More

    ‘ಸುಳ್ಳುಸುದ್ದಿ’ ಬಹುದೊಡ್ಡ ಸವಾಲು

    ವಿಜಯಪುರ: ಮಾಧ್ಯಮ ಲೋಕದಲ್ಲಿ ತಪ್ಪು ಮಾಹಿತಿ ಅಥವಾ ಸುಳ್ಳು ಸುದ್ದಿ ಎಂಬುದು ಬಹುದೊಡ್ಡ ಸವಾಲಾಗಿ ಪರಿಣಮಿಸಿದ್ದು ಈ ಸವಾಲನ್ನು ಎದುರಿಸಲು ಪತ್ರಕರ್ತರೆಲ್ಲರೂ ಸನ್ನದ್ಧರಾಗಬೇಕು ಎಂದು ಅಮೆರಿಕ ಮೂಲದ ಚೆನ್ನೈನ ಅಮೆರಿಕನ್ ಕೌನ್ಸಲೇಟ್ ಜನರಲ್‌ನ ಪಬ್ಲಿಕ್ ಡಿಪ್ಲೋಮಸಿ ಆ್ಯಂಡ್ ಪಬ್ಲಿಕ್ ಅೆರ್ಸ್‌ನ ಕಾನ್ಸುಲ್ ಲಾರೆನ್ ಲವ್‌ಲೇಸ್ ಹೇಳಿದರು.
    ನಗರದ ಮಹಿಳಾ ವಿವಿ ಜ್ಞಾನಶಕ್ತಿ ಆವರಣದ ಕನ್ನಡ ಅಧ್ಯಯನ ಸಭಾಂಗಣದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಮಹಿಳಾ ಪತ್ರಕರ್ತೆಯರು: ಸಮಸ್ಯೆಗಳು- ಸವಾಲುಗಳು ಮತ್ತು ಅವಕಾಶಗಳು’ ಕುರಿತ ಎರಡು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ಮಹಿಳಾ ಪತ್ರಕರ್ತರು, ಸಂಪಾದಕರು, ಮಾಧ್ಯಮ ವೃತ್ತಿಪರರು ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಈ ವಿಚಾರ ಸಂಕಿರಣವನ್ನು ಆಯೋಜನೆ ಮಾಡಿದ್ದಕ್ಕಾಗಿ ನನಗೆ ಸಂತಸವಾಗಿದೆ. ಇಂತಹ ವಿಚಾರ ಸಂಕಿರಣಗಳು ನಮ್ಮಲ್ಲಿರುವ ಅನೇಕ ತೊಡಕುಗಳನ್ನು ಹೊಡೆದು ಹಾಕುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
    ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಪ್ರೊ.ಎನ್.ಉಷಾರಾಣಿ ಮಾತನಾಡಿ, ಮಾಧ್ಯಮಗಳು ಮಹಿಳೆಯರನ್ನು ಲೈಂಗಿಕ ಬೊಂಬೆಗಳಂತೆ ರೂಪಿಸಿವೆ ಮತ್ತು ಪುರುಷ ಪ್ರಾಬಲ್ಯದ ಸಮಾಜದಲ್ಲಿ ಅವರನ್ನು ಸರಕುಗಳಾಗಿ ವ್ಯಾಪಾರ ಮಾಡಿವೆ ಎಂದು ವಿಷಾದ ವ್ಯಕ್ತಪಡಿಸಿದರು.
    ಮಹಿಳೆಯರು ಲಿಂಗ ತಾರತಮ್ಯ, ಶೋಷಣೆ ಮತ್ತು ಅಸಮಾನತೆಯ ವಿರುದ್ಧ ಹೋರಾಡುತ್ತಲೇ ಇದ್ದಾರೆ. ಸುದ್ದಿಯಲ್ಲಿ ಮಹಿಳೆಯರ ಉಪಸ್ಥಿತಿಯು ಮುಖ್ಯವಾಹಿನಿಗೆ ಸೇರಲು ಅಡೆತಡೆಗಳನ್ನು ಎದುರಿಸುತ್ತಿರುವ ಸ್ಥಿತಿಯಲ್ಲಿದೆ ಎಂದು ಅವರು ಹೇಳಿದರು.
    ಮಾಧ್ಯಮದಲ್ಲಿ ಮಹಿಳೆಯರ ಉಪಸ್ಥಿತಿಯು ತುಲನಾತ್ಮಕವಾಗಿ ಕಡಿಮೆಯಾಗಿದೆ. ದೇಶದಲ್ಲಿ ಇತ್ತೀಚೆಗೆ ನಡೆದ ಆಂದೋಲನಗಳು ಮತ್ತು ಗಲಭೆಗಳನ್ನು ಒಳಗೊಂಡ ಘಟನೆಗಳು ಮಹಿಳಾ ಪತ್ರಕರ್ತರಿಗೆ ಬೆದರಿಸುವಿಕೆ, ಹಿಂಸೆ ಮತ್ತು ನಿಂದನೆಯನ್ನು ಅನುಭವಿಸುತ್ತಿರುವುದರಿಂದ ಅವರಿಗೆ ತರಬೇತಿ ನೀಡುವ ಅಗತ್ಯವಿದೆ ಎಂದರು.
    ಇದೇ ವೇಳೆ ಏಷ್ಯನ್ ಕಾಲೇಜ್ ಆಫ್​ ಜರ್ನಲಿಸಂ ಅವರ ಸಹಭಾಗಿತ್ವದಲ್ಲಿ ಪತ್ರಕರ್ತರ ಕೈಪಿಡಿ ಎಂಬ ಗ್ರಂಥವನ್ನು ಬಿಡುಗಡೆ ಮಾಡಲಾಯಿತು.

    ಮಹಿಳಾ ವಿವಿ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಅಧ್ಯಕ್ಷತೆವಹಿದ್ದರು. ವಿವಿ ಕುಲಸಚಿವೆ ಪ್ರೊ. ಆರ್.ಸುನಂದಮ್ಮ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ, ಹೇಮಲತಾ, ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂದೀಪ, ವಿವಿಧ ವಿಭಾಗದ ಮುಖ್ಯಸ್ಥರು, ಬೋಧಕ, ಭೋದಕೇತರ ಸಿಬ್ಬಂದಿ, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು, ವಿವಿಧ ಜಿಲ್ಲೆಯ ಪದವಿ ಕಾಲೇಜುಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    ‘ಸುಳ್ಳುಸುದ್ದಿ’ ಬಹುದೊಡ್ಡ ಸವಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts