More

    ಲೈಬ್ರರಿ ಪುಸ್ತಕ ಮಾಫಿಯಾ ತನಿಖೆಗೆ ಆದೇಶ; ವಿಜಯವಾಣಿ ವರದಿ ಪರಿಣಾಮ

    ಬೆಂಗಳೂರು: ಅಕ್ಷರಜ್ಞಾನ ಹಂಚುವ ಗ್ರಂಥಾಲಯಗಳಲ್ಲಿ ನಡೆಯುತ್ತಿರುವ ಪುಸ್ತಕ ಮಾಫಿಯಾವನ್ನು ಬಯಲಿಗೆಳೆದ ವಿಜಯವಾಣಿ ವರದಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಲು ಆದೇಶಿಸಿದೆ. ‘ಲೈಬ್ರರಿ ಪುಸ್ತಕ ಮಾಫಿಯಾ’ ಶೀರ್ಷಿಕೆಯಡಿ ಬುಧವಾರ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಗ್ರಂಥಾಲಯಗಳ ಪುಸ್ತಕ ಮಾಫಿಯಾ ವರದಿ ರಾಜ್ಯದ ಸಾರಸ್ವತ ಲೋಕದಲ್ಲಿ ಸಂಚಲನ ಉಂಟುಮಾಡಿದ ಬೆನ್ನಲ್ಲೇ ಸರ್ಕಾರ ಈ ಕ್ರಮ ಕೈಗೊಂಡಿದೆ. ಸಮಗ್ರ ತನಿಖೆ ನಡೆಸಿದ ಬಳಿಕ ಸುಧಾರಣಾ ಅಂಶಗಳನ್ನು ಸಲ್ಲಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಆದೇಶಿಸಿದ್ದಾರೆ.

    ಈ ಪ್ರಕರಣದ ಕುರಿತು ಕೂಡಲೇ ಒಬ್ಬ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಪೂರ್ಣ ಪ್ರಮಾಣದ ತನಿಖೆ ನಡೆಸಿ, ಕೈಗೊಳ್ಳಬಹುದಾದ ಸುಧಾರಣಾ ಕ್ರಮಗ ಳೊಂದಿಗೆ ಕಡತದಲ್ಲಿ ತಿಂಗಳೊಳಗಾಗಿ ಪ್ರಸ್ತಾವನೆಯನ್ನು ಮಂಡಿಸಿ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸುರೇಶ್ ಕುಮಾರ್ ಸೂಚಿಸಿದ್ದಾರೆ. ಹಳೆಯ ಪುಸ್ತಕಗಳನ್ನೇ ಮರುಮುದ್ರಿಸಿ ಮಾರಾಟ ಮಾಡುವ ಹಾಗೂ ಅಧಿಕಾರಿಗಳ ಕಮಿಷನ್ ದಂಧೆ ಕುರಿತ ವಿಜಯವಾಣಿ ವರದಿ ಯನ್ನು ಸಚಿವ ಎಸ್. ಸುರೇಶ್ ಕುಮಾರ್ ಗಂಭೀರವಾಗಿ ಪರಿಗಣಿಸಿದ್ದಾರೆ.

    ಲೈಬ್ರರಿ ಪುಸ್ತಕ ಮಾಫಿಯಾ ತನಿಖೆಗೆ ಆದೇಶ; ವಿಜಯವಾಣಿ ವರದಿ ಪರಿಣಾಮ‘ವಿಜಯವಾಣಿಯಲ್ಲಿ ಮುಖಪುಟದಲ್ಲಿ ಪ್ರಕಟವಾಗಿರುವ ವರದಿಯಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿನ ಪುಸ್ತಕ ಮುದ್ರಣದಲ್ಲಿ ನಡೆಯುತ್ತಿರಬಹುದಾದ ಅವ್ಯವಹಾರ ವನ್ನು ಸುದೀರ್ಘವಾಗಿ ಪ್ರಸ್ತಾಪಿಸಲಾಗಿದೆ. ಪತ್ರಿಕಾ ವರದಿಯನ್ನು ಗಂಭೀರವಾಗಿ ಪರಿಗಣಿಸುವುದರ ಜತೆಗೆ, ಕ್ರಿಯಾತ್ಮಕ ಹೆಜ್ಜೆ ಇಟ್ಟಿರುವ ಸಚಿವರ ನಡೆಗೆ ಸಾರಸ್ವತ ಲೋಕದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ನಿವೃತ್ತ ನ್ಯಾಯಾಧೀಶರು ಪೂರ್ಣ ಪ್ರಮಾಣದ ತನಿಖೆ ನಡೆಸುವುದರ ಜತೆಗೆ ಒಂದು ತಿಂಗಳಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಸಮಯಾಧಾರಿತ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ. ಪುಸ್ತಕ ಜಗತ್ತನ್ನು ಕಾಡುತ್ತಿರುವ ಮಾಫಿಯಾಕ್ಕೆ ಈ ಕ್ರಮದಿಂದಾದರೂ ಕಡಿವಾಣ ಬೀಳಲಿ ಎಂದು ಅನೇಕರು ಆಶಯ ವ್ಯಕ್ತಪಡಿಸಿದ್ದಾರೆ.

    ಲೈಬ್ರರಿ ಪುಸ್ತಕ ಮಾಫಿಯಾ ತನಿಖೆಗೆ ಆದೇಶ; ವಿಜಯವಾಣಿ ವರದಿ ಪರಿಣಾಮ

    ಪುಸ್ತಕ ಮಾಫಿಯಾ ಕೊನೆಯಾಗಲಿ

    ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕ ಖರೀದಿ ಮಾಡುವಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಕುರಿತಂತೆ ‘ವಿಜಯವಾಣಿ’ ಬಯಲಿಗೆಳೆದ ಪುಸ್ತಕ ಜಗತ್ತಿನಲ್ಲಿ ಸಂಚಲನ ಉಂಟು ಮಾಡಿದೆ. ಜ್ಞಾನ ಪ್ರಸಾರದ ಈ ಕ್ಷೇತ್ರದಲ್ಲಿ ಮಾಫಿಯಾ ಬೀಡುಬಿಟ್ಟಿರುವುದು ಬೇಸರ. ಸಚಿವ ಸುರೇಶ್ ಕುಮಾರ್ ಅವರು ತ್ವರಿತ ಕ್ರಮದಿಂದಾದರೂ ಇದು ಕೊನೆಯಾಗಲಿ ಎಂದಿದ್ದಾರೆ. ಬೆಂಗಳೂರಿನ ಪ್ರಕಾಶನ ಸಂಸ್ಥೆಯ ಮಾಲೀಕರೊಬ್ಬರು ಕರೆಮಾಡಿ, ಪುಸ್ತಕಗಳ ಮರುಮುದ್ರಣ ಕುರಿತು ಗಮನ ಸೆಳೆದಿದ್ದಾರೆ. ಕೆ. ಶಿವರಾಮ ಕಾರಂತರಂಥವರು ಬರೆದಿರುವ ಪುಸ್ತಕಗಳನ್ನು ‘ಪರಿಷ್ಕೃತ’ ಮುದ್ರಣ ಎಂದು ಗ್ರಂಥಾಲಯಕ್ಕೆ ಸರಬರಾಜು ಮಾಡಲಾಗುತ್ತದೆ. ಈಗಾಗಲೇ ಆಯ್ಕೆಯಾಗಿರುವ 2018ನೇ ಸಾಲಿನ ಪುಸ್ತಕಗಳ ಪಟ್ಟಿಯಲ್ಲೂ ಇಂತಹ ಅನೇಕ ಕೃತಿಗಳಿವೆ. ಲೇಖಕರೇ ನಿಧನರಾದ ಮೇಲೆ ಪರಿಷ್ಕೃತ ಮುದ್ರಣ ಬರಲು ಹೇಗೆ ಸಾಧ್ಯ? ಇಂತಹ ಅನೇಕ ವಿಚಾರಗಳ ಕುರಿತು ತನಿಖೆ ನಡೆಯಲಿ ಎಂದು ಆಶಿಸಿದ್ದಾರೆ.

    ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಪ್ರತಿಕ್ರಿಯಿಸಿ, ಭ್ರಷ್ಟಾಚಾರದಲ್ಲಿ ನಿರತವಾಗಿರುವವರಿಗೆ ಶಿಕ್ಷೆಯಾಗಲಿ. ಆದರೆ ಪ್ರಾಮಾಣಿಕರಿಗೆ ತೊಂದರೆ ಆಗದಿರಲಿ. ಈಗಾಗಲೇ ಕರೊನಾದಿಂದಾಗಿ ಪುಸ್ತಕ ಜಗತ್ತು ನಲುಗಿದೆ. ಆರ್ಥಿಕ ವರ್ಷ ಅಂತ್ಯಕ್ಕೆ ಬಂದರೂ 2020-21ರ ಪುಸ್ತಕ ಖರೀದಿ ಆಯವ್ಯಯಕ್ಕೆ ಸರ್ಕಾರ ಅನುಮೋದನೆ ನೀಡಿಲ್ಲ. 2017ನೇ ಸಾಲಿನ ಪುಸ್ತಕ ಖರೀದಿಯ ಮೊತ್ತ ಪಾವತಿಯಾಗಿಲ್ಲ, 2018ನೇ ಸಾಲಿಗೆ ಅನುದಾನ ಅನುಮೋದನೆ ಆಗಿಲ್ಲ. ಬಿಬಿಎಂಪಿಯಲ್ಲಿ ಸಂಗ್ರಹವಾಗಿರುವ 450 ಕೋಟಿ ರೂ. ಗ್ರಂಥಾಲಯ ಸೆಸ್ ಪಾವತಿ ಆಗಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕು ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts