More

    ಮೇ 18: ಪಲಿಮಾರು ಮಠದಲ್ಲಿ ವಿಪ್ರ ಯುವಕರ ಸಮಾವೇಶ

    ಉಡುಪಿ: ಯುವಕರು ಐಟಿ-ಬಿಟಿ, ವೈದ್ಯಕಿಯ ಪದವಿಯೊಂದಿಗೆ ಮಹಾನಗರ ಸೇರುತ್ತಿದ್ದು, ಮೂಲ ಮನೆಗಳು ವೃದ್ಧಾಶ್ರಮಗಳಾಗುತ್ತಿವೆ. ಹಳ್ಳಿಗೆ ಬರಲೊಪ್ಪದ ಮಕ್ಕಳನ್ನು ಆಶ್ರಯಿಸಿಕೊಂಡು ಲವತ್ತಾದ ಭೂಮಿ, ಮನೆ ಮಾರಿ ಪಟ್ಟಣ ಸೇರುವ ಪರಿಸ್ಥಿತಿ ಹಿರಿಯರದ್ದಾಗಿದೆ. ಸ್ಥಿತ್ಯಂತರದ ಕಾಲಟ್ಟದಲ್ಲಿ ಬ್ರಾಹ್ಮಣ ಯುವಕರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇವೆಲ್ಲವುಗಳಿಗೆ ಪರಿಹಾರೋಪಾಯ ಕಂಡುಕೊಳ್ಳುವ ನಿಟ್ಟಿನಲ್ಲಿ ಪಲಿಮಾರು ಶ್ರೀಗಳ ಮಾರ್ಗದರ್ಶನದಲ್ಲಿ ಪ್ರಥಮ ಬಾರಿಗೆ ಉಡುಪಿ ಮತ್ತು ದ.ಕ. ಜಿಲ್ಲೆಯ ತ್ರಿಮತಸ್ಥ ವಿಪ್ರ ಯುವಕರ ಸಮಾವೇಶ ಆಯೋಜಿಸಲಾಗುತ್ತಿದೆ.

    ಪಲಿಮಾರು ಮೂಲ ಮಠದಲ್ಲಿ ಮೇ 18ರಂದು ಬೆಳಿಗ್ಗೆ 8ರಿಂದ ಸಾಯಂಕಾಲ 5ರ ತನಕ ವಿವಿಧ ಧಾರ್ಮಿಕ ವಿಧಿ, ವಿಚಾರ ಗೋಷ್ಠಿ, ಮುಕ್ತ ಸಂವಾದದೊಂದಿಗೆ ಯುವ ವಿಪ್ರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯ 18 ರಿಂದ -40 ರ ವಯೋಮಿತಿಯ ತ್ರಿಮತಸ್ಥ ಬ್ರಾಹ್ಮಣ ಯುವಕರು ಪ್ರತಿನಿಧಿಗಳಾಗಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ ಸೇರಿದಂತೆ ಬೇರೆಡೆಗಳಲ್ಲಿ ವಿದ್ಯಾರ್ಜನೆ ಮತ್ತು ಉದ್ಯೋಗ, ವ್ಯವಹಾರಗಳನ್ನು ನಡೆಸುತ್ತಿರುವ ದ.ಕ ಮತ್ತು ಉಡುಪಿ ಮೂಲದ ವಿಪ್ರ ಯುವಕರೂ ಪಾಲ್ಗೊಳ್ಳಬಹುದು.

    ಯುವಮನಸ್ಸುಗಳೊಂದಿಗೆ ಚಿಂತನ-ಮಂಥನ
    ಬ್ರಾಹ್ಮಣ ಸಮಾಜದ ಪಾರಂಪರಿಕ ಜೀವನಕ್ರಮಗಳು ಮತ್ತು ಸಂರಕ್ಷಣೆಯ ಅನಿವಾರ್ಯತೆ, ಸಮುದಾಯವು ಆಂತರಿಕವಾಗಿ ಮತ್ತು ಬಾಹ್ಯ ವಾಗಿ ಎದುರಿಸುತ್ತಿರುವ ಸವಾಲುಗಳ ಕುರಿತಾಗಿ ಯುವ ಮನಸ್ಸುಗಳ ನಡುವೆ ಚಿಂತನ&ಮಂಥನ ನಡೆಯಲಿದೆ. ಮುಖ್ಯವಾಗಿ ಉದ್ಯೋಗ ನಿಮಿತ್ತ ಹೊರ ಜಿಲ್ಲೆ&ಹೊರ ರಾಜ್ಯದಲ್ಲಿರುವ ವಿಪ್ರ ಯುವಕರಿಗೆ ಮೂಲ ಸಂಸತಿಯ ತಿಳುವಳಿಕೆ ನೀಡುವುದು, ಸಂಸತ ಅಧ್ಯಯನಕ್ಕೆ ಒತ್ತು, ವೃತ್ತಿಪರ ಕೆಲಸಕಾರ್ಯಗಳ ಮಧ್ಯೆ ನಿತ್ಯಾನುಷ್ಠಾನ ನಡೆಸುವ ಕ್ರಮ, ಮುಂದಿನ ಪೀಳಿಗೆಗೆ ಆಚಾರ&ವಿಚಾರಗಳ ಅರಿವು ಮೂಡಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ದಿನವಿಡೀ ಚರ್ಚೆ&ಸಂವಾದ ನಡೆಯಲಿದೆ. ಅನೇಕ ಮಠಾಧೀಶರು, ಸಮಾಜದ ಮುಖಂಡರು ಭಾಗವಹಿಸುತ್ತಿದ್ದಾರೆ. ಈಗಾಗಲೇ 500ಕ್ಕೂ ಹೆಚ್ಚು ಮಂದಿ ಯುವಕರು ನೋಂದಣಿ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಯುವತಿಯರ ಕುಂದು&ಕೊರತೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಮಾವೇಶ ಆಯೋಜಿಸಲಾಗುತ್ತಿದೆ.

    ಪೇಜಾವರ ಶ್ರೀಗಳಿಗೆ ಅಭಿನಂದನೆ
    ಇದೇ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠೆ ಮತ್ತು ಮಂಡಲೋತ್ಸವಗಳನ್ನು ವೈಭವದಿಂದ ನೆರವೇರಿಸಿದ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಪಲಿಮಾರು ಮಠದ ವತಿಯಿಂದ ಅಭಿನಂದಿಸುವ ಕಾರ್ಯಕ್ರಮ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts