More

    ಹಿರಿಯ ಐಪಿಎಸ್​ ಅಧಿಕಾರಿ, ಅವರ ಪತ್ನಿಯಿಂದ ದೌರ್ಜನ್ಯ; ಫೇಸ್​ಬುಕ್​ನಲ್ಲಿ ಪೋಸ್ಟ್​ ಹಾಕಿದ ಮಹಿಳೆ

    ಬೆಂಗಳೂರು: ಇತ್ತೀಚೆಗಷ್ಟೇ ಕೊವಿಡ್​-19 ಸೋಂಕಿತರಾಗಿರುವ ಐಪಿಎಸ್​ ಅಧಿಕಾರಿಯೋರ್ವರ ವಿರುದ್ಧ ಮಹಿಳೆಯೋರ್ವರು ಗಂಭೀರ ಆರೋಪ ಮಾಡಿದ್ದಾರೆ. ಐಪಿಎಸ್​ ಅಧಿಕಾರಿ ಹಾಗೂ ಅವರ ಕುಟುಂಬದಿಂದ ನಾನು ದೌರ್ಜನ್ಯಕ್ಕೆ ಒಳಗಾಗಿದ್ದೇನೆ ಎಂದು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

    ಐ-ಮಾನಿಟರಿ ಅಡ್ವೈಸರಿ (ಐಎಂಎ) ಹಗರಣದಲ್ಲಿ ಕೂಡ ಈ ಐಪಿಎಸ್​ ಅಧಿಕಾರಿಯ ಹೆಸರು ಕೇಳಿಬಂದಿದೆ. ಇದೀಗ ಮಹಿಳೆಯೋರ್ವರು ದೌರ್ಜನ್ಯದ ಆರೋಪವನ್ನೂ ಮಾಡಿದ್ದಾರೆ. ಅವರ ಮನೆಯ ಅಕ್ಕಪಕ್ಕದ ಮನೆಗಳಲ್ಲಿರುವವರ ಮೇಲೆ ದಬ್ಬಾಳಿಕೆ ಮಾಡುತ್ತಾರೆ ಎಂದು ಪೋಸ್ಟ್​ ಮಾಡಿರುವ ಅವರು, ತಮಗಾದ ಕೆಟ್ಟ ಅನುಭವವನ್ನು ಹೇಳಿಕೊಂಡಿದ್ದಾರೆ.

    ನಮ್ಮ ಮನೆಯ ಎರಡು ಅಂತಸ್ತಿನ ಕೆಳಗೆ ಈ ಐಪಿಎಸ್​ ಅಧಿಕಾರಿಯ ಮನೆ ಇದೆ. ಅವರ ಎಂಟು ವರ್ಷದ ಮಗ ಆಟವಾಡುವಾಗ ಜೋರಾಗಿ ಅರಚುತ್ತಿದ್ದ. ನಾನು ಪೊಲೀಸ್​ ಅಧಿಕಾರಿಯ ಪತ್ನಿಗೆ ವಿನಯದಿಂದಲೇ ಅದನ್ನು ಹೇಳಿದ್ದ. ಮಗ ತುಂಬ ಗಲಾಟೆ ಮಾಡುತ್ತಾನೆ. ಅದನ್ನು ತಪ್ಪಿಸಿ ಎಂದಿದ್ದೆ. ಅದಾದ ಮೇಲೆ 8 ಜನ ಪೊಲೀಸ್​ ಸಿಬ್ಬಂದಿ ನಮ್ಮ ಮನೆಗೆ ಬಂದರು. ನಮಗೆ ಬಾಯಿಗೆ ಬಂದಂತೆ ಬೈದರು. ಅಷ್ಟೇ ಅಲ್ಲ, ಮಕ್ಕಳ ಮೇಲೆ ದೌರ್ಜನ್ಯ ಮಾಡಿದ್ದೀರಿ ಎಂದು ಕೂಗಾಡಿದರು. ಇದನ್ನೂ ಓದಿ: ಸಿಂಧೂರ ಇಡಲು ಒಪ್ಪದ ಪತ್ನಿಗೆ ಡಿವೋರ್ಸ್​ ನೀಡಿದ ಪತಿ; ಆತನ ಸಹಾಯಕ್ಕೆ ಬಂದಿದ್ದು ಹೈಕೋರ್ಟ್​ !

    ಆಗ ನಾನು ಅವರ ಮನೆಗೇ ಹೋದೆ. ಪೊಲೀಸರನ್ನು ಕಳಿಸಿ ಬೆದರಿಸುವ ತಂತ್ರವನ್ನೆಲ್ಲ ಮಾಡಬೇಡಿ ಎಂದು ಹೇಳಿದೆ. ಆಗ ಅಧಿಕಾರಿಯ ಪತ್ನಿ ನನ್ನನ್ನು ಕೆಟ್ಟದಾಗಿ ನಿಂದಿಸಿದರು. ಹೇಳಬಾರದ ಶಬ್ದಗಳನ್ನೆಲ್ಲ ಹೇಳಿದರು. ಅಷ್ಟೇ ಅಲ್ಲ ಆಕೆ ನನ್ನ ಮುಖದ ಮೇಲೆ ಉಗುಳಿದ್ದಾಳೆ. ಆಕೆಯ ಪತಿಗೆ ಕೊವಿಡ್​-19 ಪಾಸಿಟಿವ್​ ಸೋಂಕು ಇದೆ. ಈಕೆಗೂ ಇರಬಹುದು. ಇದು ಮೊದಲಲ್ಲ..ಅನೇಕ ಬಾರಿ ಇಂಥದ್ದೇ ದೌರ್ಜನ್ಯವನ್ನು ಎಸಗಿದ್ದಾರೆ. ಅಕ್ಕಪಕ್ಕದಲ್ಲಿರುವ ನಮ್ಮೆಲ್ಲರ ಮೇಲೆ ದಬ್ಬಾಳಿಕೆ ಮಾಡುತ್ತಾರೆ ಎಂದು ಬರೆದಿದ್ದಾರೆ.
    ಹಾಗೇ ಫೇಸ್​ಬುಕ್​ನಲ್ಲಿ ಬೆಂಗಳೂರು ಸಿಟಿ ಪೊಲೀಸ್​, ಬೆಂಗಳೂರು ಸಿಟಿ ಪೊಲೀಸ್​ ಡಿವಿಷನ್​ ಫೇಸ್​ಬುಕ್​ಗಳನ್ನು ಟ್ಯಾಗ್​ ಮಾಡಿದ್ದಾರೆ. (ಏಜೆನ್ಸೀಸ್​)

    ಹಿರಿಯ ಐಪಿಎಸ್​ ಅಧಿಕಾರಿ, ಅವರ ಪತ್ನಿಯಿಂದ ದೌರ್ಜನ್ಯ; ಫೇಸ್​ಬುಕ್​ನಲ್ಲಿ ಪೋಸ್ಟ್​ ಹಾಕಿದ ಮಹಿಳೆ

    ಸರಣಿ ಅನಿಲ ದುರಂತಕ್ಕೆ ಸಾಕ್ಷಿಯಾಗುತ್ತಿದೆ ವಿಶಾಖಪಟ್ಟಣ; ಮತ್ತಿಬ್ಬರ ಸಾವು, ಒಬ್ಬ ಗಂಭೀರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts