More

  ಪ್ರತಿಭಟನೆ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆ ದೇಶವನ್ನು ದುರ್ಬಲಗೊಳಿಸುತ್ತಿದೆ: ರಾಷ್ಟ್ರಪತಿ ರಾಮನಾಥ್​ ಕೋವಿಂದ್​

  ನವದೆಹಲಿ: ನಮ್ಮ ಸಂವಿಧಾನವೂ ಕೂಡ ನಮ್ಮಿಂದ ನಿರೀಕ್ಷಿಸಲ್ಪಡುತ್ತದೆ. ಹೀಗಾಗಿ ಸಂಸತ್ತಿನ ಪ್ರತಿಯೊಬ್ಬ ಸದಸ್ಯರು ಬಜೆಟ್​ ಅಧಿವೇಶನದಲ್ಲಿ ಹಾಜರಾಗಿ ದೇಶದ ಜನತೆಯ ಭರವಸೆ ಮತ್ತು ಆಕಾಂಕ್ಷೆಗಳನ್ನು ನೇರವೇರಿಸಬೇಕು. ರಾಷ್ಟ್ರದ ಹಿತಾಶಕ್ತಿಯನ್ನು ಮಾನದಂಡವಾಗಿಟ್ಟುಕೊಂಡು ಅಗತ್ಯವಾದ ಕಾನೂನನ್ನು ರೂಪಿಸಬೇಕಿದೆ ಎಂದು ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ತಿಳಿಸಿದರು.

  ಇಂದಿನಿಂದ ಬಜೆಟ್​ ಅಧಿವೇಶನ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ಕೋವಿಂದ್​ ಅವರು ಮಾತನಾಡಿದರು. ರಾಮಜನ್ಮ ಭೂಮಿ ವಿವಾದದ ಬಗ್ಗೆ ಸುಪ್ರೀಂಕೋರ್ಟ್​ ತೀರ್ಪು ಪ್ರಕಟಿಸಿದ ಬಳಿಕ ಪ್ರಬುದ್ಧ ಭಾರತೀಯ ನಡೆದುಕೊಂಡ ರೀತಿ ಮೆಚ್ಚುಗೆಗೆ ಅರ್ಹವಾಗಿದ್ದು ಎಂದು ಪ್ರಶಂಸೆ ವ್ಯಕ್ತಪಡಿಸಿದರು.

  ಪ್ರಜಾಪ್ರಭುತ್ವದ ಮತ್ತಷ್ಟು ಬಲವರ್ಧನೆಗಾಗಿ ಪರಸ್ಪರ ಚರ್ಚೆ ಮತ್ತು ವಾದಗಳ ಬಗ್ಗೆ ನನ್ನ ಸರ್ಕಾರಕ್ಕೆ ಸ್ಪಷ್ಟವಾದ ದೃಷ್ಟಿಕೋನವಿದೆ. ಇದೇ ಸಮಯದಲ್ಲಿ ಪ್ರತಿಭಟನೆಯ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆಯು ಸಮಾಜ ಮತ್ತು ದೇಶವನ್ನು ದುರ್ಬಲಗೊಳಿಸುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

  ಸಂವಿಧಾನದ ಆರ್ಟಿಕಲ್ 370 ಮತ್ತು 35ಎ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಬಹುಮತದೊಂದಿಗೆ ರದ್ದುಪಡಿಸಿದ ಕ್ರಮ ಐತಿಹಾಸಿಕ ಮಾತ್ರವಲ್ಲ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್​ ಸಮಾನ ಅಭಿವೃದ್ಧಿಗೆ ಹೊಸ ದಾರಿಯಾಗಿದೆ ಎಂದರು. ನನ್ನ ಸರ್ಕಾರ ದಾಖಲೆ ಸಮಯದಲ್ಲಿ ಕರ್ತಾರ್​ಪುರ ಸಾಹೀಬ್​ ಕಾರಿಡಾರ್​ ಅನ್ನು ನಿರ್ಮಿಸಿದೆ. ಅದನ್ನು ಗುರುನಾನಕ್​ ದೇವ್​ ಜೀ ಅವರ 550ನೇ ಪ್ರಕಾಶ್​ ಪರ್ವ್ ಸಂದರ್ಭದಲ್ಲಿ ರಾಷ್ಟ್ರಕ್ಕೆ ಸಮರ್ಪಿಸಿದೆ ಎಂದು ತಿಳಿಸಿದರು.

  ಇದೇ ವೇಳೆ ಕೋವಿಂದ್​ ಅವರು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮಾತನಾಡಲು ಆರಂಭಿಸುತ್ತಿದ್ದಂತೆಯೇ ಸಂಸತ್ತಿನ ಹಾಲ್​ನಲ್ಲಿ ಸ್ವಲ್ಪ ಮಟ್ಟದ ಕೋಲಾಹಲ ಉಂಟಾಯಿತು. ಮುಂದುವರಿದು ಮಾತನಾಡಿದ ಅವರು ಸಂಸತ್ತಿನ ಎರಡು ಮನೆಯಲ್ಲಿ ಸಿಎಎ ಅಂಗೀಕಾರವಾಗುವ ಮೂಲಕ ಮಹಾತ್ಮ ಗಾಂಧಿ ಅವರ ಬಯಕೆ ಈಡೇರಿದೆ ಎಂಬುದನ್ನು ಹೇಳಲು ನನಗೆ ಖುಷಿಯಾಗುತ್ತಿದೆ ಎಂದರು. ಇದಕ್ಕೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದರೆ, ಬಿಜೆಪಿ ಚಪ್ಪಾಳೆ ತಟ್ಟಿ ಸ್ವಾಗತಿಸಿದರು. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts