More

    ರಾಜ್ಯದಲ್ಲಿ ಡ್ರಗ್ಸ ಮಾಫಿಯಾ ಮಟ್ಟಹಾಕಿ

    ವಿಜಯಪುರ: ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡವರನ್ನು ತಕ್ಷಣದಿಂದಲೇ ಬಂಧಿಸಿ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದ ಸಿದ್ಧೇಶ್ವರ ದೇವಸ್ಥಾನ ಹತ್ತಿರ ಬುಧವಾರ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಯಿತು.
    ಅಭಿಯಾನಕ್ಕೆ ಚಾಲನೆ ನೀಡಿದ ಬುರಾಣಪುರದ ಯೋಗೇಶ್ವರಿ ಮಾತಾಜಿ ಮಾತನಾಡಿ, ಸಮಾಜದಲ್ಲಿ ಡ್ರಗ್ಸ್ ಮಾಫಿಯಾ ಹೆಚ್ಚಾಗಿದೆ. ಇದರಿಂದ ಸಾಮಾಜಿಕ ಸ್ವಾಸ್ಥೃ ಹದಗೆಡುತ್ತಿದೆ. ಯುವ ಪಡೆ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಸರ್ಕಾರ ಡ್ರಗ್ಸ್ ದಂಧೆಯನ್ನು ಮಟ್ಟಹಾಕಬೇಕೆಂದು ಆಗ್ರಹಿಸಿದರು.
    ಸಿಪಿಐ ರವೀಂದ್ರ ನಾಯ್ಕೋಡಿ ಮಾತನಾಡಿ, ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅವಿರತ ಶ್ರಮಿಸುತ್ತಿದೆ. ಈಗಾಗಲೇ ಇಂಥ ಹಲವು ಪ್ರಕರಣಗಳನ್ನು ಭೇದಿಸಿದೆ. ಎಲ್ಲಾದರೂ ಇಂಥ ದಂಧೆ ಕಂಡು ಬಂದರೆ ಕೂಡಲೇ ಪೊಲೀಸ್ ಇಲಾಖೆ ಗಮನಕ್ಕೆ ತರಬೇಕೆಂದರು.
    ರಾಜ್ಯ ಸಹ ಕಾರ್ಯದರ್ಶಿ ಸಚಿನ್ ಕುಳಗೇರಿ ಮಾತನಾಡಿ, ಸ್ಯಾಂಡಲ್‌ವುಡ್‌ನೊಂದಿಗೆ ನಂಟಿರುವ ಬೃಹತ್ ಡ್ರಗ್ಸ್ ಜಾಲವನ್ನು ಎನ್‌ಸಿಬಿ ಅಧಿಕಾರಿಗಳು ಭೇದಿಸಿರುವ ಬಗ್ಗೆ ಮತ್ತು ಡ್ರಗ್ಸ್ ಜಾಲದ ಹಿಂದೆ ಇರುವ ಪ್ರತಿಷ್ಠಿತ ಪ್ರಭಾವಿಗಳು, ಸಿನಿಮಾ ನಟ-ನಟಿಯರು, ರಾಜಕಾರಣಿ ಮಕ್ಕಳ ಬಗ್ಗೆ ಪ್ರತಿದಿನ ವರದಿಯಾಗುತ್ತಿದೆ. ಸಮಾಜಕ್ಕೆ ಮಾದರಿಯಾಗಬೇಕಿದ್ದ ಇವರೆಲ್ಲ ಮಾದಕ ಚಟುವಟಿಕೆಗೆ ಅಂಟಿಕೊಂಡಿದ್ದು ಖೇದಕರ. ಇಂಥವರನ್ನು ಮಟ್ಟಹಾಕಬೇಕೆಂದು ಒತ್ತಾಯಿಸಿದರು.
    ನಗರ ಉಪಾಧ್ಯಕ್ಷ ಅಮಿತ ಬಿರಾದಾರ ಮಾತನಾಡಿ, ರಾಜ್ಯ ಸರ್ಕಾರ ಡ್ರಗ್ಸ್ ನಿಯಂತ್ರಣಕ್ಕೆ ಕಠಿಣ ಕಾನೂನು ರೂಪಿಸಿ ಐತಿಹಾಸಿಕ ನಿರ್ಧಾರ ತೆಗೆದುಕೊಂಡು ರಾಜ್ಯವನ್ನು ಡ್ರಗ್ಸ್ ಮುಕ್ತ ಮಾಡಬೇಕಾಗಿದೆ ಎಂದರು.
    ನೂರಾರು ಯುವಕರು, ಸಾರ್ವಜನಿಕರು ಸಹಿ ಮಾಡುವುದರ ಮೂಲಕ ಡ್ರಗ್ಸ್ ಮಾಫಿಯಾದಲ್ಲಿ ತೊಡಗಿರುವ ಆರೋಪಿಗಳನ್ನು ಬಂಧಿಸುವಂತೆ ಸಹಿ ಅಭಿಯಾನಕ್ಕೆ ಬೆಂಬಲ ಸೂಚಿಸಿದರು. ನಗರ ಸಂಘಟನಾ ಕಾರ್ಯದರ್ಶಿ ಬ್ರಹ್ಮಾನಂದ ಚಿತ್ರಗಾರ, ನಗರ ಕಾರ್ಯದರ್ಶಿ ಐಶ್ವರ್ಯ ಕುಲಕರ್ಣಿ, ಸುದೀಪ, ಸಿದ್ದು ಪತ್ತಾರ, ಮಾನ್ವಿಕಾ ಗುಗ್ಗರಿ, ಮಂಜುನಾಥ ಹಟ್ಟಿ, ಅರುಣ ನಾಯಕ, ಅಕ್ಷಯ ಯಾದವಾಡ, ಸೋಮನಾಥ ಕುಂಬಾರ, ಶ್ರೀಶೈಲ ಕಾಳೆ, ವಿಜಯಕುಮಾರ ಕೊಟ್ರಶೆಟ್ಟಿ, ಶಿವು ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts