More

    ಕೊರನಾ ಭೀತಿಯಿಂದ ಇಡೀ ಭಾರತಕ್ಕೆ ಬೀಗಮುದ್ರೆ ಬೀಳಲಿದೆಯಾ? ಕೇಂದ್ರ ಸರ್ಕಾರ ಹೇಳಿದ್ದೇನು?

    ನವದೆಹಲಿ: ಕರೊನಾ ಭೀತಿಯಿಂದ ಇಡೀ ಭಾರತಕ್ಕೆ ಬೀಗಮುದ್ರೆ ಬೀಳಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೋ ತುಣುಕು ಸುಳ್ಳೆಂದು ಕೇಂದ್ರ ಸರ್ಕಾರದ ಪ್ರೆಸ್​ ಇನ್ಫರ್ಮೇಶನ್​ ಬ್ಯೂರೋ(ಪಿಐಬಿ) ಖಚಿತಪಡಿಸಿದೆ.

    ಈ ಕುರಿತು ಟ್ವೀಟ್​ ಮಾಡಿರುವ ಪಿಐಬಿ, ಇಡೀ ಭಾರತಕ್ಕೆ ಬೀಗಮುದ್ರೆ ಬೀಳಲಿದೆ ಎಂದು ವಾಟ್ಸ್​ಆ್ಯಪ್​ಗಳಲ್ಲಿ ಆಡಿಯೋ ತುಣುಕೊಂದು ಹರಿದಾಡುತ್ತಿದೆ. ಅದು ಸಂಪೂರ್ಣ ನಕಲಿಯಾಗಿದ್ದು, ಭಯಹುಟ್ಟಿಸುವ ಉದ್ದೇಶದಿಂದ ಹರಿಬಿಡಲಾಗಿದೆ ಎಂಬುದನ್ನು ಖಚಿತಪಡಿಸುತ್ತೇವೆ ಎಂದಿದೆ.

    ಕೊನೆಯಲ್ಲಿ ಆಡಿಯೋ ತುಣುಕನ್ನು ಮತ್ತೊಬ್ಬರಿಗೆ ಫಾರ್ವರ್ಡ್​ ಮಾಡಬೇಡಿ, ಇನ್ನೊಬ್ಬರಿಗೆ ಸಹಾಯ ಮಾಡಿದರೆ, ಅದು ನಮಗೆ ಒಳಿತಾಗುತ್ತದೆ ಎಂದು ಪಿಐಬಿ ತಿಳಿಸಿದೆ.

    ಭಾರತದಲ್ಲಿ ಕೊರನಾ ಮಹಾಮಾರಿ ಭೀತಿಯನ್ನು ಸೃಷ್ಟಿಸಿದ್ದು, ಈಗಾಗಲೇ ಇಬ್ಬರನ್ನು ಬಲಿಪಡೆದುಕೊಂಡಿದೆ. ಸೋಂಕಿತರ ಸಂಖ್ಯೆ 110ಕ್ಕೇ ಏರಿದೆ. ಜಾಗತಿಕವಾಗಿ 6 ಸಾವಿರಕ್ಕೂ ಹೆಚ್ಚು ಮಂದಿ ಕರೊನಾ ವೈರಸ್​ಗೆ ಬಲಿಯಾಗಿದ್ದಾರೆ. ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವದಂತಿಗಳು ಕೂಡ ಹರಿದಾಡುತ್ತಿದ್ದು, ಅವುಗಳಿಗೆ ಕಿವಿಗೊಡಬೇಡಿ ಎಂಬುದು ಸರ್ಕಾರ ಕಳಕಳಿಯಾಗಿದೆ. (ಏಜೆನ್ಸೀಸ್​)

    ಕರೊನಾ ವೈರಸ್​ ಹುಟ್ಟಿದ್ದು ಎಲ್ಲಿ? Covid-19 ಹೆಸರು ಹೇಗೆ ಬಂತು ಗೊತ್ತಾ?

    ಕರೊನಾದಲ್ಲೂ ಹೆಚ್ಚುತ್ತಿದೆ ಸೌಂದರ್ಯ ಪ್ರೇಮ; ನೈಲ್​ ಆರ್ಟ್​ ಮೂಲಕ ಕರೊನಾ ಜಾಗೃತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts