More

    ಕ್ರೀಡಾಂಗಣದ ಒಳಹೊಕ್ಕು ಅಥ್ಲೆಟಿಕ್​ ಟ್ರ್ಯಾಕನ್ನು ಆಕ್ರಮಿಸಿಕೊಂಡ ವಿಐಪಿ ಕಾರುಗಳು!

    ಪುಣೆ : ಭಾರತದಲ್ಲಿ ಕ್ರೀಡಾಪಟುಗಳಿಗೆ ಸಾಕಷ್ಟು ಸೌಲಭ್ಯಗಳಿಲ್ಲದಿದ್ದರೂ ಸಾಧನೆಯ ಪಥ ಹಿಡಿದು ಶ್ರಮಿಸುತ್ತಿದ್ದಾರೆ. ಅಂತಹುದರಲ್ಲಿ ಇರುವ ಮೂಲಸೌಕರ್ಯಗಳ ಬಗ್ಗೆಯೂ ಉಡಾಫೆ ಮನೋಭಾವ ತೋರುವುದು ಎಷ್ಟು ಸಮಂಜಸ? ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ರಾಜಕೀಯ ನಾಯಕರು ಈ ರೀತಿಯ ದುರ್ವರ್ತನೆ ತೋರಿ ಸುದ್ದಿ ಮಾಡಿದ್ದಾರೆ.

    ಜೂನ್ 26 ರಂದು ಪುಣೆಯ ಶಿವ ಛತ್ರಪತಿ ಸ್ಪೋರ್ಟ್ಸ್​ ಕಾಂಪ್ಲೆಕ್ಸ್​ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಲು ಹೋದ ಗಣ್ಯರು, ಕ್ರೀಡಾಂಗಣದ ಒಳಗಡೆ ಅಥ್ಲೀಟ್​ಗಳು ಓಟದ ಅಭ್ಯಾಸ ಮಾಡಲು ಬಳಸುವ ವಿಶೇಷ ಟ್ರ್ಯಾಕ್​ನ ಮೇಲೆ ತಮ್ಮ ಕಾರುಗಳನ್ನು ಪಾರ್ಕ್​ ಮಾಡಿಸಿದ್ದಾರೆ! ಎನ್​ಸಿಪಿ ಮುಖ್ಯಸ್ಥ ಹಾಗೂ ಇಂಡಿಯನ್ ಒಲಂಪಿಕ್​ ಅಸೋಸಿಯೇಷನ್ನಿನ ಅಧ್ಯಕ್ಷರಾಗಿರುವ ಶರದ್​ ಪವಾರ್​, ಮಹಾರಾಷ್ಟ್ರ ಕ್ರೀಡಾ ಸಚಿವ ಸುನಿಲ್​ ಕೇದಾರ್ ಮತ್ತು ಮತ್ತೊಬ್ಬ ಸಚಿವೆ ಅದಿತಿ ತತ್ಕರೆ ಮುಂತಾದವರ ವಾಹನಗಳು ಟ್ರ್ಯಾಕ್​ನ ಮೇಲೆ ಕಂಡುಬಂದವು ಎನ್ನಲಾಗಿದೆ.

    ಇದನ್ನೂ ಓದಿ: ಪುಲ್ವಾಮಾದಲ್ಲಿ ಪೊಲೀಸ್​ ವಿಶೇಷ ಅಧಿಕಾರಿ ಮತ್ತು ಪತ್ನಿಯನ್ನ ಗುಂಡಿಕ್ಕಿ ಕೊಂದ ಉಗ್ರರು

    ಪುಣೆಯ ಶಿವಾಜಿನಗರ ಕ್ಷೇತ್ರದ ಬಿಜೆಪಿ ಶಾಸಕ ಸಿದ್ಧಾರ್ಥ್ ಶಿರೋಲೆ ಈ ಬಗ್ಗೆ ತಿಳಿಸುತ್ತಾ, ಅಥ್ಲೆಟಿಕ್​ ಸಮುದಾಯಕ್ಕೆ ಅಗೌರವ ತೋರಿಸುವ ವಿಐಪಿ ಸಂಸ್ಕೃತಿ ಮತ್ತು ಉದ್ಧಟತನ ಇದು ಎಂದು ಟ್ವೀಟ್​ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಕ್ರೀಡಾ ಸಚಿವ ಕಿರೆನ್​ ರಿಜಿಜು ಅವರು ಕ್ರೀಡೆಗಳ ಬಗ್ಗೆ ಈ ರೀತಿಯ ಅಗೌರವ ನೋಡಲು ವಿಷಾದವೆನಿಸುತ್ತದೆ. ನಮ್ಮ ದೇಶದಲ್ಲಿ ಸಾಕಷ್ಟು ಕ್ರೀಡಾ ಸೌಲಭ್ಯಗಳು ಇಲ್ಲದಿರುವಾಗ, ಎಲ್ಲಾ ಕ್ರೀಡಾ ಕೇಂದ್ರಗಳಿಗೂ ಸೂಕ್ತ ಉಪಚಾರದ ಅವಶ್ಯಕತೆ ಇದೆ ಎಂದಿದ್ದಾರೆ. (ಏಜೆನ್ಸೀಸ್)

    “ಶಾಲೆಗಳು ತೆರೆಯಬೇಕೆಂದರೆ ಮಕ್ಕಳಿಗೆ ಕರೊನಾ ಲಸಿಕೆ ಲಭ್ಯವಾಗಬೇಕು”

    ಪೊಲೀಸ್​ ಇಲಾಖೆ ವೆಬ್​ಸೈಟ್​ಗೆ ಹೊಸ ರೂಪ! ಅಪೂರ್ಣ ಕೆಎಸ್​ಪಿ ಜಾಲತಾಣಕ್ಕೆ ಗುಡ್​ಬೈ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts