More

    ಸರ್ವತೋಮುಖ ಬೆಳವಣಿಗೆಗೆ ಶ್ರಮಿಸೋಣ

    ವಿಜಯಪುರ: ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ನೆರವಾಗುವ ಮೂಲಕ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸೋಣ ಎಂದು ವಿಪ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ ಹೇಳಿದರು.
    ನಗರದ ವನಶ್ರೀ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಗಾಣಿಗ ಸಮಾಜದ 11ನೇ ವಾರ್ಷಿಕೋತ್ಸವ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಗಾಣಿಗ ಸಮಾಜ ಮೊದಲು ಆರ್ಥಿಕವಾಗಿ, ಸಾಮಾಜಿಕವಾಗಿ ಬೆಳೆಯಬೇಕಾದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಸಮಾಜದ ಸರ್ವತೋಮುಖ ಏಳಿಗೆಗೆ ಶಿಕ್ಷಣವೇ ಸಹಕಾರಿ. ಬರೀ ಶಿಕ್ಷಣವೂ ಮಾನದಂಡವಲ್ಲ, ಜೊತೆಗೆ ಕೃಷಿ ಮತ್ತಿತರ ಕ್ಷೇತ್ರದಲ್ಲೂ ಸಾಧನೆ ಮಾಡಬೇಕೆಂದರು.

    ಗದಗ ಜಿಲ್ಲೆಯ ಹಿರಿಯ ಸಾಹಿತಿ ವೀರನಗೌಡ ಮರಿಗೌಡರ ಮಾತನಾಡಿ, ಗಾಣಿಗ ಸಮಾಜ ಪುರಾತನ ಕಾಲದಿಂದಲೂ ತನ್ನದೇಯಾದ ಇತಿಹಾಸ ಹೊಂದಿದೆ. ಗಾಣಿಗರು ಶ್ರೇಷ್ಠ ಶ್ರಮ ಜೀವಿಗಳು. ಆದ್ದರಿಂದ ನಮ್ಮ ಸಮುದಾಯ ಆರ್ಥಿಕವಾಗಿ ಬೆಳೆಯಬೇಕಾದರೆ ಅನ್ಯ ಜಾತಿಯ ಸಹಕಾರ ಬೆಂಬಲ ಅಗತ್ಯ ಎಂದರು.

    ಬೆಳಗಾವಿ ಬಿಜೆಪಿ ಯುವ ಘಟಕದ ಅಧ್ಯಕ್ಷ ಚಿದಾನಂದ ಸವದಿ, ಮಾಜಿ ಶಾಸಕ ರಮೇಶ ಭೂಸನೂರ, ಬಿ.ಜಿ. ಪಾಟೀಲ (ಹಲಸಂಗಿ), ಮಲ್ಲಿಕಾರ್ಜುನ ಲೋಣಿ ಮಾತನಾಡಿದರು. ಸಮಾಜದ ಅಧ್ಯಕ್ಷ ಶರಣಬಸಪ್ಪ ಅರಕೇರಿ ಅಧ್ಯಕ್ಷತೆ ವಹಿಸಿದ್ದರು. ಗಾಣಿಗ ಸಮಾಜದ ಪೀಠಾಧ್ಯಕ್ಷ ಡಾ. ಜಯಬಸವಕುಮಾರ ಸ್ವಾಮೀಜಿ ಹಾಗೂ ಕೊಲ್ಹಾರದ ಕಲ್ಲಿನಾಥ ಶ್ರೀ ಸಾನ್ನಿಧ್ಯ ವಹಿಸಿದ್ದರು. ಮಲಕಪ್ಪ ಮೊಸಲಗಿ, ನಿಂಗರಾಜ ಬಗಲಿ, ಸಿದ್ದಲಿಂಗ ಹಂಜಗಿ, ಮಲ್ಲಣ್ಣ ಮನಗೂಳಿ, ಎಂ.ಎನ್. ಬಿಸ್ಟಗೊಂಡ, ಪರಮಾನಂದ ಯಾಳವಾರ, ಪ್ರಕಾಶ ಬಗಲಿ, ಬಂಡೆಪ್ಪ ತೇಲಿ, ಮಲ್ಲಿಕಾರ್ಜುನ ಬೆಳ್ಳುಬ್ಬಿ, ಮಹಾದೇವ ಆಹೇರಿ, ಬಿ.ಪಿ. ಸರನಾಡಗೌಡ, ಆರ್.ಎನ್. ಸಜ್ಜನ, ಎಸ್.ಜಿ. ಪಾಟೀಲ, ಅಶೋಕ ನ್ಯಾಮಗೌಡ ಮತ್ತಿತರರಿದ್ದರು. ಡಾ. ಮಲ್ಲಿಕಾರ್ಜುನ ಮೇತ್ರಿ ಸ್ವಾಗತಿಸಿದರು. ಎಸ್.ಬಿ. ಪುಟ್ಟಿ ನಿರೂಪಿಸಿದರು. ಎಂ.ಡಿ. ಹೆಬ್ಬಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts