More

    ಗೋವಾದಲ್ಲಿ ಹಡಗಿನ ಚಾವಣಿ ಮೇಲೆ ವಿಜೇಂದರ್ ಸಿಂಗ್ ಬಾಕ್ಸಿಂಗ್ ಪಂದ್ಯ!

    ನವದೆಹಲಿ: ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಕರೊನಾ ಕಾಲದ ಮೊದಲ ಕಾದಾಟಕ್ಕೆ ಸಜ್ಜಾಗಿದ್ದು, ಮಾರ್ಚ್ 19ರಂದು ಗೋವಾದಲ್ಲಿ ಹಡಗಿನ ಚಾವಣಿ ಮೇಲಿನ ವೇದಿಕೆಯಲ್ಲಿ ತಮ್ಮ ಮುಂದಿನ ಪಂದ್ಯವನ್ನು ಆಡಲಿರುವುದು ವಿಶೇಷವೆನಿಸಿದೆ. ವೃತ್ತಿಪರ ಬಾಕ್ಸಿಂಗ್‌ನಲ್ಲಿ ಸತತ 12 ಗೆಲುವುಗಳ ಅಜೇಯ ದಾಖಲೆ ಹೊಂದಿರುವ 35 ವರ್ಷದ ವಿಜೇಂದರ್ 2019ರ ನವೆಂಬರ್ ಬಳಿಕ ಆಡಲಿರುವ ಮೊದಲ ಪಂದ್ಯ ಇದಾಗಿರಲಿದೆ. ಪಂದ್ಯದಲ್ಲಿ ವಿಜೇಂದರ್ ಎದುರಾಳಿ ಯಾರೆಂದು ಇನ್ನೂ ನಿರ್ಧಾರವಾಗಿಲ್ಲ.

    ‘ಗೋವಾದ ಹಡಗುಕಟ್ಟೆಯಲ್ಲಿ ನಿಂತ ಮೆಜೆಸ್ಟಿಕ್ ಪ್ರೈಡ್ ಕ್ಯಾಸಿನೋ ಶಿಪ್‌ನ ಚಾವಣಿ ಮೇಲಿನ ರಿಂಗ್‌ನಲ್ಲಿ ವಿಜೇಂದರ್ ಪಂದ್ಯವಾಡಲಿದ್ದು, ಈ ರೀತಿಯ ಕಾದಾಟ ಇದೇ ಮೊದಲಾಗಿರುತ್ತದೆ. ಈ ಕ್ಯಾಸಿನೋ ಶಿಪ್ ಪಂದ್ಯದ ತಾಣದ ಪ್ರಾಯೋಜಕತ್ವ ವಹಿಸಿಕೊಂಡಿದೆ’ ಎಂದು ವಿಜೇಂದರ್‌ರ ಪ್ರಮೋಟರ್ಸ್‌ ‘ಐಎಸ್‌ಒ ಬಾಕ್ಸಿಂಗ್ ಪ್ರಮೋಷನ್ಸ್’ ಕಂಪನಿ ತಿಳಿಸಿದೆ.

    ಇದನ್ನೂ ಓದಿ: ಟೆನಿಸ್ ಕೋರ್ಟ್‌ಗೆ ಸಾನಿಯಾ ಮಿರ್ಜಾ ಗೆಲುವಿನ ಪುನರಾಗಮನ

    ಪಣಜಿಯ ಮಾಂಡೋವಿ ನದಿಯಲ್ಲಿ ಮೆಜೆಸ್ಟಿಕ್ ಪ್ರೈಡ್ ಹಡಗು ನಿಂತಿರುತ್ತದೆ. ಎಂದಿನ ವೃತ್ತಿಪರ ಬಾಕ್ಸಿಂಗ್ ಪಂದ್ಯಗಳಿಗಿಂತ ಈ ಕಾದಾಟ ಭಿನ್ನವಾಗಿರಲಿದ್ದು, ನೋಡುಗರಿಗೆ ವೇಗಸ್ ಸ್ಟೈಲ್‌ನ ವಿಶೇಷ ಮನಮೋಹಕ ನೋಟವನ್ನು ಒದಗಿಸಲಿದೆ. ಶೀಘ್ರದಲ್ಲೇ ಎದುರಾಳಿಯ ಹೆಸರನ್ನು ಪ್ರಕಟಿಸಲಾಗುವುದು ಎಂದು ಪ್ರಮೋಟರ್ಸ್‌ ಕಂಪನಿ ತಿಳಿಸಿದೆ.

    ‘ಭಾರತದಲ್ಲಿ ಹಿಂದೆಂದೂ ಈ ರೀತಿಯ ಪಂದ್ಯ ನಡೆದಿಲ್ಲ. ಇಂಥ ಅಪರೂಪದ ವೃತ್ತಿಪರ ಪಂದ್ಯದ ಭಾಗವಾಗುತ್ತಿರುವುದಕ್ಕೆ ಖುಷಿ ಇದೆ. ನಾನು ಮತ್ತೊಮ್ಮೆ ರಿಂಗ್ ಪ್ರವೇಶಿಸಲು ಉತ್ಸುಕನಾಗಿರುವೆ. ಪಂದ್ಯಕ್ಕೆ ಫಿಟ್ ಆಗಿರಲು ಕಠಿಣ ತರಬೇತಿ ಪಡೆಯುತ್ತಿರುವೆ’ ಎಂದು ವಿಜೇಂದರ್ ಸಿಂಗ್ ತಿಳಿಸಿದ್ದಾರೆ.

    ಟೆನಿಸ್ ಕೋರ್ಟ್‌ಗೆ ಸಾನಿಯಾ ಮಿರ್ಜಾ ಗೆಲುವಿನ ಪುನರಾಗಮನ

    ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ ಸ್ಥಾನ ಪಡೆದ ರೋಹಿತ್ ಶರ್ಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts