More

    ಸವಾಲುಗಳ ನಡುವೆ ಈಜಿದ ವಿಜಯೇಂದ್ರ; ಭವಿಷ್ಯದ ಲೆಕ್ಕಾಚಾರ, ಬಿಎಸ್‌ವೈ ಉತ್ತರಾಧಿಕಾರಿ

    ಸವಾಲುಗಳ ನಡುವೆ ಈಜಿದ ವಿಜಯೇಂದ್ರ
    ಭವಿಷ್ಯದ ಲೆಕ್ಕಾಚಾರ, ಬಿಎಸ್‌ವೈ ಉತ್ತರಾಧಿಕಾರಿ

    ಶಿವಾನಂದ ತಗಡೂರು, ಬೆಂಗಳೂರು:
    ರಾಜ್ಯದ ಬಿಜೆಪಿ ಚುಕ್ಕಾಣಿಯನ್ನು ಯುವ ನಾಯಕ ಬಿ.ವೈ.ವಿಜಯೇಂದ್ರ ಅವರಿಗೆ ನೀಡುವ ಮೂಲಕ ಹೈಕಮಾಂಡ್ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಆ ಮೂಲಕ ಪಕ್ಷದೊಳಗಿನ ಟೀಕಾಕಾರರ ಬಾಯಿ ಮುಚ್ಚಿಸಿರುವುದಲ್ಲದೆ, ಪಕ್ಷದ ಅಧಿನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ದೀಪಾವಳಿ ಗ್‌ಟಿ ನೀಡಿದೆ.
    ಪಂಚ ರಾಜ್ಯಗಳ ಚುನಾವಣೆ ನಡುವೆಯೇ, ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ವೇದಿಕೆಯನ್ನು ಭರ್ಜರಿಯಾಗಿಯೇ ಸಿದ್ಧಪಡಿಸಿಕೊಳ್ಳುವ ಮುಂದಡಿ ಇಟ್ಟಿರುವ ಹೈಕಮಾಂಡ್, ಎಲ್ಲವನ್ನು ಅಳೆದು ಸುರಿದು ಲೆಕ್ಕಾಚಾರ ಹಾಕಿಯೇ ವಿಜಯೇಂದ್ರ ಅವರಿಗೆ ಪಟ್ಟ ಕಟ್ಟಿದ್ದು, ಒಂದೇ ತೀರ್ಮಾನದಲ್ಲಿ ಹಲವು ಸಮಸ್ಯೆಗಳಿಗೆ ರಾಮಬಾಣ ಹೂಡಿದೆ. ಮತ್ತೊಂದೆಡೆ ಪಕ್ಷದೊಳಗಿನ ಟೀಕಾಕಾರರ ಎಡೆಮುರಿ ಕಟ್ಟುವ ಪ್ರಯತ್ನವನ್ನು ಮಾಡಿದೆ.

    ಸಮುದಾಯದ ಮೇಲಿನ ಹಿಡಿತ
    ಲಿಂಗಾಯಿತ ವೀರಶೈವ ಮಠಗಳ ವಿಶ್ವಾಸವನ್ನು ದೊಡ್ಡ ಪ್ರಮಾಣದಲ್ಲಿ ಸಂಪಾದಿಸಿಕೊಂಡಿದ್ದ ಯಡಿಯೂರಪ್ಪ ಅವರು ಯಾವುದೇ ಸಂದರ್ಭದಲ್ಲಿಯೂ ತಮ್ಮ ಸಮುದಾಯದ ಮೇಲಿನ ಬಿಗಿ ಹಿಡಿತವನ್ನು ಸಡಲಿಸಲಿಲ್ಲ. ಸದಾ ಯಡಿಯೂರಪ್ಪ ಬೆನ್ನಗೆ ನಿಂತಿದ್ದ ಈ ಸಮುದಾಯ ಮುಂದಿನ ನಾಯಕನ ಸ್ಥಾನದಲ್ಲಿ ಸಹಜವಾಗಿಯೇ ವಿಜಯೇಂದ್ರ ಅವರಿಗೆ ಮಣೆ ಹಾಕಿತ್ತು. ವಿಜಯೇಂದ್ರ ಅವರು ಪ್ರವಾಸ ಮಾಡಿದ ಕಡೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಯುವ ಸಮುದಾಯ ಅವರ ಬೆನ್ನಿಗೆ ನಿಂತಿದ್ದು ನೋಡಿದಾಗಲೇ ಅವರು ಭವಿಷ್ಯದ ಯುವ ನಾಯಕನಾಗಿ ಬೆಳೆಯುತ್ತಿರುವ ವೇಗ ಹೈಕಮಾಂಡ್‌ಗೆ ನಿದಾನವಾಗಿ ಅರ್ಥವಾಗತೊಡಗಿತ್ತು. ಅದರ ಲಿತಾಂಶವೇ ಈಗಿನ ಆಯ್ಕೆ ಕಾರಣ ಎನ್ನುವುದರಲ್ಲಿಯೂ ಎರಡು ಮಾತಿಲ್ಲ.

    ಬಿಎಸ್‌ವೈ ಉತ್ತರಾಧಿಕಾರಿ
    ಐದು ದಶಕಗಳ ಕಾಲ ಬಿಜೆಪಿಯನ್ನು ಹೋರಾಟದ ಕಿಚ್ಚಿನಿಂದಲೇ ತಳ ಹಂತದಿಂದ ಕಟ್ಟಿ ಬೆಳೆಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನಂತರದ ಉತ್ತರಾಧಿಕಾರಿ ಯಾರು ಎನ್ನುವ ಪಕ್ಷದೊಳಗಿನ ವೀರಶೈವ ಲಿಂಗಾಯಿತ ಸಮುದಾಯದ ಕೆಲ ನಾಯಕರ ಪ್ರಶ್ನೆಗೂ ವಿಜಯೇಂದ್ರ ಆಯ್ಕೆ ಮೂಲಕವೇ ಹೈಕಮಾಂಡ್ ಉತ್ತರ ನೀಡಿರುವುದು ಗುಟ್ಟೇನಲ್ಲ.

    ಷಡ್ಯಂತ್ರಗಳ ನಡುವೆ ಸಹನೆ
    ಹಾಗೆ ನೋಡಿದರೆ, ವಿಜಯೇಂದ್ರ ಅವರು ನಡೆದು ಬಂದ ಹಾದಿ ಸುಲಭವೇನಲ್ಲ. ಹೊರಗಿನ ಸವಾಲುಗಳಿಗಿಂತ ಪಕ್ಷದೊಳಗಿನ ಸವಾಲುಗಳನ್ನು ಎದುರಿಸಿದ್ದೆ ಹೆಚ್ಚು. ಅನೇಕ ಅಡ್ಡಿ ಆತಂಕಗಳ ನಡುವೆ ವಿಜಯೇಂದ್ರ ಅವರು ಸಹನೆ ಕಳೆದುಕೊಳ್ಳಲಿಲ್ಲ. 2018ರಲ್ಲಿ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯಲು ಸಿದ್ಧವಾಗಿದ್ದ ವಿಜಯೇಂದ್ರ ಅವರಿಗೆ ಪಕ್ಷದೊಳಗಿನ ರಾಜಕೀಯ ಷಡ್ಯಂತ್ರಕ್ಕೆ ಸಿಲುಕಿ ಟಿಕೆಟ್ ವಂಚಿತರಾಗಿ ಚುನಾವಣಾ ರಾಜಕಾರಣದಿಂದ ಆಚೆಗೆ ಉಳಿಯಬೇಕಾಯಿತು. ಕಳೆದ ಬಾರಿ ತಮ್ಮದೇ ಸರ್ಕಾರ ಇದ್ದಾಗಲೂ ವಿಧಾನ ಪರಿಷತ್ ಟಿಕೆಟ್ ವಂಚಿತರಾಗಬೇಕಾಯಿತು. ಆದರೂ, ತನಗೆ ಅನ್ಯಾಯವಾಗುತ್ತಿದೆ ಎಂದು ಸ್ಪೋಟಗೊಳ್ಳಲಿಲ್ಲ. ತಂದೆಯ ಕಿವಿ ಮಾತು ಕೇಳಿಯೇ ನೋವು ನುಂಗಿಕೊಂಡು ತಣ್ಣಗಾಗಿದ್ದು ಈಗ ಅದು ದೊಡ್ಡ ಲವನ್ನೆ ನೀಡಿದೆ.

    ಉಪ ಚುನಾವಣೆ ಟಾಸ್ಕ್
    ಯಡಿಯೂರಪ್ಪ ಮುಖ್ಯಮಂತ್ರಿಯಾದರೂ, ತವರು ಕ್ಷೇತ್ರ ಕೆ.ಆರ್.ಪೇಟೆಯಲ್ಲಿ ಬಿಜೆಪಿ ಗೆಲ್ಲಲಿಲ್ಲ ಎನ್ನುವ ಸವಾಲನ್ನು ಸ್ವೀಕರಿಸಿದ ವಿಜಯೇಂದ್ರ, ಕಳೆದ ವಿಧಾನಸಭೆ ಮರುಚುನಾವಣೆಯಲ್ಲಿ ಅಲ್ಲಿಯೇ ಠಿಕಾಣಿ ಹೂಡಿ ಬಿಜೆಪಿ ಅಭ್ಯರ್ಥಿ ನಾರಾಯಣಗೌರನ್ನು ಗೆಲ್ಲಿಸುವ ಮೂಲಕ ತಂದೆಗೆ ವಿಜಯದ ಮಾಲೆ ಅರ್ಪಿಸಿದ್ದರು. ತುಮಕೂರು ಜಿಲ್ಲೆ ಶಿರಾ ಕ್ಷೇತ್ರದಲ್ಲಿ ಎಂದೂ ಬಿಜೆಪಿ ಗೆದ್ದಿರಲಿಲ್ಲ. ಆ ಕ್ಷೇತ್ರದ ಚುನಾವಣೆಯನ್ನು ನಿಭಾಯಿಸಿದ್ದ ವಿಜಯೇಂದ್ರ ಅವರು ಸವಾಲಿನ ನಡುವೆ ಗೆಲುವು ಸಾಧಿಸುವ ಮೂಲಕ ತಮ್ಮ ರಾಜಕೀಯ ಸಾಮರ್ಥ್ಯವನ್ನು ಮತ್ತೊಮ್ಮೆ ಹೈಕಮಾಂಡ್‌ಗೆ ಮನದಟ್ಟು ಮಾಡಿದ್ದರು. ಪಕ್ಷದೊಳಗೆ ನೀಡಿದ ಒಂದೊಂದೇ ಸವಾಲುಗಳನ್ನು ಸಹನೆಯಿಂದಲೇ ಈಜುತ್ತಲೇ ಬಂದದ್ದು ಅವರಿಗೆ ಪಕ್ಷ ಸಂಘಟನೆಯ ವಿಶ್ವಾಸವನ್ನು ಇಮ್ಮಡಿಯಾಗಿಸಿತ್ತು.

    ಬರ್ತ್‌ಡೇ ಗ್‌ಟಿ
    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕಳಪೆ ಸಾಧನೆಗೆ ತೀವ್ರ ಆಘಾತಗೊಂಡಿದ್ದ ಬಿಜೆಪಿ ಹೈಕಮಾಂಡ್ ಈ ಬಾರಿ ಪಕ್ಷದೊಳಗಿನ ಅಸಂತೋಷಿಗರ ಪಡೆಯ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಲಿಲ್ಲ. ಯಡಿಯೂರಪ್ಪ ಅವರು ರಾಜ್ಯದಲ್ಲಿ ಕಟ್ಟಿರುವ ಬಿಜೆಪಿಯ ನೆಲೆಯನ್ನು ಹಾಗೆಯೇ ಕಾಯ್ದಿಟ್ಟುಕೊಳ್ಳಲು ಮತ್ತು ವೀರಶೈವ ಲಿಂಗಾಯಿತ ಸಮುದಾಯದ ವಿಶ್ವಾಸವನ್ನು ಗಳಿಸಿಕೊಳ್ಳುವ ಲೆಕ್ಕಾಚಾರದೊಂದಿಗೆ ರಾಜ್ಯದ ಬಿಜೆಪಿ ನಾಯಕತ್ವ ಪಟ್ಟವನ್ನು ವಿಜಯೇಂದ್ರ ಅವರಿಗೆ ಕಟ್ಟಿದೆ. ಆ ಮೂಲಕ ಭವಿಷ್ಯದಲ್ಲಿ ವೈರುದ್ಯದ ವಾತಾವರಣದಲ್ಲಿಯೂ ಬಿಜೆಪಿ ಹೈಕಮಾಂಡ್, ರಾಜ್ಯದಲ್ಲಿ ಭರ್ಜರಿ ಬೆಳೆ ಬೆಳೆಯುವ ಗುರಿ ಇಟ್ಟುಕೊಂಡಿದೆ. ಇದು ಒಂದು ರೀತಿಯಲ್ಲಿ ವಿಜಯೇಂದ್ರ ಅವರಿಗೆ ಟಾಸ್ಕ್ ಕೂಡ ಹೌದು. ಹಾಗೆಯೇ ಬರ್ತ್ ಡೇ ಗ್‌ಟಿ ಕೂಡ ಹೌದು.

    ಮುಂದಿದೆ ದೊಡ್ಡ ಸವಾಲು
    ಕಳೆದ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿಗೆ ಹೊಸ ಜೋಷ್ ತುಂಬುವ ಕೆಲಸ ಆಗಬೇಕಾಗಿದೆ. ನಾನಾ ಕಾರಣಗಳಿಗಾಗಿ ಕಿರಿಯ ಮತ್ತು ಹಿರಿಯ ನಾಯಕರುಗಳ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ಮೊದಲು ಸರಿಪಡಿಸಿಕೊಂಡು ಚುನಾವಣೆಗೆ ರಾಜ್ಯದ ಟೀಮ್ ಸಿದ್ಧಪಡಿಸಬೇಕಿದೆ. ತಮ್ಮದೇ ರಾಜಕೀಯ ಭವಿಷ್ಯಕ್ಕೆ ಅಡ್ಡಿಯಾಗುತ್ತಿದ್ದ ಸ್ವಪಕ್ಷಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದೆ. ಸುಧೀರ್ಘ ರಾಜಕೀಯ ಅನುಭವ ಹೊಂದಿರುವ ಯಡಿಯೂರಪ್ಪ ಅವರ ಅನುಭವದ ಮಾರ್ಗದರ್ಶನ ವಿಜಯೇಂದ್ರ ಅವರ ಬೆನ್ನಿಗಿರುವುದರಿಂದ ಇದ್ಯಾವುದೂ ಅವರಿಗೆ ಅಸಾಧ್ಯವೇನಲ್ಲ. ಆದರೆ, ಸಹನೆ ಮತ್ತು ಸಂಘಟನೆ ಅವರನ್ನು ಯಶಸ್ವಿನ ಪಥದತ್ತ ಹೊರಳಿಸಲು ಸಾಧ್ಯವಿದೆ. ವೈರುದ್ಯದ ವಾತಾವರಣದಲ್ಲಿ ಈ ಸವಾಲುಗಳನ್ನು ವಿಜಯೇಂದ್ರ ಹೇಗೆ ಎದುರಿಸಿ ಸಾಗುತ್ತಾರೆ ಎನ್ನುವುದಷ್ಟೆ ಮುಂದಿರುವ ಕುತೂಹಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts