More

  ಸರ್ಕಾರಿ ಸೌಲಭ್ಯ ಪಡೆದು ಯಶಸ್ಸು ಸಾಧಿಸಿ

  ವಿಜಯಪುರ: ಡಿಜಿಟಲ್ ಇಂಡಿಯಾದ ಈ ಯುಗದಲ್ಲಿ ಎಲ್ಲ ವಿದ್ಯಾರ್ಥಿಗಳು ಸರ್ಕಾರ ವಿತರಿಸಿರುವ ಲ್ಯಾಪ್‌ಟಾಪ್ ಪಡೆದು ಒಳ್ಳೆಯ ವಿದ್ಯಾರ್ಜನೆ ಮಾಡಿ, ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
  ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಶಾರದಾಭವನದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಿ ಅವರು ಮಾತನಾಡಿದರು.
  ಪ್ರಾಂಶುಪಾಲ ಡಾ.ಆರ್.ಎಸ್. ಕಲ್ಲೂರಮಠ ಅಧ್ಯಕ್ಷತೆ ವಹಿಸಿ, ರಾಜ್ಯ ಸರ್ಕಾರ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಪರವಾದ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅದರಲ್ಲಿ ಉಚಿತ ಲ್ಯಾಪ್‌ಟಾಪ್ ವಿತರಣೆಯು ಒಂದಾಗಿದೆ. ಅದರ ಪೂರ್ಣ ಪ್ರಮಾಣದ ಉಪಯೋಗವನ್ನು ವಿದ್ಯಾರ್ಥಿಗಳು ಮಾಡಿಕೊಳ್ಳಬೇಕೆಂದು ಹೇಳಿದರು.
  ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯ ಎಸ್.ಎಸ್. ಹಿರೇಮಠ, ಜಿ.ಆರ್. ಕುಲಕರ್ಣಿ, ಲಕ್ಷ್ಮಿ ಕನ್ನೊಳ್ಳಿ, ಪ್ರೊ.ದಾವಲಸಾ ಪಿಂಜಾರ್, ಪ್ರೊ.ರಮೇಶ ಬಳ್ಳೊಳ್ಳಿ, ಡಾ. ಎಸ್.ಎಸ್. ಇನಾಮದಾರ್, ಪ್ರೊ. ಎಸ್.ಎ. ಕುರುಂದವಾಡ, ಡಾ.ನಾರಾಯಣ ಬಗಲಿ, ಡಾ.ಶ್ರೀಶೈಲ ಪೂಜಾರಿ, ಡಾ.ಶ್ರೀದೇವಿ ಜತ್ತಿ ಮತ್ತಿತರರು ಉಪಸ್ಥಿತರಿದ್ದರು. ಪ್ರೊ.ಚಿದಾನಂದ ಆನೂರ ಸ್ವಾಗತಿಸಿದರು. ಡಾ.ರಾಜಶೇಖರ ಬೆನಕನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಎಂ.ಆರ್. ಜೋಶಿ ನಿರೂಪಿಸಿದರು. ಡಾ.ಭಾರತಿ ಹೊಸಟ್ಟಿ ವಂದಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts