More

    ಮೂಲ್ಕಿ ವಿಜಯ ಕಾಲೇಜಿನಲ್ಲಿ ‘ವಿಜಯೋತ್ಸವ’

    ಮೂಲ್ಕಿ: ವಿಜ್ಞಾನ, ತಂತ್ರಜ್ಞಾನಗಳಿಂದ ಜೀವನದಲ್ಲಿ ಹೊಸ ಹುರುಪು ಕಂಡುಕೊಂಡು ಅಭಿವೃದ್ಧಿಯತ್ತ ಸಾಗಬೇಕು. ಮಾನವೀಯ ಹೃದಯವಂತಿಗೆಯಿಂದ ಉತ್ತಮ ನಾಗರಿಕರಾಗಿ ವಿದ್ಯಾರ್ಥಿಗಳು ಬೆಳೆಯಬೇಕು ಎಂದು ವಿಜಯ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಉದ್ಯಮಿ ನಂದಳಿಕೆ ಸುಹಾಸ್ ಹೆಗ್ಡೆ ಹೇಳಿದರು.

    ಮೂಲ್ಕಿ ವಿಜಯ ಕಾಲೇಜಿನಲ್ಲಿ ಸೋಮವಾರ ‘ವಿಜಯೋತ್ಸವ’ ಅಂತರ್ ಕಾಲೇಜು ವಿದ್ಯಾರ್ಥಿಗಳ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

    ಶಿಕ್ಷಣದ ಜತೆಗೆ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ವಿಶೇಷ ಸ್ಪರ್ಧೆಗಳು ಹಾಗೂ ಕಾರ್ಯಕ್ರಮಗಳನ್ನು ಕಾಲೇಜು ನಡೆಸುತ್ತಿದೆ. ವಿದ್ಯಾರ್ಥಿಗಳು ಹೊಸತನದ ಮೂಲಕ ಹುರುಪಿನಲ್ಲಿ ಮುಂದುವರಿಯಬೇಕು ಎಂದರು.

    ಪದವಿ ಕಾಲೇಜು ಪ್ರಾಂಶುಪಾಲೆ ಡಾ.ಶ್ರೀಮಣಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಪಮೀದಾ ಬೇಗಂ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಸಂಪತ್ ಕುಮಾರ್, ಕಾಲೇಜು ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ವೆಂಕಟೇಶ್ ಭಟ್, ಕಂಪ್ಯೂಟರ್ ವಿಭಾಗ ಮುಖ್ಯಸ್ಥೆ ಜ್ಯೋತಿ ಶಂಕರ್ ಸಾಲಿಯಾನ್, ವಾಣಿಜ್ಯ ವಿಭಾಗ ಮುಖ್ಯಸ್ಥೆ ಶರ್ಮಿಳಾ ರಾಜೇಶ್, ವಾಣಿಜ್ಯ ಸಂಘದ ಮುಖ್ಯಸ್ಥ ನಿಖಿಲ್, ವಿಜ್ಞಾನ ಸಂಘದ ಮುಖ್ಯಸ್ಥ ರೋಶನ್ ಶೆಟ್ಟಿ, ಕಂಪ್ಯೂಟರ್ ಸಂಘದ ಮುಖ್ಯಸ್ಥ ತೇಜಸ್ ಉಪಸ್ಥಿತರಿದ್ದರು.

    ಶರ್ಮಿಳಾ ರಾಜೇಶ್ ಸ್ವಾಗತಿಸಿ, ಜ್ಯೋತಿ ಶಂಕರ್ ಸಾಲಿಯಾನ್ ಪ್ರಸ್ತಾವಿಸಿದರು. ಸುಹಾನಾ ಕಾರ್ಯಕ್ರಮ ನಿರೂಪಿಸಿದರು. ರೋಹನ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts