More

    ಗ್ರಾಮಗಳಿಗೆ ಮರುಜೀವ ನೀಡಿ

    ಚಿಕ್ಕೋಡಿ: ಚಿಕ್ಕೋಡಿ ಜಿಲ್ಲೆ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಶುಕ್ರವಾರ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಪದಾಧಿಕಾರಿಗಳು ಚಿಂಚಣಿ ಹಾಗೂ ಚಿಕ್ಕೋಡಿ ಶ್ರೀಗಳ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.

    ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ಚಿಕ್ಕೋಡಿ, ಗೋಕಾಕ ಜಿಲ್ಲೆಯಾಗುವುದರಿಂದ ಈ ಭಾಗದ ಗ್ರಾಮಗಳಿಗೆ ಮರುಜೀವ ಬರುತ್ತದೆ. ಈ ಭಾಗದ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತಂದು ಉಭಯ ಜಿಲ್ಲೆ ಘೋಷಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್.ಸಂಗಪ್ಪಗೋಳ ಮಾತನಾಡಿದರು. ತ್ಯಾಗರಾಜ ಕದಂ, ಬಿ.ಎಂ.ಸಂಗ್ರೊಳ್ಳಿ, ಉತ್ತಮ ಪಾಟೀಲ, ಪ್ರವೀಣ ಕಾಂಬಳೆ, ಸಂಜು ಬಡಿಗೇರ, ಶಾಮ ರೇವಡೆ, ರಾಮಾ ಮಾನೆ, ತುಕಾರಾಮ ಕೋಳಿ, ರೇವಪ್ಪ ತಳವಾರ, ಎಸ್.ವೈ.ಹಂಜಿ, ಬಸವರಾಜ ಡಾಕೆ, ಶ್ರೀನಾಥ ಗಟ್ಟಿ ಇತರರು ಇದ್ದರು.

    ಒಬ್ಬರು ಹಿಂದೆ ಸರಿದರೆ ಜಿಲ್ಲೆ ಮಾಡಲು ಸಿದ್ಧ: ಬೆಳಗಾವಿ ಜಿಲ್ಲೆ ವಿಭಜಿಸುವುದು ಅತೀ ಅವಶ್ಯವಾಗಿದೆ. ಚಿಕ್ಕೋಡಿ, ಗೋಕಾಕ ತಾಲೂಕಿನವರು ಯಾರಾದರೂ ಒಬ್ಬರು ಹಿಂದಕ್ಕೆ ಸರಿದರೆ ಚಿಕ್ಕೋಡಿ ಅಥವಾ ಗೋಕಾಕ ಜಿಲ್ಲೆ ಮಾಡಬಹುದು ಎಂದು ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು. ಚಿಕ್ಕೋಡಿಯಲ್ಲಿ ಜಿಲ್ಲಾ ಹೋರಾಟ ಸಮಿತಿಯಿಂದ ಮನವಿ ಸ್ವೀಕರಿಸಿ ಮಾತನಾಡಿ, ಹಲವು ದಿನಗಳಿಂದ ಬೆಳಗಾವಿ ಜಿಲ್ಲೆ ವಿಭಜನೆ ಕೂಗು ಕೇಳಿ ಬರುತ್ತಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಚಿಕ್ಕೋಡಿ ಹಾಗೂ ಗೋಕಾಕ ಜಿಲ್ಲೆ ಮಾಡಲು ನಿರ್ಧರಿಸಲಾಗಿತ್ತು. ತಾಂತ್ರಿಕ ಕಾರಣದಿಂದ ನಿರ್ಧಾರ ಕೈಬಿಡಲಾಯಿತು. ಜಿಲ್ಲಾ ವಿಭಜನೆಗೆ ಸಿಎಂ ಬಿಎಸ್‌ವೈ ಅವರನ್ನು ಒತ್ತಾಯಿಸಲಾಗುವುದು ಎಂದರು.

    ಜನಪ್ರತಿನಿಧಿಗಳು ಜಿಲ್ಲಾ ವಿಭಜನೆಗೆ ಸರ್ಕಾರದ ಮೇಲೆ ಒತ್ತಡ ತರಬೇಕು. ಇಲ್ಲದಿದ್ದರೆ ಈ ಭಾಗದ ಸ್ವಾಮೀಜಿಗಳು, ಜಿಲ್ಲಾ ಹೋರಾಟ ಸಮಿತಿ ಒಳಗೊಂಡ ನಿಯೋಗದೊಂದಿಗೆ ಸಿಎಂ ಬಿಎಸ್‌ವೈ ಮನೆ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ.
    | ಸಂಪಾದನಾ ಸ್ವಾಮೀಜಿ ಚಿಕ್ಕೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts