More

    ‘ಗ್ರಾಮಾಯಣ‘ ನಿಂತಿಲ್ಲ: ವಿನಯ್ ರಾಜ್​ಕುಮಾರ್

    ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ ವಿನಯ್ ರಾಜಕುಮಾರ್ ನಟನೆಯ ‘ಗ್ರಾಮಾಯಣ’ ಸಿನಿಮಾದ ಶೂಟಿಂಗ್ ಕೆಲಸಗಳು ಮುಗಿದಿರಬೇಕಿತ್ತು. ಆದರೆ, ಚಿತ್ರದ ನಿರ್ವಪಕ ಎನ್​ಎಲ್​ಎನ್ ಮೂರ್ತಿ ಅವರ ಅಕಾಲಿಕ ಸಾವು ಇಡೀ ತಂಡಕ್ಕೆ ದೊಡ್ಡ ಶಾಕ್ ನೀಡಿತ್ತು. ಅದಾದ ಬಳಿಕ ಚಿತ್ರದ ಮುಂದಿನ ಕಥೆ ಏನು? ಸಿನಿಮಾ ಮುಂದುವರಿಯುತ್ತಾ ಎಂಬಿತ್ಯಾದಿ ಸುದ್ದಿಗಳು ಹರಿದಾಡಿದ್ದವು. ಈಗ ಅದೆಲ್ಲದಕ್ಕೂ ಉತ್ತರ ಸಿಕ್ಕಿದೆ. ಸಿನಿಮಾ ಯಾವುದೇ ಕಾರಣಕ್ಕೂ ನಿಲ್ಲಲ್ಲ ಎಂದಿದ್ದಾರೆ ವಿನಯ್ ರಾಜಕುಮಾರ್.

    ಗಾಂಧಿನಗರದ ನರ್ತಕಿ ಚಿತ್ರಮಂದಿರದಲ್ಲಿ ‘ಅಂದೊಂದಿತ್ತು ಕಾಲ’ ಸಿನಿಮಾ ಶೂಟಿಂಗ್ ಬಿಡುವಿನ ವೇಳೆ ವಿಜಯವಾಣಿ ಜತೆ ಮಾತನಾಡಿದ ವಿನಯ್, ‘ಈಗಾಗಲೇ ‘ಗ್ರಾಮಾಯಣ’ ಚಿತ್ರದ ಅರ್ಧ ಭಾಗದ ಶೂಟಿಂಗ್ ಮುಗಿದಿದೆ. ಶೂಟಿಂಗ್ ಮುಂದುವರಿಸಬೇಕು ಎನ್ನುತ್ತಿರುವಾಗಲೇ ಕೋವಿಡ್ ಬಂತು. ಅದಾದ ಬಳಿಕ ಕೋವಿಡ್​ನಿಂದ ನಮ್ಮ ಚಿತ್ರದ ನಿರ್ವಪಕರು ನಿಧನರಾದರು. ಇದೀಗ ಬೇರೆ ನಿರ್ವಪಕರಿಗಾಗಿ ಹುಡುಕಾಟ ನಡೆದಿದೆ. ಸಿನಿಮಾ ಸಹ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ’ ಎಂದಿದ್ದಾರೆ.

    ಕೀರ್ತಿ ನಿರ್ದೇಶನದ ‘ಅಂದೊಂದಿತ್ತು ಕಾಲ’ ಚಿತ್ರದ ಬಗ್ಗೆಯೂ ಮಾಹಿತಿ ನೀಡುವ ವಿನಯ್, ‘ಶೇ. 70ರಷ್ಟು ಶೂಟಿಂಗ್ ಮುಕ್ತಾಯವಾಗಿದೆ. 16, 22, 32 .. ಹೀಗೆ ಮೂರು ವಯಸ್ಸಿನ ಶೇಡ್​ನಲ್ಲಿ ಪಾತ್ರ ಸಾಗಲಿದೆ. ಸಣ್ಣ ಸಣ್ಣ ಖುಷಿ, ತಾಯಿ ಪ್ರೀತಿ, ಸ್ನೇಹಿತರ ಸಾಂಗತ್ಯ.. ಒಟ್ಟಾರೆಯಾಗಿ ಇದೊಂದು ಫೀಲ್ ಗುಡ್ ರೀತಿಯ ಚಿತ್ರ. ನಿರ್ದೇಶಕನಾಗಿ ನಾನಿಲ್ಲಿ ಕಾಣಿಸಿಕೊಂಡಿದ್ದೇನೆ. ಈ ಸಿನಿಮಾ ಹೊರತುಪಡಿಸಿದರೆ, ‘ಟೆನ್’ ಚಿತ್ರ ಸಿದ್ಧವಾಗಿದೆ. ಶೈಲೇಶ್ ನಾಯರ್ ಅವರ ಜತೆ ‘ಪೆಪೆ’ ಚಿತ್ರದ ಕೆಲಸಗಳೂ ಶುರುವಾಗಿವೆ. ಆ ಚಿತ್ರದ ಬಹುತೇಕ ಶೂಟಿಂಗ್ ಆಗಸ್ಟ್​ನಲ್ಲಿ ಕೂರ್ಗ್​ನಲ್ಲಿ ನಡೆಯಲಿದೆ’ ಎಂಬುದು ಅವರ ಮಾತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts