More

    ಮಗುವಿನ ಮುಖ ತೋರಿಸದ ವಿರಾಟ್ ಕೊಹ್ಲಿ-ಅನುಷ್ಕಾ ದಂಪತಿಗೆ ನೆಟ್ಟಿಗರಿಂದ ಪಾಠ

    ಮುಂಬೈ: ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಹಾಗೂ ಬಾಲಿವುಡ್​ ನಟಿ ಅನುಷ್ಕಾ ಶರ್ಮ ಜೋಡಿಗೆ ಕಳೆದ ಜನವರಿ ತಿಂಗಳಲ್ಲಿ ಹಿಂದೆ ಹೆಣ್ಣುಮಗವಿನ ಜನನವಾಯಿತು. ಈ ಜೋಡಿ ಇದುವರೆಗೂ ತಮ್ಮ ಮಗುವಿನ ಫೋಟೋವನ್ನು ಎಲ್ಲೂ ಬಿಡುಗಡೆಗೊಳಿಸಿಲ್ಲ. ಸಾರ್ವಜನಿಕವಾಗಿ ಕಂಡರೂ ಮಗುವಿನ ಮುಖಮುಚ್ಚಿಕೊಂಡೇ ಈ ಜೊಡಿ ಓಡಾಡುತ್ತದೆ. ಮೂರು ದಿನಗಳ ಹಿಂದಷ್ಟೇ ಈ ಜೋಡಿ ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸಿತು. ಈ ವೇಳೆ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಈ ಜೋಡಿಯ ಫೋಟೋ ತೆಗೆಯಲು ಮಾಧ್ಯಮ ಮಂದಿ ಕಾಯುತ್ತಿದ್ದ ನಿಂತಿದ್ದರು. ಆದರೆ, ಈ ಜೋಡಿ ಮಗುವಿನ ಮುಖಮುಚ್ಚಿಕೊಂಡೆ ಹೆಜ್ಜೆಹಾಕಿತು. ಈ ಸುದ್ದಿಯನ್ನು ಮಾಧ್ಯಮಗಳಲ್ಲಿ ಗಮನಿಸಿದ ನೆಟ್ಟಿಗರು, ಹೀಗೆ ಮಗುವಿನ ಮುಖ ಮುಚ್ಚಿದರೆ, ಮಗುವಿಗೆ ಉಸಿರುಕಟ್ಟುತ್ತದೆ ಎಂದು ಕೊಹ್ಲಿ ದಂಪತಿಗೆ ಎಚ್ಚರಿಕೆಯ ಜತೆಗೆ ಕಾಲೆಳೆದಿದ್ದಾರೆ.

    ಇದನ್ನೂ ಓದಿ: ಕ್ವಾರಂಟೈನ್​ ಬಗ್ಗೆ ಮಾಹಿತಿ ಬಿಚ್ಚಿಟ್ಟ ಟೀಮ್​ ಇಂಡಿಯಾ ಆಲ್ರೌಂಡರ್​ ಅಕ್ಷರ್​ ಪಟೇಲ್​

    ವಿರಾಟ್​ ಕೊಹ್ಲಿ ದಂಪತಿ ಮಗುವನ್ನು ಅತಿಯಾಗಿ ಮುಚ್ಚಿಡಬಾರದು. ಹೀಗೆ ಮಾಡಿದರೆ ಉಸಿರುಗಟ್ಟುತ್ತದೆ. ಇದು ಅತಿಯಾಯಿತು ಎಂದರೆ, ಇನ್ನು ಕೆಲಮಂದಿ ತಮ್ಮ ಮುಖಮುಚ್ಚಿಕೊಳ್ಳುವ ಸಲುವಾಗಿ ಮಗುವನ್ನುಹಿಗೆ ಬಿಗಿದಪ್ಪಿಕೊಳ್ಳುವುದು ಎಷ್ಟು ಸರಿ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ದಿಗ್ಗಜ ಮಿಲ್ಖಾ ಸಿಂಗ್​ ಆರೋಗ್ಯ ವಿಚಾರಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದ

    ಪತ್ನಿ ಅನುಷ್ಕಾ ಹಾಗೂ ಮಗಳು ವಮಿಕಾ ಕಂಡರೆ ಮುಗಿ ಬೀಳುವ ಮಾಧ್ಯಮಗಳ ವಿರುದ್ಧ ವಿರಾಟ್​ ಕೊಹ್ಲಿ ಎಷ್ಟೋ ಬಾರಿ ಸಿಟ್ಟಾಗಿದ್ದು ಉಂಟು. ವೈಯಕ್ತಿಕ ಜೀವನಕ್ಕೆ ದಕ್ಕೆ ಉಂಟಾಗುತ್ತದೆ. ದಯವಿಟ್ಟು ನಮ್ಮ ಪಾಡಿಗೆ ಬಿಡಿ ಎಂದು ಹೇಳಿದ್ದರು. ಜೂನ್​ 2 ರಂದು ಭಾರತ ತಂಡ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ಪಂದ್ಯ ಹಾಗೂ ಇಂಗ್ಲೆಂಡ್​ ವಿರುದ್ಧ 5 ಪಂದ್ಯಗಳ ಟೆಸ್ಟ್​ ಸರಣಿ ಆಡುವ ಸಲುವಾಗಿ ಭಾರತ ತಂಡ ಇಂಗ್ಲೆಂಡ್​ನತ್ತ ಪ್ರಯಾಣ ಬೆಳೆಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts