More

    ಹೆಣ್ಣು ಹೆದರುವ ಅಭ್ಯಾಸ ಬಿಡಬೇಕು

    ವಿಜಯಪುರ: ಹೆಣ್ಣಿನಲ್ಲಿ ಮೊದಲು ಎಲ್ಲವನ್ನು ಎದುರಿಸುವ ಶಕ್ತಿ ಇರಬೇಕು. ಹೆದರುವ ಅಭ್ಯಾಸ ಬಿಟ್ಟು ಬದುಕಿದಾಗ ಮಾತ್ರ ನಾವು ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದು ಖ್ಯಾತ ಸಾಹಿತಿ ಇಂದುಮತಿ ಲಮಾಣಿ ಹೇಳಿದರು.

    ನಗರ ಹೊರವಲಯದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಮಹಿಳಾ ದಿನಾಚಾರಣೆ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ನಮಗೆ ಏನೇ ತೊಂದರೆಗಳಾದರೂ ಅದನ್ನು ನಾಲ್ಕು ಗೋಡೆಗಳ ನಡುವೆ ಮುಚ್ಚಿ ಬಿಡಲು ಪ್ರಯತ್ನಸುತ್ತೇವೆ. ಆ ಕೆಟ್ಟ ಚಾಳಿಯನ್ನು ಮೊದಲು ಬಿಡಬೇಕು.

    ಮಗಾಗುವಂತಹ ಅನ್ಯಾಯಗಳನ್ನು ನಾವು ವಿರೋಧಿಸಲು ಕಲಿಯಬೇಕು. ಅವುಗಳನ್ನು ಬೆಳಕಿಗೆ ತಂದು ಹೋರಾಟ ಮಾಡುವ ಧೈರ್ಯ ಮಾಡಬೇಕು. ನಮ್ಮ ಕೈಯಲ್ಲಿ ಆಗುವುದಿಲ್ಲ ಎಂದು ಕೈ ಕಟ್ಟಿ ಕುಳಿತುಕೊಂಡರೆ ಬದುಕು ನಡೆಸುವುದು ಕಷ್ಟವಾಗಲಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲಾ ಮಾತನಾಡಿ, ಕಾವ್ಯ, ಕವಿತೆ ನಮ್ಮ ಭಾವನೆಗಳಿಗೆ ಪರಿಣಾಮ ಬೀರುವಂತಹ ಒಂದು ಪ್ರಮುಖ ಮಾಧ್ಯಮ. ಕವಿತೆ, ಕಾವ್ಯಗಳು ನಾವು ಭಿನ್ನವಾಗಿ ಬದುಕುವುದಕ್ಕೆ, ಭಿನ್ನವಾಗಿ ವಿಚಾರ ಮಾಡುವುದಕ್ಕೆ ಪ್ರೇರೇಪಿಸುತ್ತವೆ. ಹೀಗಾಗಿ ನಾವು ಸದಾ ಓದುವುದಕ್ಕೆ, ಬರೆಯುವುದಕ್ಕೆ ಹೆಚ್ಚು ಒತ್ತು ಕೊಡಬೇಕು. ಅದು ನಮ್ಮಲ್ಲಿರುವ ಚಿಂತನೆಗಳನ್ನು ಪ್ರಕಾಶಮಾನ ಮಾಡಲಿಕ್ಕೆ ಸಹಕಾರಿಯಾಗುತ್ತವೆ ಎಂದರು.

    35ಕ್ಕೂ ಹೆಚ್ಚು ಕವಯಿತ್ರಿಯರು ಕವನ ವಾಚಿಸಿದರು. ಕನ್ನಡ ಅಧ್ಯಯನ ವಿಭಾಗದ ಜ್ಯೋತಿ ಮೇಟಿ ನಿರೂಪಿಸಿದರು. ನಾರಾಯಣ ಪವಾರ ಸ್ವಾಗತಿಸಿದರು. ಹಿಂದಿ ವಿಭಾಗದ ಮುಖ್ಯಸ್ಥ ಡಾ.ರಾಜು ಬಾಗಲಕೋಟ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts