More

    ಎಸಿಬಿ ಬಲೆಗೆ ಗ್ರಾಮ ಲೆಕ್ಕಾಧಿಕಾರಿ

    ಮುಂಡರಗಿ: ರೈತನಿಂದ ಲಂಚ ಸ್ವೀಕರಿಸುವಾಗ ತಾಲೂಕಿನ ಪೇಠಾಲೂರ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಜಗದೀಶ .ಟಿ. ಎಸಿಬಿ ಬಲೆಗೆ ಬಿದ್ದಿದ್ದಾರೆ.

    ಪೇಠಾಲೂರ ಗ್ರಾಮದ ರೈತ ಸೋಮನಗೌಡ ಕರಿಗೌಡ್ರ ಎಂಬುವರು ಕಲಕೇರಿ ಗ್ರಾಮದಲ್ಲಿ ಸರ್ಕಾರದ 5 ಎಕರೆ ಜಮೀನನ್ನು ಹರಾಜಿನಲ್ಲಿ 6.50 ಲಕ್ಷ ರೂಪಾಯಿ ನೀಡಿ ನ್ಯಾಯಾಲಯದಿಂದ ಮಂಜೂರು ಮಾಡಿಸಿಕೊಂಡಿದ್ದರು. ಜಮೀನು ಸಬ್​ರಜಿಸ್ಟರ್ ಕಚೇರಿಯಲ್ಲಿ ನೋಂದಣಿ ಸಹ ಮಾಡಿಸಿದ್ದರು. ಆದರೆ, ಜಮೀನಿನ ಖಾತೆ ಬದಲಾವಣೆ ಆಗಿರಲಿಲ್ಲ. ಹೀಗಾಗಿ ಜಮೀನಿನ ಖಾತೆ ಬದಲಾವಣೆ ಮಾಡಿಕೊಡುವಂತೆ ಸೋಮನಗೌಡ ಅವರು ಗ್ರಾಮಲೆಕ್ಕಾಧಿಕಾರಿ ಜಗದೀಶ ಅವರಿಗೆ ಮನವಿ ಮಾಡಿದ್ದರು. ಖಾತೆ ಬದಲಾವಣೆಗೆ 5 ಸಾವಿರ ರೂಪಾಯಿ ಲಂಚ ನೀಡುವಂತೆ ಗ್ರಾಮ ಲೆಕ್ಕಾಧಿಕಾರಿ ಬೇಡಿಕೆ ಇಟ್ಟಿದ್ದರು.

    ಪಟ್ಟಣದ ಕೊಪ್ಪಳ ಸರ್ಕಲ್​ನಲ್ಲಿ ಗ್ರಾಮ ಲೆಕ್ಕಾಧಿಕಾರಿ ಜಗದೀಶ .ಟಿ. ಅವರು ಸೋಮನಗೌಡ ಅವರಿಂದ ಲಂಚ ಸ್ವೀಕರಿಸುವಾಗ ಎಸಿಬಿ ಡಿವೈಎಸ್​ಪಿ ವಾಸುದೇವ ಆರ್.ಎನ್. ಅವರ ನೇತೃತ್ವದ ತಂಡ ದಾಳಿ ನಡೆಸಿ ಜಗದೀಶ ಅವರನ್ನು ವಶಕ್ಕೆ ಪಡೆದಿದ್ದಾರೆ.

    ಎಸಿಬಿ ಸಿಪಿಐ ಧಾರಣಾ ನಾಯಕ, ರಾಜಾಸಾಬ್ ದೇಸಾಯಿ, ಸಿಬ್ಬಂದಿ ಎಂ.ಎಂ. ಅಯ್ಯನಗೌಡರ, ಆರ್.ಎಚ್. ಹೆಬಸೂರ, ವೀರೇಶ ಜೋಳದ, ಈರಣ್ಣ ಜಾಲಿಹಾಳ, ತಾರಪ್ಪ, ಮಂಜುನಾಥ ಪಿ.ಸಿ, ಎನ್.ಎಸ್. ತಾಯಣ್ಣವರ ದಾಳಿಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts