More

    ಸಮಾಜಸೇವಕ ಹನುಮಂತಯ್ಯ ಶೆಟ್ಟಿಗೆ ವಿಜಯರತ್ನ ಗರಿ; ವಿಜಯವಾಣಿ-ದಿಗ್ವಿಜಯ ವಾಹಿನಿಯ ಗೌರವ ಪ್ರದಾನ

    ಸಿರಗುಪ್ಪ (ಬಳ್ಳಾರಿ): ಸಿರಗುಪ್ಪ ತಾಲೂಕಿನಲ್ಲಿ ಸಮಾಜ ಸೇವೆ ಕೈಗೊಳ್ಳುವ ಮೂಲಕ ಹೊಸ ಕ್ರಾಂತಿ ಸೃಷ್ಟಿಸಿದ ಸಮಾಜ ಸೇವಕ, ಶ್ರೀ ವಿಷ್ಣು ವಿಲಾಸ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಅಧ್ಯಕ್ಷರೂ ಆದ ಎಚ್.ಜೆ. ಹನುಮಂತಯ್ಯ ಶೆಟ್ಟಿ ಅವರಿಗೆ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ವಿಜಯರತ್ನ-2022’ ಪ್ರಶಸ್ತಿ ಕೊಡಮಾಡಲಾಗಿದೆ. ಬೆಂಗಳೂರಿನಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್, ಖ್ಯಾತ ಚಿತ್ರನಟ ರಮೇಶ ಅರವಿಂದ್, ನಟಿ ಶರ್ವಿುಳಾ ಮಾಂಡ್ರೆ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ, ವಿಧಾನಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಇತರರಿದ್ದರು.

    ತಾಲೂಕಿನ ಗಡಿಭಾಗದ ಹಚ್ಚೊಳ್ಳಿ ಗ್ರಾಮದ ಜೆ.ಮೂಕಯ್ಯಶೆಟ್ಟಿ ಮತ್ತು ಜೆ. ಆದಿಲಕ್ಷ್ಮೀ ದಂಪತಿಯ ಏಳು ಗಂಡು ಮತ್ತು ಒಬ್ಬ ಹೆಣ್ಣು ಮಕ್ಕಳಲ್ಲಿ ಕಿರಿಯರಾದ ಹನುಮಂತಯ್ಯ ಶೆಟ್ಟಿಯವರು 1971ರ ಜನವರಿ ಒಂದರಂದು ಜನಿಸಿದ್ದಾರೆ. ಇವರು ಚಿಕ್ಕಂದಿನಿಂದಲೇ ತಂದೆ ಆಶಯದಂತೆ ಬೆಳೆದುಬಂದಿದ್ದಾರೆ. ವ್ಯವಹಾರದಿಂದ ಬಂದ ಆದಾಯದಲ್ಲಿ ಬಡವರು, ನಿರ್ಗತಿಕರು, ವಿದ್ಯಾರ್ಥಿಗಳ ಕಷ್ಟಕ್ಕೆ ಸ್ಪಂದಿಸುತ್ತಾ ಬಂದಿದ್ದು, ಇದರ ಪರಿಣಾಮ ಹಲವು ಅತ್ಯುನ್ನತ ಸ್ಥಾನಗಳು ಇವರನ್ನು ಅರಸಿಬಂದಿವೆ.

    1998ರಿಂದ ಆರ್ಯ ವೈಶ್ಯ ಮಂಡಳಿಯಿಂದ ಸಮಾಜ ಸೇವೆಯಲ್ಲಿ ತೊಡಗಿರುವ ಎಚ್.ಜೆ.ಹನುಮಂತಯ್ಯ ಶೆಟ್ಟಿ ಅವರು ಸಿರಗುಪ್ಪ ನಗರದಲ್ಲಿ 2012ರಲ್ಲಿ ಸ್ನೇಹಿತರೊಂದಿಗೆ ಸೇರಿ ಶ್ರೀ ವಿಷ್ಣು ವಿಲಾಸ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಆರಂಭಿಸಿ, ಸಂಸ್ಥಾಪಕ ಅಧ್ಯಕ್ಷರಾಗಿ 10 ವರ್ಷದಲ್ಲಿಯೇ ನೂರಾರು ಬಡ ವ್ಯಾಪಾರಸ್ಥರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಮುಖಾಂತರ ನಿರ್ದೇಶಕರ ಮತ್ತು ಗ್ರಾಹಕರ ವಿಶ್ವಾಸಗಳಿಸಿದ್ದಾರೆ. ಹೀಗಾಗಿ ಇಂದಿಗೂ ಇವರೇ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಸಹಕಾರಿ ಕ್ಷೇತ್ರದಿಂದ ಎಸ್ಸೆಸ್ಸೆಲ್ಸಿ-ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅವಶ್ಯವಿರುವ ವಿದ್ಯಾರ್ಥಿಗಳಿಗೆ ಧನಸಹಾಯ ಮಾಡಿದ್ದಾರೆ. ಕಳೆದ ಐದು ವರ್ಷಗಳಿಂದ ನಡೆದ ನಗರದಲ್ಲಿ ಗಿಡ ನೆಡುವ ಕಾರ್ಯಕ್ರಮದ ಪರಿಣಾಮ ಕೃಷ್ಣಾನಗರ, ಸದಾಶಿವ ನಗರ, ವಿಜಯ ವಿಠ್ಠಲ ನಗರ ಮತ್ತು ನಗರದ 25ನೇ ವಾರ್ಡ್​ನಲ್ಲಿನ ಗಿಡಗಳು ಸಮೃದ್ಧವಾಗಿ ಬೆಳೆದಿದ್ದು, ಉತ್ತಮ ಪರಿಸರದ ಜತೆಗೆ ನೆರಳು ನೀಡುತ್ತಿರುವುದು ನೋಡುಗರ ಮನಸ್ಸನ್ನು ಆಕರ್ಷಿಸುತ್ತಿವೆ.

    2018ರಿಂದ ರಕ್ತದಾನ ಶಿಬಿರದ ನಡೆಸುವ ಮೂಲಕ ಜಿಲ್ಲೆಯಲ್ಲಿಯೇ ಪ್ರತಿವರ್ಷ ಅತಿಹೆಚ್ಚು ದಾನಿಗಳಿಂದ ರಕ್ತ ಸಂಗ್ರಹಿಸಿ, ರಕ್ತದಾನದ ಮಹತ್ವ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸಿದ್ದಾರೆ. ಸಂಗ್ರಹ ರಕ್ತವನ್ನು ಬಳ್ಳಾರಿ ವಿಮ್ಸ್​ನ ರಕ್ತ ಭಂಡಾರ ನಿಧಿಗೆ ಕಳುಹಿಸುವುದು, ಪ್ರತಿ ಬೇಸಿಗೆಯಲ್ಲಿ ವಿವಿಧ ಗ್ರಾಮಗಳಿಂದ ನಗರಕ್ಕೆ ಬರುವ ಹಳ್ಳಿಗರಿಗೆ ಶುದ್ಧ ಕುಡಿವ ನೀರಿನ ಅರವಟಿಗೆ ಪ್ರಾರಂಭಿಸಿ ಅವರ ದಾಹ ನೀಗಿಸುವುದು ನಿರಂತರ ಸಾಗಿದೆ.

    ಉಡುಪಿ ಪೇಜಾವರ ಶ್ರೀಗಳು, ಪಲಿಮಾರ್ ಶ್ರೀಗಳು ಮತ್ತು ಮಂತ್ರಾಲಯದ ಶ್ರೀಗಳ ಆಶೀರ್ವಾದ ಮತ್ತು ಪ್ರಭಾವದಿಂದಾಗಿ ಯಾವುದೇ ಕೆಲಸ ಮಾಡಿದರೂ ಯಶಸ್ವಿಯಾಗುತ್ತಿವೆ. ಧಾರ್ವಿುಕ ಕಾರ್ಯಕ್ರಮಕ್ಕೆ ಟಿಟಿಡಿ ಅಪ್ಪಣ್ಣಾಚಾರ ಅವರ ಮಾರ್ಗದರ್ಶನ, ಕನ್ಯಕಾ ಪರಮೇಶ್ವರಿ ಕೋ.ಬ್ಯಾಂಕ್ ಸಿಇಒ ಶ್ರೀನಿವಾಸಮೂರ್ತಿ ಮತ್ತು ಸಿಂಧನೂರಿನ ಸಿಂಧೂ ಸಹಕಾರಿ ಅಧ್ಯಕ್ಷ ಬಿ.ರಾಜಶೇಖರ ಅವರ ಮಾರ್ಗದರ್ಶನದಲ್ಲಿ ನಗರದಲ್ಲಿ 2012ರಲ್ಲಿ ಶ್ರೀ ವಿಷ್ಣು ವಿಲಾಸ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಸ್ಥಾಪಿಸಿ ಯಶಸ್ವಿಯಾಗಿದ್ದು, ಸಮಾಜ ಸೇವೆ ಮಾಡಲು ಇನ್ನಷ್ಟು ಉತ್ಸಾಹ ಮೂಡಿದೆ.

    | ಎಚ್.ಜೆ.ಹನುಮಂತಯ್ಯ ಶೆಟ್ಟಿ, ಅಧ್ಯಕ್ಷ, ಶ್ರೀ ವಿಷ್ಣುವಿಲಾಸ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಸಂಸ್ಥಾಪಕ, ಸಿರಗುಪ್ಪ

    ಅಧಿಕಾರ, ಹಣ, ರಾಜಕೀಯ ಉದ್ದೇಶದಿಂದ ಸಮಾಜ ಸೇವೆ ಮಾಡುವವರನ್ನು ನೋಡಿದ್ದೇವೆ. ನಾವು ಹನುಮಂತಯ್ಯ ಶೆಟ್ಟಿ ಅವರನ್ನು 12 ವರ್ಷದಿಂದ ನೋಡುತ್ತಿದ್ದೇವೆ. ಸಮಾಜ ಮತ್ತು ಬಡವರ ಬಗ್ಗೆ ಅತಿಹೆಚ್ಚು ಕಾಳಜಿ ವಹಿಸಿ, ಅವರಿಗೆ ನೆರವಾಗುತ್ತಿರುವುದು ಶ್ಲಾಘನೀಯ ಮತ್ತು ಇತರರಿಗೆ ಮಾದರಿಯಾಗಿದೆ. ತಾಲೂಕು ಮಟ್ಟದಲ್ಲಿರುವ ಸಹಕಾರಿ ಕ್ಷೇತ್ರವನ್ನು ಉನ್ನತ ಮಟ್ಟದಲ್ಲಿ ಮುನ್ನಡೆಸುತ್ತಿರುವುದು ನೋಡಿದರೆ ಹನುಮಂತಯ್ಯ ಶೆಟ್ಟಿ ಅವರು ಶಿಸ್ತು, ಸಾರ್ವಜನಿಕರ ಒಡನಾಟ ಎಂಥದು ಎಂಬುದು ಗೊತ್ತಾಗುತ್ತದೆ. ಅವರು ನಿರೀಕ್ಷೆಗೂ ಮೀರಿ ಸಮಾಜಸೇವೆ ಕೈಗೊಂಡಿದ್ದಾರೆ. ಇದು ಹೀಗೆಯೇ ಮುಂದುವರಿಯಲಿ.

    | ಬಿ.ರಾಜಶೇಖರ, ಸಿಂಧನೂರಿನ ಸಿಂಧೂ ಸಹಕಾರಿ ಅಧ್ಯಕ್ಷ

    ಸಮಾಜಸೇವಕ ಹನುಮಂತಯ್ಯ ಶೆಟ್ಟಿಗೆ ವಿಜಯರತ್ನ ಗರಿ; ವಿಜಯವಾಣಿ-ದಿಗ್ವಿಜಯ ವಾಹಿನಿಯ ಗೌರವ ಪ್ರದಾನ
    ಖ್ಯಾತ ಚಿತ್ರನಟ, ನಿರ್ದೇಶಕ ರಮೇಶ ಅರವಿಂದ್ ಅವರಿಂದ ವಿಜಯರತ್ನ-2022 ಪ್ರಶಸ್ತಿಯನ್ನು ಸಮಾಜ ಸೇವಕ ಎಚ್.ಜೆ. ಹನುಮಂತಯ್ಯ ಶೆಟ್ಟಿ ಸ್ವೀಕರಿಸಿದರು. ಇವರ ಪತ್ನಿ ಎಚ್.ಜೆ. ವೀಣಾ ಹನುಮಂತಯ್ಯ ಶೆಟ್ಟಿ, ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಇದ್ದರು.

    ಹೆರಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳ ಅನುಕೂಲಕ್ಕಾಗಿ ಸ್ಮಾರ್ಟ್ ಟಿವಿ ವಿತರಿಸಿ ಕಲಿಕೆಗೆ ಪ್ರೋತ್ಸಾಹಿಸಿದ್ದಾರೆ. ಸರ್ಕಾರದ ಕಾರ್ಯಕ್ರಮಗಳಿಗೆ ಕೈಜೋಡಿಸಿ ತಾಲೂಕಿನ ಅಪೌಷ್ಟಿಕ ಮಕ್ಕಳಲ್ಲಿ ಪೌಷ್ಟಿಕತೆ ತುಂಬಲು ನೆರವಾಗಿದ್ದಾರೆ. ಮಕ್ಕಳಿಗೆ ಮತ್ತು ಪಾಲಕರಿಗೆ ಬೆಡ್​ಶೀಟ್ ವಿತರಿಸಿ ತಮ್ಮ ಅಳಿಲು ಸೇವೆ ಕೈಗೊಂಡಿದ್ದಾರೆ. ಕೋವಿಡ್ ಸಂದರ್ಭ ನಗರದಲ್ಲಿ ಮೊದಲ ಬಾರಿಗೆ ಮಾಸ್ಕ್ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಉಚಿತವಾಗಿ ಮಾಸ್ಕ್ ವಿತರಣೆ ಮಾಡಿದ್ದಾರೆ. ಆಕ್ಸಿಜನ್ ಕೊರತೆಯಾದಾಗ ತೆಕ್ಕಲಕೋಟೆ ಪೊಲೀಸ್ ಠಾಣೆಗೆ ಆಕ್ಸಿಜನ್ ಕಾನ್ಸಂಟ್ರೇಟ್ ಯಂತ್ರ ವಿತರಣೆ, ನಗರದ ಸಾರ್ವಜನಿಕ ಆಸ್ಪತ್ರೆಗೆ ಸುಮಾರು 20 ಪಲ್ಸ್ ಆಕ್ಷಿ ಮೀಟರ್ ಕೊಡುಗೆ ನೀಡಿದ್ದಾರೆ. ಇವರ ಸೇವೆ ಇಲ್ಲಿಗೇ ಮುಗಿಯುವುದಿಲ್ಲ. ಕೋವಿಡ್ ಸಂದರ್ಭ ಕರ್ತವ್ಯ ನಿರ್ವಹಿಸಿದ ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ, 30 ಬಡ ವಿದ್ಯಾರ್ಥಿಗಳನ್ನು ಶೈಕ್ಷಣಿಕ ದತ್ತು ಪಡೆದು, ಅವರಿಗೆ ಬ್ಯಾಗ್, ಪೆನ್, ನೋಟ್ ಪುಸ್ತಕ ಮುಂತಾದ ಸಾಮಾಗ್ರಿಗಳ ವಿತರಣೆ ಮಾಡಿದ್ದಾರೆ.

    ತಾಲೂಕಿನ ಪತ್ರಿಕಾ ವಿತರಕರಿಗೆ ದೀಪಾವಳಿ ಸಂದರ್ಭ ಹೊಸಬಟ್ಟೆಗಳ ವಿತರಣೆ, ಆರೋಗ್ಯ ಮತ್ತು ಕ್ರೀಡೆಯನ್ನು ಪೋ›ತ್ಸಾಹಿಸಲು ಕ್ರಿಕೆಟ್ ಟೂರ್ನಾಮೆಂಟ್ ಆಯೋಜಿಸಿದ್ದಾರೆ. ಅಂಧರು, ವೃದ್ಧರು, ಬಡವರಿಗೆ ನಿರಂತರ ಆರ್ಥಿಕ ಸಹಾಯ ಮಾಡುತ್ತಾ ಬಂದಿದ್ದಾರೆ. ಈ ಎಲ್ಲ ಸೇವೆಗಳ ಜತೆಗೆ ಮುಂದಿನ ಸೇವೆಗಳ ಗುರಿಯನ್ನೂ ಹೊಂದಿದ್ದಾರೆ. ಎಸ್ಸೆಸ್ಸೆಲ್ಸಿ- ಪಿಯುಸಿ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಭಯ ಹೋಗಲಾಡಿಸಲು ಮಾನಸಿಕ ಸ್ಥೈರ್ಯ ಕಾರ್ಯಕ್ರಮ ನಡೆಸುವುದು, ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ತಜ್ಞರಿಂದ ಸ್ಕಿಲ್ ಡೆವಲಪ್​ವೆುಂಟ್ ತರಬೇತಿ ಕೊಡಿಸುವುದು, ರೈತರಿಗೆ ಸಾವಯವ ಕೃಷಿ ಮತ್ತು ವಾಣಿಜ್ಯ ಬೆಳೆಗಳನ್ನು ಬೆಳೆಯುವಂತೆ ಪ್ರೋತ್ಸಾಹಿಸಲು ತರಬೇತಿ ನೀಡುವುದು… ಇವೆಲ್ಲ ಎಚ್.ಜೆ.ಹನುಮಂತಯ್ಯ ಶೆಟ್ಟಿ ಅವರ ಮುಂದಿನ ಯೋಜನೆಗಳು.

    ಸರ್ವ ಕ್ಷೇಮದ ಡಾ.ವಿವೇಕ ಉಡುಪರಿಗೆ ‘ವಿಜಯರತ್ನ’ ಪ್ರಶಸ್ತಿ: ಸಮಾಜಮುಖಿ ಸಾಧಕರಿಗೆ ವಿಜಯವಾಣಿ-ದಿಗ್ವಿಜಯ ಗೌರವ

    ರೈಸ್ ಡಾಕ್ಟರ್ ಶಶಿಕುಮಾರ್ ತಿಮ್ಮಯ್ಯಗೆ ವಿಜಯರತ್ನ: ವಿಜಯವಾಣಿ, ದಿಗ್ವಿಜಯ ನ್ಯೂಸ್ ವಾಹಿನಿಯ ಪ್ರತಿಷ್ಠಿತ ಗೌರವ ಪ್ರದಾನ

    ಅನ್ನದಾಸೋಹ ಸೇವೆಗೆ ವಿಜಯವಾಣಿ- ದಿಗ್ವಿಜಯ ವಾಹಿನಿಯ ಪ್ರತಿಷ್ಠಿತ ಗೌರವ ಪ್ರದಾನ: ಸಮಾಜಸೇವಕಿ ಡಾ.ಸುನೀತಾಗೆ ‘ವಿಜಯರತ್ನ’ ಗರಿ

    ಯೋಗಾತ್ಮ ಶ್ರೀಹರಿಗೆ ಒಲಿದ ‘ವಿಜಯರತ್ನ’ ಗರಿ: ವಿಜಯವಾಣಿ, ದಿಗ್ವಿಜಯ ನ್ಯೂಸ್​ ವಾಹಿನಿಯ ಪ್ರತಿಷ್ಠಿತ ಗೌರವ ಪ್ರದಾನ

    ಶಿಕ್ಷಣಪ್ರೇಮಿ ಸೂರಿಬಾಬುಗೆ ವಿಜಯರತ್ನ ಗರಿ: ವಿಜಯವಾಣಿ, ದಿಗ್ವಿಜಯ ನ್ಯೂಸ್​ ವಾಹಿನಿಯ ಪ್ರತಿಷ್ಠಿತ ಗೌರವ ಪ್ರದಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts