More

    ವಿಕ್ರಾಂತ ರೋಣ ‘ದಿ ಡೆಡ್ ಮಾನ್ಸ್ ಆ್ಯಂಥಮ್’ನಲ್ಲಿ ಎದೆ ಝಲ್ಲೆನಿಸುವ ಕಿಚ್ಚ

    ಬೆಂಗಳೂರು: ಕಿಚ್ಚ ಸುದೀಪ್ ನಟಿಸಿರುವ ವಿಕ್ರಾಂತ್ ರೋಣ, ಕೋವಿಡ್ ಆರಂಭಿಕ ದಿನಗಳಲ್ಲಿ ಶುರುವಾದ ಮೊದಲ ಮೆಗಾ-ಬಜೆಟ್ ಸಿನಿಮಾ. ಇದೀಗ ಸುದೀಪ್ ಜನ್ಮದಿನದ ಪ್ರಯುಕ್ತ ವಿಶೇಷ ವಿಡಿಯೋ ತುಣುಕನ್ನು ಬಿಡುಗಡೆ ಮಾಡಿದೆ ರೋಣ ಚಿತ್ರತಂಡ.

    ಇದನ್ನೂ ಓದಿ: ಬಿಗ್​ ಬಾಸ್​​ ವಿಜೇತ, ನಟ ಸಿದ್ಧಾರ್ಥ್ ಶುಕ್ಲಾ ನಿಧನ

    ‘ದಿ ಡೆಡ್ ಮಾನ್ಸ್ ಆ್ಯಂಥಮ್’, ನಿರೂಪಕನ ಧ್ವನಿಯನ್ನು ಹಿಂಬಾಲಿಸುತ್ತ ಸುದೀಪ್ ಶತ್ರುಗಳಿಗೆ ಭಯ ಹುಟ್ಟಿಸುವ ಸನ್ನಿವೇಷದೊಂದಿಗೆ ಶುರುವಾಗುತ್ತದೆ. ಗಮನ ಸೆಳೆಯುವ ದೃಶ್ಯಗಳು, ವಿಸ್ಮಯಗೊಳಿಸುವ ಹಿನ್ನಲೆ ಸಂಗೀತ, ಸುದೀಪ್ ಖದರ್ ಗೆ ಪೂರಕವಾಗಿವೆ. ಈ ಎಲ್ಲಾ ಅಂಶಗಳಿಂದಾಗಿ, ರಿಲೀಸ್ ಆಗಿರುವ ‘ದಿ ಡೆಡ್ ಮಾನ್ಸ್ ಆ್ಯಂಥಮ್’ ಟೀಸರ್ ಪ್ರೇಕ್ಷಕ ವಲಯದಿಂದಲೂ ಮೆಚ್ಚುಗೆ ಪಡೆದಿದೆ. 

    ವಿಕ್ರಾಂತ್ ರೋಣ, ಒಂದು ಬಹುಭಾಷಾ ಆ್ಯಕ್ಷನ್ ಅಡ್ವೆಂಚರ್ ಪ್ರಕಾರದ ಚಿತ್ರ. 55 ದೇಶಗಳಲ್ಲಿ, 14 ಭಾಷೆಗಳಲ್ಲಿ 3Dಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಅನೂಪ್ ಭಂಡಾರಿಯವರ ನಿರ್ದೇಶನ, ಜಾಕ್ ಮಂಜುನಾಥ್, ಶಾಲಿನಿ ಮಂಜುನಾಥ್ ಹಾಗೂ ಅಲಂಕಾರ್ ಪಾಂಡಿಯನ್ ನಿರ್ಮಾಣದಲ್ಲಿ ಪಾಲುದಾರಿಕೆ ಹೊಂದಿದ್ದಾರೆ.


    ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತ ನೀಡಿದ್ದಾರೆ. ಶಿವಕುಮಾರ್ ಕಲಾ ನಿರ್ದೇಶನ, ವಿಲಿಯಮ್ ಡೇವಿಡ್ ಛಾಯಗ್ರಾಹಕ ಮಾಡಿದ್ದಾರೆ. ನಿರೂಪ್ ಭಂಡಾರಿ, ನೀತಾ ಅಶೋಕ್, ಜ್ಯಾಕ್​ಲೀನ್ ಫರ್ನಾಂಡೀಸ್ ತಾರಾಗಣದಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts