More

    ಹಳ್ಳಿಗೆ ಹೋದ ಮೇಲೆ ಆರೋಗ್ಯದ ಕಾಳಜಿವಹಿಸಿ, ಕಾರ್ಮಿಕರಿಗೆ ಸಂಸದ ವೈ.ದೇವೇಂದ್ರಪ್ಪ ಸಲಹೆ

    ಕಾನಹೊಸಹಳ್ಳಿ: ಬೆಂಗಳೂರಿನಿಂದ ಬಂದಿರುವ ಕಾರ್ಮಿಕರು, ಖಾಸಗಿ ಸಂಸ್ಥೆಗಳ ನೌಕರರು ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಂಸದ ವೈ.ದೇವೇಂದ್ರಪ್ಪ ಹೇಳಿದರು.

    ಪಟ್ಟಣದ ಬಸ್ ನಿಲ್ದಾಣದಲ್ಲಿ ಬೆಂಗಳೂರಿನಿಂದ ಬಂದಿರುವರಿಗೆ ಆಯೋಜಿಸಿರುವ ಆರೋಗ್ಯ ತಪಾಸಣಾ ಕೇಂದ್ರಕ್ಕೆ ಸೋಮವಾರ ಭೇಟಿ ಮಾತನಾಡಿದರು. ಎರಡು ದಿನಗಳಿಂದ 24 ಬಸ್‌ಗಳು ಬೆಂಗಳೂರಿನಿಂದ 400ಕ್ಕೂ ಹೆಚ್ಚು ಜನರನ್ನು ಕರೆತಂದಿವೆ. ಅಲ್ಲದೆ ಎಲ್ಲ ಪ್ರಯಾಣಿಕರಿಗೂ ತಾಲೂಕು ಆಡಳಿತದಿಂದ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ. ಗ್ರಾಮಕ್ಕೆ ತೆರಳಿದ ಬಳಿಕ ಆರೋಗ್ಯದ ಕಾಳಜಿ ವಹಿಸುವಂತೆ ತಿಳಿಸಿದರು.

    ತಹಸೀಲ್ದಾರ್, ಟಿಎಚ್‌ಒ ಮೊಕ್ಕಾ: ಬೆಂಗಳೂರಿನಿಂದ ಆಗಮಿಸುತ್ತಿರುವ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿ ಸ್ವಗ್ರಾಮಕ್ಕೆ ಕಳಿಸಲಾಗುತ್ತಿದ್ದು, ಎರಡು ದಿನಗಳಿಂದ ತಹಸೀಲ್ದಾರ್ ಮಹಾಬಲೇಶ್ವರ ಮತ್ತು ಟಿಎಚ್‌ಒ ಡಾ.ಷಣ್ಮುಖನಾಯ್ಕ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಎಲ್ಲ ಅಧಿಕಾರಿಗಳ ತಂಡ ಕೇಂದ್ರ ಬಿಟ್ಟು ಮನೆಗೆ ತೆರಳದೆ ಕಾರ್ಯನಿರ್ವಹಿಸುತ್ತಿದ್ದಾರೆ. ಹೊಸಪೇಟೆಯ ಎಸಿ ಶೇಕ್ ತನ್ವೀರ್ ಆಸಿಫ್, ಪ್ರೊಬೆಷನರಿ ಐಎಎಸ್ ಅಧಿಕಾರಿ ಈಶ್ವರ ಕಾಂಡೂ, ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪಿ.ಎನ್.ಲೋಕೇಶ್, ಪಿಎಸ್‌ಐ ಎಚ್.ನಾಗರಾಜ್, ಉಪ ತಹಸೀಲ್ದಾರ್ ಚಂದ್ರಮೋಹನ್, ವೈದ್ಯರಾದ ಪ್ರಸನ್ನ, ಕೊಟ್ರೇಶ್, ಗ್ರಾಪಂ ಸದಸ್ಯರಾದ ವಿಶ್ವನಾಥ, ವಿರುಪಣ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts