ್ಷಾಂತ್ಯದಲ್ಲಿ ಆಸೀಸ್‌ನಲ್ಲಿ ಅಡಿಲೇಡ್ ಟೆಸ್ಟ್‌ನಲ್ಲಿ ಸೋಲು ಕಂಡಿತ್ತು. ಇದೀಗ ಚೆನ್ನೈ ಟೆಸ್ಟ್ ಸೋಲು ಕೊಹ್ಲಿ ನಾಯಕತ್ವದ ಮೇಲೆ ಇನ್ನಷ್ಟು ಒತ್ತಡ ಹೇರಿದೆ. ಈ ನಡುವೆ ಕೊಹ್ಲಿ ಕಳೆದ 32 ಅಂತಾರಾಷ್ಟ್ರೀಯ ಇನಿಂಗ್ಸ್‌ಗಳಿಂದ ಶತಕ ಕಂಡಿಲ್ಲ.

    ಒಂದು ರೂಪಾಯಿಗೆ ಊಟ ನೀಡುವ 2ನೇ ಕ್ಯಾಂಟೀನ್ ಆರಂಭಿಸಿದ ಗೌತಮ್ ಗಂಭೀರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts