More

    ಗ್ರಾಮದ ಸ್ವಚ್ಛತೆಗೆ ಸಹಕರಿಸಿ

    ಅರಟಾಳ: ಗ್ರಾಮದಲ್ಲಿ ನೂತನ ಘನ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆ ಮಾಡುತ್ತಿರುವುದು ಸಂತೋಷದ ಸಂಗತಿ. ಗ್ರಾಪಂ ವ್ಯಾಪ್ತಿಯ ಅರಟಾಳ, ಬಾಡಗಿ, ಹಾಲಳ್ಳಿ ಗ್ರಾಮದ ತ್ಯಾಜ್ಯ ನಿರ್ವಹಣೆಗೆ ಈ ಘಟಕ ನೆರವಾಗುತ್ತದೆ ಎಂದು ಜಿಲ್ಲಾ ಡಿಆರ್‌ಡಿಎ ಯೋಜನಾ ನಿರ್ದೇಶಕರಾಗಿ ಬಡ್ತಿ ಪಡೆದ ಅಥಣಿ ತಾಪಂ ಇಒ ರವೀಂದ್ರ ಬಂಗಾರಪ್ಪನವರ ಹೇಳಿದ್ದಾರೆ.

    ಮಂಗಳವಾರ ಗ್ರಾಮದ ಗ್ರಾಪಂ ಘನ-ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಕಾಯಿರಿಸಿದ 5 ಎಕರೆ ಜಮೀನಿನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಪ್ರಮುಖವಾಗಿದೆ. ಗ್ರಾಮದ ಸ್ವಚ್ಛತೆಗೆ ಈ ಘಟಕ ನೆರವಾಗುತ್ತದೆ.

    ಘಟಕ ನಿರ್ಮಾಣ ಮಾಡಲು ವರ್ಷಗಳಿಂದ ಸ್ಥಳದ ಕೊರತೆ ಕಾಡುತ್ತಿತ್ತು. ಸದ್ಯ ಎಸಿ ಅವರು ಜಾಗ ಮಂಜೂರು ಮಾಡಿಸಿಕೊಟ್ಟಿದ್ದಾರೆ. ಘಟಕದ ಸುತ್ತ ಗುಂಡಿ ತೋಡಿ ಸಸಿಗಳನ್ನು ಬೆಳೆಸಿ-ಪೋಷಿಸಬಹುದು. ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದರು.

    ಗ್ರಾಪಂ ಅಭಿವೃದ್ಧಿ ಅಧಿಕಾರಿ ಎ.ಜಿ.ಎಡಕೆ ಮಾತನಾಡಿದರು. ತಾಪಂ ನರೇಗಾ ಸಹಾಯಕ ನಿರ್ದೇಶಕ ಅರುಣ ಮಾಚಕನೂರ, ಗ್ರಾಪಂ ಕಾರ್ಯದರ್ಶಿ ಎಸ್.ಎಸ್.ಜನಾಯಿ, ನರೇಗಾ ಇಂಜಿನಿಯರ್ ವಿಶ್ವನಾಥ ಮಟಗಾರ, ಗ್ರಾಪಂ ಸದಸ್ಯರಾದ ರಾಮಪ್ಪ ಪೂಜಾರಿ, ಮಾಳಪ್ಪ ಕಾಂಬಳೆ, ಎಂ.ಪಿ. ಪಾಟೀಲ, ಎಸ್.ಎ.ಮಾಳಿ, ಮಹಾಂತೇಶ ವಜ್ರವಾಡ, ಕಾಸಪ್ಪ ಮಾದರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts