More

    ನೇರ ಸಂದರ್ಶನದ ವೇಳೆ ವರದಿಗಾರ್ತಿ ಜತೆ ಪುರುಷ ರೋಬೋಟ್ ಅಸಹ್ಯ ವರ್ತನೆ; ವಿಡಿಯೋ ವೈರಲ್

    ಸೌದಿ ಅರೇಬಿಯಾ: ರೋಬೋಟ್‌ಗಳ ಬಳಕೆ ವಿಶ್ವಾದ್ಯಂತ ಹೆಚ್ಚುತ್ತಿದ್ದು, ರೋಬೋಟ್ ತಂತ್ರಜ್ಞಾನ ಮುಂದುವರಿದಿದೆ. ಈಗ ಹುಮನಾಯ್ಡ್ ರೋಬೋಟ್‌ (Humanoid robots) ಗಳ ಯುಗ. ಮಾನವ ರೂಪದಲ್ಲಿ ರೋಬೋಟ್‌ಗಳು ಚಾಲ್ತಿಯಲ್ಲಿವೆ. ಆದರೆ ಇವು ಯಂತ್ರಗಳಾಗಿರುವುದರಿಂದ ದೋಷಕ್ಕೆ ಅವಕಾಶವಿದೆ. ಅಂದಹಾಗೆ ಸೌದಿ ಅರೇಬಿಯಾದಲ್ಲಿ ಹುಮನಾಯ್ಡ್ ರೋಬೋಟ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ವೇಳೆ ಅದು ಅಸಹ್ಯಕರವಾಗಿ ನಡೆದುಕೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ.

    ಹುಮನಾಯ್ಡ್ ರೋಬೋಟ್ ಬಿಡುಗಡೆಯ ಸಂದರ್ಭದಲ್ಲಿ ಲೈವ್ ಕ್ಯಾಮೆರಾದಲ್ಲಿ ಮಹಿಳಾ ವರದಿಗಾರ್ತಿಗೆ ಕಿರುಕುಳ ನೀಡಲಾಗಿದ್ದು ಇದರ ವಿಡಿಯೋ ವೈರಲ್ ಆಗುತ್ತಿದೆ. ಜನರು ಇದನ್ನು ಅಸಭ್ಯ ರೋಬೋಟ್ ಎಂದು ಕರೆಯುತ್ತಿದ್ದಾರೆ. ಸೌದಿ ಅರೇಬಿಯಾದ ಮೊದಲ ಹುಮನಾಯ್ಡ್ ರೋಬೋಟ್ ‘ಆಂಡ್ರಾಯ್ಡ್ ಮಹಮ್ಮದ್’ ಬಗ್ಗೆ ವರದಿ ಮಾಡಲು ಬಂದಿದ್ದ ಸುದ್ದಿ ವರದಿಗಾರ್ತಿ ರಾವ್ಯಾ ಅಲ್-ಖಾಸಿಮಿ ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.

    ವರದಿಗಾರ್ತಿಗೆ ಅನುಚಿತವಾಗಿ ಸ್ಪರ್ಶಿಸಿದ ರೋಬೋಟ್‌
    ವರದಿಗಾರ್ತಿ ರೋಬೋಟ್‌ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾಗ ಅದು ಆಕೆಯನ್ನು ಹಿಂದಿನಿಂದ ಮುಟ್ಟಿತು. ಇದರಿಂದ ವರದಿಗಾರ್ತಿಗೆ ಅನಾನುಕೂಲ ಉಂಟಾಯಿತು. ಆ ವೇಳೆ ಒರ್ವ ಪುರುಷ ವರದಿಗಾರನೂ ಅಲ್ಲಿ ನಿಂತಿದ್ದರು. ರೋಬೋಟ್‌ನ ಕೈಗಳ ಚಲನೆ ಇಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಈ ವಿಡಿಯೋವನ್ನು ತನ್ಸು ಯೆಗೆನ್ ಎಂಬುವವರು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.

    ರೋಬೋಟ್‌ನ ಅಸಭ್ಯ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜನರು ಇದನ್ನು ಲೈಂಗಿಕ ಕಿರುಕುಳ ಎಂದು ಹೇಳುತ್ತಿದ್ದಾರೆ. ಈ ಘಟನೆಯು AI ಯ ಅಪಾಯ ಸೂಚಿಸುತ್ತದೆ. ಈ ತಂತ್ರಜ್ಞಾನದ ಬಗ್ಗೆ ಇನ್ನೂ ಹಲವು ಪ್ರಶ್ನೆಗಳಿವೆ. ಅದರ ಆಗಮನದಿಂದ, ಜನರ ಜೀವನವು ಸುಲಭವಾಗುವುದಲ್ಲದೆ, ಅದೇ ಸಮಯದಲ್ಲಿ ಅನೇಕ ರೀತಿಯ ಅಪಾಯಗಳು ಹೆಚ್ಚಾಗುತ್ತವೆ.

    ‘ನಾನು ಮಹಮ್ಮದ್’
    ಸಿಯಾಸತ್ ದಿನಪತ್ರಿಕೆಯ ಪ್ರಕಾರ, ರಿಯಾದ್‌ನಲ್ಲಿ ನಡೆದ ಡೀಪ್‌ಫಾಸ್ಟ್‌ನ ಎರಡನೇ ಆವೃತ್ತಿಯಲ್ಲಿ ಹುಮನಾಯ್ಡ್ ಅನ್ನು ಅನಾವರಣಗೊಳಿಸಲಾಯಿತು. ಮೊಹಮ್ಮದ್ ಎಂಬ ರೋಬೋಟ್, “ನಾನು ಮೊಹಮ್ಮದ್, ಮಾನವ ರೂಪದಲ್ಲಿರುವ ಸೌದಿಯ ಮೊದಲ ರೋಬೋಟ್” ಎಂದು ಹೇಳಿದೆ. ಹುಮನಾಯ್ಡ್ ರೋಬೋಟ್‌ಗಳ ಬಗ್ಗೆ ಪ್ರಪಂಚದಾದ್ಯಂತ ಹಲವು ರೀತಿಯ ಸುದ್ದಿಗಳು ಬರಲಾರಂಭಿಸಿವೆ.

    ‘ಮಿಸ್ ವರ್ಲ್ಡ್’ ಸ್ಪರ್ಧೆಯಲ್ಲಿ ಬಿಕಿನಿಯನ್ನು ಧರಿಸುವ ಕಲ್ಪನೆ ಹೇಗೆ ಬಂತು..? 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts