More

    ಮಕ್ಕಳ ಅಶ್ಲೀಲ ವಿಡಿಯೋ ಶೇರ್ ಮಾಡಿದ ವಿಜಯಪುರದ 7 ಯುವಕರ ವಿರುದ್ಧ ದೂರು ದಾಖಲು

    ವಿಜಯಪುರ: ಗುಮ್ಮಟ ನಗರಿ ವಿಜಯಪುರದಲ್ಲಿ ಅಶ್ಲೀಲ ವಿಡಿಯೋ ನೋಡುವವರ ಹಾವಳಿ ಹೆಚ್ಚಾಗಿದೆ. ಅದರಲ್ಲೂ ನಗರದ ಪ್ರಭಾವಿಗಳು ಹಾಗೂ ಪ್ರತಿಷ್ಠಿತರ ಮಕ್ಕಳಿಂದಲೇ ಅಶ್ಲೀಲ ವಿಡಿಯೋಗಳ ವೀಕ್ಷಣೆ ಅತಿಯಾಗಿದೆ ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

    2015ರ ಜುಲೈನಲ್ಲಿ ದೇಶದ ಉನ್ನತ ನ್ಯಾಯಾಲಯ ಸುಪ್ರೀಂಕೋರ್ಟ್​ ತೀರ್ಪು ನೀಡಿದ್ದು, ನಾಲ್ಕು ಗೋಡೆಗಳ ಮಧ್ಯೆ ಅಶ್ಲೀಲ ವಿಡಿಯೋ ವೀಕ್ಷಣೆ ಮಾಡುವುದು ಅಪರಾಧವಲ್ಲ ಎಂದು ಹೇಳಿದೆ. ಆದರೆ, ಅಶ್ಲೀಲ ವಿಡಿಯೋ ತಯಾರಿಸುವುದು, ಉತ್ತೇಜಿಸುವುದು ಮತ್ತು ವಿತರಿಸುವುದನ್ನು ಅಪರಾಧವೆಂದು ಪರಿಗಣಿಸಲಾಗಿದೆ. ಅದರಲ್ಲೂ ಮಕ್ಕಳ ಅಶ್ಲೀಲ ವಿಡಿಯೋವನ್ನು ನಾಲ್ಕು ಗೋಡೆಗಳ ಮಧ್ಯೆ ನೋಡುವುದು ಕೂಡ ಮಹಾಪರಾಧವಾಗಿದೆ.

    ವಿಜಯಪುರದಲ್ಲಿ ಮಕ್ಕಳ‌ ಅಶ್ಲೀಲ ದೃಶ್ಯಗಳನ್ನು ನೋಡುತ್ತಿರುವ ಯುವಕರ ಸಂಖ್ಯೆ ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಆದರೆ, ಒಂದನ್ನು ಸ್ಪಷ್ಟವಾಗಿ ನಾವಿಲ್ಲಿ ಅರಿತುಕೊಳ್ಳಬೇಕು. ಅದೇನೆಂದರೆ, ಪೋರ್ನ್ ವೆಬ್​​ಸೈಟ್‌ಗಳಲ್ಲಿ ಮಕ್ಕಳ ಅಶ್ಲೀಲ ದೃಶ್ಯಗಳನ್ನು ನೋಡಿದರೆ ನೀವು ಕಂಬಿ ಎಣಿಸಬೇಕಾಗುತ್ತದೆ. ಮಕ್ಕಳ ಪೋರ್ನ್ ವಿಡಿಯೋ ಡೌನ್‌ಲೋಡ್ ಹಾಗೂ ಶೇರ್ ಮಾಡುವವರ ಮೇಲೆ ನ್ಯಾಶನಲ್ ಕ್ರೈಂ ರೆಕಾರ್ಡ್ ಬ್ಯೂರೋ (ಎನ್​ಸಿಆರ್​ಬಿ) ಹದ್ದಿನ ಕಣ್ಣಿಟ್ಟಿದೆ.

    ಚೈಲ್ಡ್ ಪೋರ್ನ್ ವಿಡಿಯೋ ಡೌನ್‌ಲೋಡ್ ಮಾಡಿ, ಶೇರ್ ಮಾಡಿದ್ದ 7 ಜನರ ವಿರುದ್ಧ ಎನ್​ಸಿಆರ್​ಬಿ ಪ್ರಕರಣ ದಾಖಲಿಸಿಕೊಂಡಿದೆ. ಎನ್​ಸಿಆರ್​ಬಿಗೆ ಅಮೆರಿಕದ NCMEC ( National Center for Missing & Exploited Children) ಸಂಸ್ಥೆ ವರದಿ ಮಾಡಿತ್ತು. ಅಂದಹಾಗೆ NCMEC ಸಂಸ್ಥೆ ವಿಶ್ವಾದ್ಯಂತ ಚೈಲ್ಡ್ ಪೋರ್ನೊಗ್ರಫಿ ಕುರಿತಾಗಿ ನಿಗಾ ಇಡುತ್ತದೆ. NCMEC ನೀಡಿದ ಮಾಹಿತಿ ಆಧಾರದ ಮೇಲೆ ಚೈಲ್ಡ್ ಪೋರ್ನ್ ವಿಡಿಯೋ ಡೌನ್‌ಲೋಡ್ ಮಾಡಿ, ಶೇರ್ ಮಾಡಿದ ವಿಜಯಪುರದ 7 ಜನರ ವಿರುದ್ಧ ದೂರು ದಾಖಲಾಗಿದೆ.

    ಏಳು ಆರೋಪಿಗಳು ಕೂಡ ವಿಜಯಪುರದ ಹೈಪ್ರೋಫೈಲ್ ವ್ಯಕ್ತಿಯ ಮಕ್ಕಳು ಎನ್ನುವ ಮಾಹಿತಿ ಇದೆ. ಸದ್ಯ ಈ ಪ್ರಕರಣವನ್ನು ಬೆಂಗಳೂರು ಸಿಓಡಿ ಅಧಿಕಾರಿಗಳಿಗೆ NCRB ಹಸ್ತಾಂತರಿಸಿದ್ದು, ಬೆಂಗಳೂರು ಸಿಓಡಿ ಅಧಿಕಾರಿಗಳು ಸಿಇಎನ್​ ಠಾಣಾ ಪೊಲೀಸರಿಗೆ ಮಾಹಿತಿ ರವಾನಿಸಿದೆ. ಪ್ರಕರಣ ದಾಖಲಿಸಿರುವ ಸಿಇಎನ್​ ಠಾಣಾ ಪೊಲೀಸರು 7 ಜನರ ಬಂಧನಕ್ಕೆ ಬಲೆ ಬೀಸಿದೆ. ಇತ್ತ ಮಹಾರಾಷ್ಟ್ರದ ಪುಣೆಯಲ್ಲಿ ಚೈಲ್ಡ್ ಪೋರ್ನ್ ವಿಡಿಯೋ ಡೌನ್ಲೋಡ್ ಮತ್ತು ಶೇರ್​ ಮಾಡಿದ 552 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

    ಬಿಜೆಪಿಯಲ್ಲಿ ನಿಮ್ಮನ್ನು ಮುಗಿಸಲು ಷಡ್ಯಂತ್ರ ನಡೆಯುತ್ತಿದೆಯೇ? ಮಾಜಿ ಸಿಎಂ ಬಿಎಸ್​ವೈ ಕೊಟ್ಟ ಉತ್ತರ ಹೀಗಿತ್ತು…

    ಅನೈತಿಕ ಸಂಬಂಧ ಸಾಬೀತಿಗೆ 3ನೇ ವ್ಯಕ್ತಿಯ ಮಾಹಿತಿ ಪಡೆಯುವಂತಿಲ್ಲ: ಹೈಕೋರ್ಟ್​ ಆದೇಶ

    ಪರಪುರುಷರ ಜೊತೆ ಸಹಕರಿಸುವಂತೆ ಹಿಂಸೆ ಮಾಡ್ತಿದ್ರು… ಕಣ್ಣೀರಿಡುತ್ತಲೇ ತಾನು ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಲಕ್ಷ್ಮೀದೇವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts