More

    ‘ತಪ್ಪು ತಿಳಿಬೇಡ್ರಪ್ಪೋ ಇದು ಪುರುಷರ ಹೊಸ ಪ್ಯಾಂಟು…’ನೀವು ಇದನ್ನು ಯಾವುದಕ್ಕೆ ಬೇಕಾದ್ರೂ ಹೋಲಿಸಿ; ಡಿಸೈನರ್​ಗೆ ಮಾತ್ರ ನಾಯಿಯೇ ಸ್ಫೂರ್ತಿ !

    ನವದೆಹಲಿ: ಈ ಕಾಲದಲ್ಲಿ ಫ್ಯಾಷನ್​ ಎಂಬುದು ದಿನೇದಿನೆ ಬದಲಾಗುತ್ತಿದೆ. ಫ್ಯಾಷನ್​ ಲೋಕ ಅಕ್ಷರಶಃ ಬಣ್ಣಬಣ್ಣದ ಮಾಯಾಲೋಕವಾಗಿದೆ.

    ಫ್ಯಾಷನ್​ ಎಂಬುದು ಕೇವಲ ಮಹಿಳೆಯರಿಗೆ ಸೀಮಿತವಲ್ಲ, ಪುರುಷರಿಗೆ ಹೊಂದುವ ವಿವಿಧ ವೇಷಭೂಷಣಗಳೂ ಈಗೀಗ ಪ್ರಸಿದ್ಧಿಯಾಗುತ್ತಿವೆ. ಒಮ್ಮೊಮ್ಮೆ ಅತಿ ಎನ್ನುವ, ವಿಚಿತ್ರ ಎನ್ನಿಸುವ ಉಡುಪುಗಳೂ ಫ್ಯಾಷನ್​ ಎಂದೇ ಪರಿಗಣಿಸಲ್ಪಟ್ಟಿವೆ. ಈಗ ಇಂತದ್ದೇ ಒಂದು ವಿಚಿತ್ರ ಉಡುಪು, ಫ್ಯಾಷನ್​ ಎಂಬ ಹೆಸರು ಪಡೆದುಕೊಂಡು ಇಂಟರ್​ನೆಟ್​ನಲ್ಲಿ ಸಂಚಲನ ಮೂಡಿಸುತ್ತಿದೆ. ನೆಟ್ಟಿಗರು ನಗುತ್ತಿದ್ದಾರೆ. ಸಿಕ್ಕಾಪಟೆ ಮೀಮ್ಸ್​ಗಳ ಮೂಲಕ ಕಾಲೆಳೆಯುತ್ತಿದ್ದಾರೆ.

    ಅಷ್ಟಕ್ಕೂ ಇದು ಪುರುಷರ ಪ್ಯಾಂಟ್​ಗೆ ಸಂಬಂಧಪಟ್ಟ ವಿಷಯ. ಈ ಹೊಸ ವಿನ್ಯಾಸದ ಲ್ಯಾಟೆಕ್ಸ್​ ಪ್ಯಾಂಟ್​ ಬಗ್ಗೆ ಇಂಟರ್​ನೆಟ್​ನಲ್ಲಿ ಸಿಕ್ಕಾಪಟೆ ಚರ್ಚೆಯಾಗುತ್ತಿದೆ. ಅದನ್ನು ಟೀಕಿಸುವ ಮೀಮ್ಸ್​​ಗಳನ್ನು ನೆಟ್ಟಿಗರು ಸಾಲುಸಾಲಾಗಿ ಹರಿಬಿಡುತ್ತಿದ್ದಾರೆ.

    ವಸ್ತ್ರ ವಿನ್ಯಾಸಕಾರ ಹರಿಕೃಷ್ಣ ಎಂಬುವರು ಪುರುಷರ ಲ್ಯಾಟೆಕ್ಸ್​ ಪ್ಯಾಂಟನ್ನು ಪರಿಚಯಿಸಿದ್ದಾರೆ. ಆದರೆ ಇದು ನಾರ್ಮಲ್​ ಆಗಿ ಇಲ್ಲ. ಬದಲಾಗಿ ಗಾಳಿ ತುಂಬಿದ ಲ್ಯಾಟೆಕ್ಸ್​ ಪ್ಯಾಂಟ್​ಗಳು. ಪುರುಷ ರೂ​ಪದರ್ಶಿಗಳು ಈ ಉಬ್ಬಿದ ಪ್ಯಾಂಟ್​ಗಳನ್ನು ಧರಿಸಿ, ಮುಖದಲ್ಲಿ ಕಿಂಚಿತ್ತೂ ಭಾವವಿಲ್ಲದೆ ಕ್ಯಾಟ್​ವಾಕ್​​ ಮಾಡುತ್ತಿರುವ ಫೋಟೋಗಳು ವೈರಲ್​ ಆಗಿವೆ. ಗಾಳಿ ತುಂಬಬಹುದಾದದ ಈ ಲ್ಯಾಟೆಕ್ಸ್​ ಪ್ಯಾಂಟ್​ಗಳು ಉಬ್ಬಿಕೊಂಡಿರುವ ಪ್ಯಾರಾಚೂಟ್​ನಂತೆ, ಬಲೂನುಗಳಂತೆ ಕಾಣುತ್ತವೆ. ಆಯಾ ಪ್ಯಾಂಟ್​ಗಳಿಗೆ ತಕ್ಕಂತೆ, ಅದಕ್ಕೆ ಹೊಂದಿಕೊಳ್ಳುವ ಬ್ಲೇಜರ್​ಗಳನ್ನು, ಜಾಕೆಟ್​ಗಳನ್ನೂ ವಿನ್ಯಾಸ ಮಾಡಲಾಗಿದೆ. ಲ್ಯಾಟೆಕ್ಸ್ ಪ್ಯಾಂಟ್​ಗಳಿಗೆ 3-D ಸ್ಪರ್ಶವನ್ನೂ ಕೊಡಲಾಗಿದೆ.

    ಹೊಸ ವಿನ್ಯಾಸದ ಲ್ಯಾಟೆಕ್ಸ್ ಪ್ಯಾಂಟ್​ಗಳು ಸೊಂಟದ ಬಳಿ ಫಿಟ್​ ಆಗಿರುತ್ತವೆ. ಅದೆ ಕೆಳಗೆ ಬರುತ್ತಲೇ ಉಬ್ಬಿಕೊಂಡಿರುತ್ತವೆ. ಹಾಗೇ ಪಾದದ ಬಳಿ ಪ್ಯಾಂಟ್​ನ ತುದಿ ಬಿಗಿಯಾಗಿರುತ್ತದೆ. ಇದು ನೋಡಲು ಥೇಟ್​ ಬಲೂನ್​ಗಳಂತೆ ಕಾಣುತ್ತವೆ.

    ಈ ಪ್ಯಾಂಟ್​​​​​ಗಳನ್ನು ಪರಿಚಯಿಸಿರುವ ಹರಿಕೃಷ್ಣ ಅವರು ಲಂಡನ್​ನ ಕಾಲೇಜೊಂದರಲ್ಲಿ ಫ್ಯಾಷನ್​ ಪದವಿ ಪಡೆಯುತ್ತಿದ್ದಾರೆ.

    ಇಂಥ ಬಲೂನ್​ ಮಾದರಿಯ ಪ್ಯಾಂಟ್​ಗಳು ತುಂಬ ಕಡಿಮೆ ಸಮಯದಲ್ಲಿ ನೆಟ್ಟಿಗರ ಗಮನ ಸೆಳೆದಿವೆ. ಕೆಲವರು ಡಿಸೈನರ್​ ಹರಿಕೃಷ್ಣ ಅವರ ಕ್ರಿಯಾಶೀಲತೆಯನ್ನು ಸಿಕ್ಕಾಪಟ್ಟೆ ಹೊಗಳುತ್ತಿದ್ದಾರೆ. ಇವು ಭವಿಷ್ಯದ ಪ್ಯಾಂಟ್​ಗಳು ಎನ್ನುತ್ತಿದ್ದಾರೆ.

    ಇನ್ನು ಈ ಬಗ್ಗೆ ಡಿಸೈನರ್​ ಹರಿಕೃಷ್ಣ ಮಾತನಾಡಿದ್ದು, ನನಗೆ ಈ ಪ್ಯಾಂಟ್​ ವಿನ್ಯಾಸ ತಲೆಯಲ್ಲಿ ಬಂದಿದ್ದು ನನ್ನ ನಾಯಿಯ ಜತೆ ಆಡುವಾಗ. ಆ ನಾಯಿಯ ಮೊಲೆಗಳು ಅಷ್ಟು ಚಿಕ್ಕದಾಗಿ ಇರುತ್ತದೆ. ಆದರೆ ಮರಿಗಳು ಹುಟ್ಟಿದಾಗ ಅವು ಜೋತುಬಿದ್ದಂತಾಗುತ್ತವೆ. ಅದನ್ನು ನೋಡಿಯೇ ನಾನು ಪ್ಯಾಂಟ್​ಗಳನ್ನು ವಿನ್ಯಾಸಗೊಳಿಸಿದ್ದೇನೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts