More

    ವಿರಾಟ್​ ಕೊಹ್ಲಿ ಬದಲಿಗೆ ಈ ಆಟಗಾರನಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಬೇಕಿತ್ತು: ಗೌತಮ್​ ಗಂಭೀರ್​

    ಕೊಲಂಬೋ: ಸೋಮವಾರ ಪಾಕಿಸ್ತಾನ ವಿರುದ್ಧ ನಡೆದ ಏಷ್ಯಾಕಪ್ ಸೂಪರ್​-4 ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯಗಳಿಸಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ವಿರಾಟ್​ ಕೊಹ್ಲಿ ಹಾಗೂ ಕೆ.ಎಲ್​. ರಾಹುಲ್​ ಶತಕಗಳ ಫಲವಾಗಿ 50 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 356 ರನ್​ ಗಳಿಸಿತ್ತು. ಬೃಹತ್​ ಗುರಿ ಬೆನ್ನಟ್ಟಿದ್ದ ಪಾಕಿಸ್ತಾನಕ್ಕೆ ಕಡಿವಾಣ ಹೇರಿದ ಟೀಂ ಇಂಡಿಯಾದ ಬೌಲರ್​ಗಳು 128 ರನ್​ಗಳಿಗೆ ಎದುರಾಳಿ ತಂಡವನ್ನು ಆಲೌಟ್​ ಮಾಡಿತ್ತು.

    ಟೀಂ ಇಂಡಿಯಾ ಪರ ಬೌಲಿಂಗ್​ ಮಾಡಿದ ಕುಲ್​ದೀಪ್​ ಯಾದವ್​ (8-0-25-5) ಗರಿಷ್ಠ ವಿಕೆಟ್​ ಪಡೆದಿದ್ದಾರೆ. ಪಾಕಿಸ್ತಾನ ವಿರುದ್ಧ ಭರ್ಜರಿ ಬ್ಯಾಟಿಂಗ್​ ಮಾಡಿದ ವಿರಾಟ್​ ಕೊಹ್ಲಿ ಅವರನ್ನು ಪಂದ್ಯಶ್ರೇಷ್ಠನನ್ನಾಗಿ ಆಯ್ಕೆ ಮಾಡಲಾಯಿತು. ಆದರೆ, ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​ ಈ ವಿಚಾರವಾಗಿ ಅಪಸ್ವರ ತೆಗೆಯುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ವಿರಾಟ್​ ಬದಲಿಗೆ ಇವರಿಗೆ ನೀಡಬೇಕಿತ್ತು

    ಮಂದ್ಯ ಮುಗಿದ ಬಳಿಕ ಗೌತಮ್​ ಗಂಭೀರ್​ಗೆ ಈ ಪಂದ್ಯದಲ್ಲಿ ನಿಮ್ಮ ಪ್ರಕಾರ ಯಾವ ಆಟಗಾರ ಅದ್ಭುತ ಪ್ರದರ್ಶನ ನೀಡಿದ್ದಾರೆ ಎಂಬ ಪ್ರಶ್ನೆ ಕೇಳಲಾಯಿತು.​ ನನ್ನ ಪ್ರಕಾರ ಪಂದ್ಯಶೇಷ್ಠ ಪ್ರಶಸ್ತಿಗೆ ವಿರಾಟ್​ ಕೊಹ್ಲಿ ಅರ್ಹರು. ಆದರೆ, ನನ್ನ ಪ್ರಕಾರ ಈ ಪ್ರಶಸ್ತಿಯನ್ನು ಕುಲದೀಪ್​ ಯಾದವ್​ ಅವರಿಗೆ ನೀಡಬೇಕಿತ್ತು ಎಂದು ಹೇಳುವ ಮೂಲಕ ವಿರಾಟ್​ ಕೊಹ್ಲಿ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದಾರೆ.

    ವಿರಾಟ್​ ಕೊಹ್ಲಿ ಬದಲಿಗೆ ಈ ಆಟಗಾರನಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಬೇಕಿತ್ತು: ಗೌತಮ್​ ಗಂಭೀರ್​

    ಬಳಿಕ ತಮ್ಮ ಹೇಳಿಕೆ ಕುರಿತು ಸ್ಪಷ್ಠತೆ ನೀಡಿದ ಗಂಭೀರ್​, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕುಲದೀಪ್​ ಯಾದವ್​ ಐದು ವಿಕೆಟ್​ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಕುಲದೀಪ್​ ಪಾಕ್​ ಬ್ಯಾಟಿಂಗ್​ ಕ್ರಮಾಂಕದ ಬೆನ್ನೆಲುಬನ್ನು ಮುರಿಯುವ ಮೂಲಕ ಬೃಹತ್​ ಗುರಿಯನ್ನು ರಕ್ಷಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ನನ್ನ ಪ್ರಕಾರ ಕುಲದೀಪ್​ ಯಾದವ್​ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನೀಡಬೇಕು ಎಂದಿದ್ಧಾರೆ.

    ಇದನ್ನೂ ಓದಿ: ಸೋತರೆ ಪಕ್ಷ ವಿಸರ್ಜಿಸುತ್ತೇನೆ ಎಂದಿದ್ದರು, ಈಗ ಜಾತ್ಯಾತೀತತೆಯನ್ನು ವಿಸರ್ಜಿಸಲು ಹೊರಟಿದ್ದಾರೆ: ರಾಜ್ಯ ಕಾಂಗ್ರೆಸ್​

    ವಿರಾಟ್ ಹಾಗೂ ರಾಹುಲ್ ಶತಕ ಸಿಡಿಸಿದ್ದಾರೆಂದು ನನಗೆ ತಿಳಿದಿದೆ. ರೋಹಿತ್ ಮತ್ತು ಶುಭ್​ಮನ್ ಗಿಲ್ ಕೂಡ ಅರ್ಧಶತಕಗಳಿಸಿದ್ದಾರೆ. ಆದರೆ, ವೇಗದ ಬೌಲರ್​ಗಳಿಗೆ ಹೆಚ್ಚು ನೆರವಾಗುವ ಪಿಚ್​ನಲ್ಲಿ ಸ್ಪಿನರ್​ ಒಬ್ಬರು 8 ಓವರ್​ಗಳಲ್ಲಿ ಐದು ವಿಕೆಟ್​ಗಳನ್ನು ಪಡೆಯುವುದು ಅಷ್ಟು ಸುಲಭದ ಮಾತಲ್ಲ. ನನ ಪ್ರಕಾರ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಕುಲದೀಪ್​ ಯಾದವ್​ ಅವರನ್ನು ಹೊರತುಪಡಿಸಿದರೆ ಬೇರೆ ಅವರನ್ನು ನೋಡಲು ಸಾಧ್ಯವಿಲ್ಲ ಎಂದಿದ್ದಾರೆ.

    ನಿಮಗೆ ಶೋಭೆ ತರುವುದಿಲ್ಲ

    ಒಂದು ವೇಳೆ ಕುಲದೀಪ್​ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್​ ಹಾಗೂ ದಕ್ಷಿಣ ಆಫ್ರಿಕಾದ ವಿರುದ್ಧ ಈ ರೀತಿ ಪ್ರದರ್ಶನ ನೀಡಿದ್ದರೆ ನನಗೆ ಅಷ್ಟು ಸಂತೋಷವಾಗುತ್ತಿರಲಿಲ್ಲ. ಏಕೆಂದರೆ ಅವರು ಸ್ಪಿನ್​​ ವಿರುದ್ಧ ಚೆನ್ನಾಗಿ ಆಡುವುದಿಲ್ಲ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಸ್ಪಿನ್ ಬೌಲರ್​ಗಳನ್ನು ಅದ್ಭುತವಾಗಿ ಎದುರಿಸುವ ಪಾಕಿಸ್ತಾನದ ಬ್ಯಾಟರ್‌ಗಳ ವಿರುದ್ಧ ಆ ರೀತಿಯ ಪ್ರದರ್ಶನ ನೀಡಿದ ಕುಲದೀಪ್​ ನನ್ನ ಪ್ರಕಾರದಲ್ಲಿ ಪಂದ್ಯಶ್ರೇಷ್ಠ ಎಂದು ಗೌತಮ್​ ಗಂಭೀರ್​ ಹೇಳಿದ್ಧಾರೆ.

    ಇತ್ತ ಗೌತಮ್​ ಗಂಭೀರ್​ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿರುವ ನೆಟ್ಟಿಗರು ಭಾರತದ ಗೆಲುವಿನಲ್ಲಿ ವಿರಾಟ್​ ಕೊಹ್ಲಿ ಅವರ ಪಾತ್ರ ಅವಿಸ್ಮರಣೀಯವಾಗಿದೆ. ರಾಹುಲ್​ ಜೊತೆಗೂಡಿ ವಿರಾಟ್​ ಪಾಕ್​ ಬೌಲರ್​ಗಳನ್ನು ಎದುರಿಸಿದ ರೀತಿ ಬೇರೊಂದು ಮಟ್ಟಕ್ಕೆ ಹೋಗಿದೆ. ವಿರಾಟ್​ ವಿರುದ್ಧ ಈ ರೀತಿಯಾದ ಹೇಳಿಕೆಗಳನ್ನು ನೀಡುವುದರಿಂದ ನಿಮಗೆ ಶೋಭೆ ತರುವುದಿಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts