More

    ಜನಮತ: ಗ್ರಂಥಾಲಯಗಳನ್ನು ಉಳಿಸಿ

    ಸರ್ಕಾರ ಕನ್ನಡದ ಯೋಗಕ್ಷೇಮ ಮರೆತಿದೆ. ಸಾಹಿತ್ಯ ಪರಿಷತ್ತಿಗೂ ಕನ್ನಡ ಎಂದರೆ ಅಷ್ಟಕ್ಕಷೆ. ಇದರಿಂದಾಗಿ ಕನ್ನಡದ ಜ್ಞಾನಭಂಡಾರವಾದ ಗ್ರಂಥಾಲಯಗಳು ಹಳೆಯ ಸರಕನ್ನು ತುಂಬಿಕೊಂಡು ಕೊರಗುತ್ತಿವೆ. ಇದು 2020. ಆದರೆ ಬೆಂಗಳೂರಿನ ಗ್ರಂಥಾಲಯಗಳಿಗೆ ಇನ್ನು 2015ರ ಪುಸ್ತಕ ಕೊಳ್ಳಲು ಸರ್ಕಾರದಿಂದ ಹಣ ಬಿಡುಗಡೆ ಮಾಡಿದಂತೆ ಇಲ್ಲ. ಕರ್ನಾಟಕದಾದ್ಯಂತ ಇರುವ ಗ್ರಂಥಾಲಯಗಳಿಗೆ 2017ರಲ್ಲಿ ಪ್ರಕಟವಾಗಿರುವ ಪುಸ್ತಕಗಳು ಖರೀದಿಗೆ ಆಯ್ಕೆಯಾಗಿದ್ದರೂ ಕೊಳ್ಳಲು ಸರ್ಕಾರದಿಂದ ಅನುದಾನ ಸಿಗದೆ, ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ.

    ವಿಧಾನಮಂಡಲ ಕಲಾಪ ನಡೆಯುವಾಗ ಶಾಸಕರು ಅನೇಕ ವಿಷಯಗಳ ಬಗ್ಗೆ ದನಿ ಎತ್ತುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಒಬ್ಬ ಶಾಸಕರೂ ಕನ್ನಡದ ಬಗ್ಗೆ ಮಾತಾಡಿದ್ದು ಕೇಳಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಇದರತ್ತ ಗಮನ ಹರಿಸಿ ಕನ್ನಡದ ಸ್ಥಿತಿಗತಿಯನ್ನು ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ. ಬೇರೆಲ್ಲ ಯೋಜನೆಗಳಿಗೆ ನೀಡುವ ಅನುದಾನಕ್ಕೆ ಹೋಲಿಸಿದರೆ ಕನ್ನಡ ಪುಸ್ತಕ ಖರೀದಿಗೆ ಬೇಕಾದ ಹಣ ಅತ್ಯಲ್ಪ. ಆದರೆ ಈ ಅಲ್ಪ ಹಣವೂ ಕನ್ನಡ ಬೆಳೆಸುವಲ್ಲಿ ಗಣನೀಯ ಕೆಲಸ ಮಾಡುತ್ತದೆ. ಕನ್ನಡಿಗರಲ್ಲಿ ಮರೆಯಾಗುತ್ತಿರುವ ಓದುವ ಸಂಸ್ಕೃತಿಗೆ ಪುನಶ್ಚೇತನ ನೀಡಲು ಸಾಧ್ಯವಾಗುತ್ತದೆ. ಗ್ರಂಥಾಲಯಗಳಿಗಾಗಿಯೇ ವಸೂಲು ಮಾಡುವ ತೆರಿಗೆ ಹಣ ಇದ್ದರೂ ಅದನ್ನೂ ನೀಡಲು ಹಿಂಜರಿಯುವುದು ಏಕೆ ಎನ್ನುವುದೇ ಅರ್ಥವಾಗುವುದಿಲ್ಲ. ಕನ್ನಡದ ಲೇಖಕರು, ಪ್ರಕಾಶಕರು ಇದರ ಬಗ್ಗೆ ಗಮನ ಸೆಳೆದರು ಕೂಡ ಸರ್ಕಾರ ಸ್ಪಂದಿಸುತ್ತಿಲ್ಲ. ಈ ಕುರಿತು ಕೆಲ ದಿನಗಳ ಹಿಂದೆ ಹಿರಿಯ ಸಾಹಿತಿ ಡಾ ಎಚ್.ಎಸ್.ವೆಂಕಟೇಶಮೂರ್ತಿ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈಗಲಾದರೂ ಸರ್ಕಾರ ಸೂಕ್ತವಾಗಿ ಸ್ಪಂದಿಸಿ, ಪುಸ್ತಕಗಳ ಖರೀದಿಗೆ ಅನುದಾನ ಬಿಡುಗಡೆ ಮಾಡಲಿ.

    | ಸತ್ಯಬೋಧ ಬೆಂಗಳೂರು

    ಮಾರಕ ಕರೊನಾ ವೈರಸ್​ನಿಂದ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್​ ಪಾರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts