More

    ಡ್ರೋನ್’ ಪ್ರತಾಪ್ ಮಹಿಳಾ ಸ್ಪರ್ಧಿಗಳನ್ನು ಕೆಟ್ಟದಾಗಿ ನೋಡ್ತಾರೆ ಎಂದಿದ್ದ ವಿನಯ್​; ಕಿಚ್ಚನ ಕ್ಲಾಸ್​​​ಗೆ ಸದಸ್ಯರು ಶಾಕ್​..!

    ವಿನಯ್‌ ಗೌಡಗೆ ಬಿಗ್‌ಬಾಸ್‌ ಮನೆಯಲ್ಲಿ ಕಾರ್ತಿಕ್ ಮಹೇಶ್‌ ಸಂಗೀತಾ ಶೃಂಗೇರಿ ಹೊರತು ಪಡಿಸಿದ್ರೆ ಹೆಚ್ಚು ಕೋಪ ಇರೋದು ಡ್ರೋನ್​ ಪ್ರತಾಪ್​ ಮೇಲೆ. ಪ್ರತಾಪ್‌ ಯಾವುದೇ ಆಟ ಆಡಬಾರದು ಆತನ ಮನಸ್ಸನ್ನೇ ಕುಗ್ಗಿಸಬೇಕೆಂದು ವಿನಯ್​ ಪ್ರತಾಪ್‌ ‘ಮಹಿಳಾ ಸ್ಪರ್ಧಿಗಳನ್ನು ತುಂಬಾ ಕೆಟ್ಟದಾಗಿ ನೋಡ್ತಾನೆ’ ಹೇಳಿಕೆಗಳನ್ನು ಕೂಡ ನೀಡಿ, ಪ್ರತಾಪ್‌ ಬಗ್ಗೆ ವಿನಯ್ ಕಾಮೆಂಟ್ ಮಾಡಿದ್ದರು.


    ಇದೀಗ ಕಿಚ್ಚ ಸುದೀಪ್​​ ನಿನ್ನೆ ಈ ವಿಚಾರವಾಗಿ ಮಾತನಾಡಿದ್ದಾರೆ. ‘ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ’ ಸಂಚಿಕೆಯಲ್ಲಿಈ ವಿಚಾರವನ್ನ ಕಿಚ್ಚ ಸುದೀಪ್ ಮುನ್ನಲೆಗೆ ತಂದಿದ್ದು, ಪ್ರತಾಪ್‌ ಅವರು ಮನೆಯ ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿ ಸರಿ ಇಲ್ಲ” ಎಂದು ಸ್ಟೇಟ್‌ಮೆಂಟ್ ನೀಡಿ, ‘ಯೆಸ್’ ಆರ್ ‘ನೋ’ ಹೇಳಿ ಎಂದು ಸುದೀಪ್‌ ತಿಳಿಸಿದರು. ಇದಕ್ಕೆ ಇಶಾನಿ, ತುಕಾಲಿ ಸಂತು, ವಿನಯ್ ಗೌಡ ‘ಯೆಸ್‌’ ಎಂದು ಹೇಳಿದರು. ಅಂದ್ರೆ, ಅವರ ಪ್ರಕಾರ, ‘ಪ್ರತಾಪ್‌ ಮಹಿಳಾ ಸ್ಪರ್ಧಿಗಳನ್ನು ತುಂಬಾ ಕೆಟ್ಟದಾಗಿ ನೋಡ್ತಾರೆ’ ಅಂತ ಅರ್ಥ. ‘ಯೆಸ್’ ಎಂದಿದ್ದರ ಕುರಿತು ಈಶಾನಿ, ಸಂತು, ವಿನಯ್ ಗೌಡಗೆ ಸುದೀಪ್ ಪ್ರಶ್ನೆ ಮಾಡಿದ್ದಾರೆ.


    ವಿನಯ್‌, ಪ್ರತಾಪ್ ಏನ್ ಯೋಚನೆ ಮಾಡ್ಕೊಂಡು, ಎಲ್ಲಿ ನೋಡ್ತಾ ಇರ್ತಾನೆ ಅಂತಾನೇ ಗೊತ್ತಾಗಲ್ಲ ಸರ್ ಅಂದಿದಕ್ಕೆ ಸುದೀಪ್‌, ಯುವರ್ ರಾಂಗ್.. ಯಾರಾದರೂ ಕೆಟ್ಟ ದೃಷ್ಟಿಯಲ್ಲಿ ನೋಡುವುದಾಗಲಿ, ಸ್ಪರ್ಶಿಸುವುದಾಗಲಿ ಮಾಡಿದರೆ, ಆ ಸ್ಪರ್ಶದಲ್ಲಿ ನಿಮಗೆ ಅರ್ಥ ಆಗತ್ತೆ, ಇದು ಸರಿ ಇಲ್ಲ ಅಂತ. ಅದರ ಮೇಲೆ ನೀವು ನಂಬಬೇಕೇ ಹೊರತು, ಪ್ರಭಾವಿಸುವುದರ ಮೇಲಲ್ಲ ಅಂತ ಹೇಳುತ್ತಿದ್ದಂತೆಯೇ, ತಮ್ಮ ಅಭಿಪ್ರಾಯ ಬದಲಾಯಿಸುವ ವಿನಯ್, ನೋ ಎಂದು ಬೊರ್ಡ್ ತಿರುಗಿಸಿದರು.ನಂತರ ವಿನಯ್ ಗೌಡ ಅವರು ‘ನನ್ನಿಂದ ತಪ್ಪಾಗಿದ್ದರೆ, ದಯವಿಟ್ಟು ನನ್ನನ್ನು ಕ್ಷಮಿಸಿ..’ ಎಂದು ಹೇಳಿದ್ದಾರೆ.
    ಒಟ್ಟಾರೆಯಾಗಿ ಬಿಗ್​​​​ಬಾಸ್​​ ಮನೆಯಲ್ಲಿ ದಿನ ಕಳದಂತೆ ಸ್ಪರ್ಧಿಗಳು ಗೆಲ್ಲುವ ಹಾದಿಯತ್ತ ಗಮನ ವಹಿಸುತ್ತಿದ್ದು, ಸದ್ಯ ಮನಸ್ತಾಪ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts